ಶಿವಮೊಗ್ಗ ಮಹಾನಗರ ಪಾಲಿಕೆ ವಲಯ ಕಚೇರಿ–2ರ ಪಾರ್ಕಿಂಗ್ ನಿಲ್ದಾಣದಲ್ಲಿ ಗಂಭೀರ ಅವ್ಯವಸ್ಥೆ ಉಂಟಾಗಿದ್ದು, ಕಚೇರಿ ಅಧಿಕಾರಿ ದ್ವಿಚಕ್ರ ವಾಹನಗಳನ್ನು ಉದ್ದೇಶಪೂರ್ವಕವಾಗಿ ರಸ್ತೆಯಲ್ಲೇ ನಿಲ್ಲಿಸಲು ಆದೇಶ ನೀಡುತ್ತಿರುವ ಕಾಂದಾಯ ಅಧಿಕಾರಿ ವಿರೂಪಾಕ್ಷಪ್ಪ ಎಂ. ಪೂಜಾರ್ ಅವರ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಕಚೇರಿ ಎದುರೇ ವಿಶಾಲ ಖಾಲಿ ಜಾಗ ಇದ್ದರೂ, ಪಾರ್ಕಿಂಗ್ ಗೇಟ್‌ಗೆ ಬೀಗ ಜಡಿದು “ಇಲ್ಲಿ ವಾಹನ ನಿಲ್ಲಿಸಬಾರದು” ಎಂಬ ನಾಮಫಲಕ ಅಳವಡಿಸಿರುವುದು ಅಚ್ಚರಿಯ ಸಂಗತಿಯಾಗಿದೆ.
ಕಾರಣ ಕೇಳಿದ ಸಾರ್ವಜನಿಕರಿಗೆ, “ಕಚೇರಿಗೆ ಬರುವವರಿಗಿಂತ ಬೇರೆವರ ವಾಹನಗಳೇ ಹೆಚ್ಚು ನಿಲ್ಲಿಸುತ್ತವೆ” ಎಂಬ ಅವಿವೇಕಿ ಉತ್ತರ ನೀಡಲಾಗಿದೆ.
ಖಾಸಗಿ ಕಚೇರಿಗಳಿಗೆ ಸ್ವಂತ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವೆಂದು ಹೇಳುವ ಮಹಾನಗರ ಪಾಲಿಕೆ, ತನ್ನದೇ ಕಚೇರಿಯಲ್ಲಿ ಈ ರೀತಿಯ ಹುಚ್ಚಾಟ ನಡೆಯುತ್ತಿದ್ದರೂ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ.
ಕಚೇರಿ ಕೆಲಸಕ್ಕೆ ಬರುವ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಾ ರಸ್ತೆಯಲ್ಲಿಯೆ ತಮ್ಮ ವಾಹನಗಳನ್ನು ನೀಲ್ಲಿಸಿ ಬಂದು ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ
ಈ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಿ, ಸಂಬಂಧಿಸಿದ ಅಧಿಕಾರಿಗೆ ಬುದ್ದಿ ಹೇಳಬೇಕು ಎಂದು ಸಾರ್ವಜನಿಕರು ಆಯುಕ್ತರಿಗೆ ಮನವಿ ಮಾಡಿದ್ದಾರೆ.








