ಶಿವಮೊಗ್ಗ: ಜಿಲ್ಲಾ ಮಟ್ಟದಲ್ಲಿ ಸದಾ ಸಂಘಟನಾ ಬಲವನ್ನು ಉಳಿಸಿಕೊಂಡಿರುವ ಭಾರತೀಯ ಜನತಾ ಪಕ್ಷವು ಹೊಸ ನೇಮಕಾತಿಗಳ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ.
ಸಂಘಟನೆಯ ಚುರುಕಿನ ಕಾರ್ಯವೈಖರಿ, ವಿಸ್ತರಣೆ ಮತ್ತು ಕೌಶಲ್ಯಯುತ ತಂಡ ನಿರ್ಮಾಣದ ಉದ್ದೇಶದಿಂದ ಹಲವು ಪ್ರಮುಖ ಮುಖಂಡರಿಗೆ ಹೊಸ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರಕೋಷ್ಠ ವಿಭಾಗದ ಜಿಲ್ಲಾ ಸಂಯೋಜಕರಾಗಿ ಇತಿಹಾಸದಲ್ಲೇ ಅತ್ಯಂತ ಫಲಪ್ರದ ಕಾರ್ಯನಿರ್ವಹಣೆ ತೋರಿದ ಶ್ರೀ ಸಂತೋಷ ಬಳ್ಳೆಕೆರೆ ಅವರನ್ನು ನೇಮಿಸಲಾಗಿದೆ.
ಸರಳ ಸಜ್ಜನಿಕೆಯ ಸಿ.ಹೆಚ್ ಮಾಲತೇಶ್ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಅಯ್ಕೆ ಮಾಡಿದೆ
ಇವರೊಂದಿಗೆ ಶ್ರೀ ಕೆ.ವಿ. ಅಣ್ಣಪ್ಪ ಪ್ರಕೋಷ್ಠ ಜಿಲ್ಲಾ ಸಹ-ಸಂಯೋಜಕರಾಗಿ ನೇಮಕಗೊಂಡಿದ್ದಾರೆ.
ಪಕ್ಷದ ಆಡಳಿತಾತ್ಮಕ ಚಟುವಟಿಕೆಗಳನ್ನು ಬಲಪಡಿಸಲು ಶ್ರೀ ಎಸ್. ರಮೇಶ್ ಅವರನ್ನು ಕಾರ್ಯಾಲಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮನ ಕೀ ಬಾತ್’ ಕಾರ್ಯಕ್ರಮದ ಜಿಲ್ಲಾ ಪ್ರಮುಖರಾಗಿ ಶ್ರೀ ಕುಪೇಂದ್ರ ಅವರನ್ನು ಘೋಷಿಸಲಾಗಿದೆ.
ಪಕ್ಷದ ಮಹತ್ವದ ‘ಲಾಭಾರ್ಥಿ’ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿ ಮಾರ್ಗದರ್ಶನ ನೀಡಲು ಶ್ರೀ ಜಿ.ಇ. ವಿರೂಪಾಕ್ಷಪ್ಪ ಅವರನ್ನು ಪ್ರಮುಖರನ್ನಾಗಿ ಆಯ್ಕೆ ಮಾಡಲಾಗಿದೆ. ‘ವಾಟ್ಸಪ್ ಗುಂಪು ಸಂಚಲನ’ ವಿಭಾಗದ ಜಿಲ್ಲಾ ಪ್ರಮುಖರಾಗಿ ಶ್ರೀ ವಿನ್ಸೆಂಟ್ ರೋಡ್ರಿಗ್ಸ್ ನೇಮಕಗೊಂಡಿದ್ದಾರೆ.
ಮಾಧ್ಯಮ ವಿಭಾಗದಲ್ಲಿ ಶ್ರೀ ಚಂದ್ರಶೇಖರ್ ಎಸ್. ಅವರನ್ನು ಮಾಧ್ಯಮ ಪ್ರಮುಖರನ್ನಾಗಿ ಹಾಗೂ ಶ್ರೀ ನಾವಿಕ ಮಂಜು ಅವರನ್ನು ಸಹ-ಮಾಧ್ಯಮ ಪ್ರಮುಖರನ್ನಾಗಿ ನೇಮಿಸಲಾಗಿದೆ.
ಸಾಮಾಜಿಕ ಜಾಲತಾಣ ನಿರ್ವಹಣೆಗೆ ಶ್ರೀ ಶರತ್ ಕಲ್ಯಾಣಿ ಸಂಚಾಲಕರಾಗಿದ್ದು, ಶ್ರೀ ದಿನೇಶ್ ಆಚಾರ್ಯ ಸಹ-ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇವರೊಂದಿಗೆ ಎಂಟು ಉಪಾಧ್ಯಕ್ಷರು, ಮೂರು ಪ್ರಧಾನ ಕಾರ್ಯದರ್ಶಿಗಳು, ಎಂಟು ಕಾರ್ಯದರ್ಶಿಗಳು ಹಾಗೂ ಒಬ್ಬ ಖಜಾಂಚಿ ಆಯ್ಕೆಯಾದವರ ಪಟ್ಟಿ ಕೇಳಗಿನಂತೆ ಇದೆ, ಮುಂದಿನ ದಿನಗಳಲ್ಲಿ ಪೂರ್ಣ ಬಣದ ಕಾರ್ಯಯೋಜನೆ ಪ್ರಕಟವಾಗಲಿದೆ.








