ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಕಾರಾಗೃಹದ ಗಡಿಯೊಳಗಿನ ಗಾಂಜಾ ರಹಸ್ಯ…!?

On: November 20, 2025 10:22 PM
Follow Us:
---Advertisement---

ಸಾತ್ವಿಕನ ಒಳ ಉಡುಪಿನಲ್ಲಿದ್ದ 170 ಗ್ರಾಂ ಮತ್ತಿನ ಮದ್ದು!

ಶಿವಮೊಗ್ಗ… ಬೆಳಗಿನ 10:20.ಕೇಂದ್ರ ಕಾರಾಗೃಹದ ಗಡಿಯೊಳಗೆ ಎಲ್ಲವೂ ಸಾಮಾನ್ಯ ದಿನದಂತೆ ಶುರುವಾಯಿತು.

ಆದರೆ, ಆ ಗಡಿಯೊಳಗೆ ಪಾದವಿಟ್ಟ ಒಬ್ಬ ಯುವ ಅಧಿಕಾರಿ—ಕೇವಲ 25 ವರ್ಷದ ಸಾತ್ವಿಕ್—

ಇಂದು ಬರುವುದಕ್ಕೆ ಅವನು ತೆಗೆದುಕೊಂಡಿದ್ದ ‘ಸಾಮಾನು’ ಮಾತ್ರ ಸಾಮಾನ್ಯವಾಗಿರಲಿಲ್ಲ.

ಆ ಕ್ಷಣಕ್ಕೆ ಗೇಟ್‌ ಬಳಿ ನಿಂತಿದ್ದವರು—ಕೆ.ಎಸ್.ಐ.ಎಸ್.ಎಫ್ ಇನ್ಸ್‌ಪೆಕ್ಟರ್ ಜಗದೀಶ್,ಅವರ ಜೊತೆ ಪ್ರೊ. ಪಿ.ಎಸ್​.ಐ ಪ್ರಭು ಎಸ್.,ಮತ್ತು ಸಿಬ್ಬಂದಿ ಕಪ್ಪೇರ ಬಸವರಾಜ್.ಇವರು ತಪಾಸಣೆ ನಡೆಸುತ್ತಿದ್ದರು—ಸಾಧಾರಣ ಪ್ರಕ್ರಿಯೆ… ಎಂದರೆ ಸಾಮಾನ್ಯ ಕಣ್ಣು ನೋಡುವಷ್ಟೇ.

ಆದರೆ ಕ್ರೈಂ ಲೋಕದಲ್ಲಿ ಸಾಮಾನ್ಯ ಕಣ್ಣುಗಳನ್ನು ಮೋಸ ಮಾಡಬೇಕಾದರೆ ಅಸಾಮಾನ್ಯ ರಹಸ್ಯ ಬಚ್ಚಿಟ್ಟು ಕೋಂಡು ಬಂದಿದ್ದ ಸಾತ್ವಿಕ್.!

ಒಳಉಡುಪಿನಒಳತುಗ್ಗಿನಲ್ಲಿ, ಗಮ್‍ಟೇಪಿನ ಪದರಗಳಲ್ಲಿ ಸುತ್ತಿಕೊಂಡಿದ್ದದ್ದು170 ಗ್ರಾಂ ಗಾಂಜಾ.

ಗಾಂಜಾ ಮಾತ್ರವಲ್ಲ—ಅವನ ಬಟ್ಟೆಯ ಒಡಲಿಗೆ ಅಂಟಿಕೊಂಡಿದ್ದದ್ದುವಿಶ್ವಾಸಕ್ಕೆ ಭಂಗ ತಂದಿರುವ ಒಂದು ಪ್ರಶ್ನೆ…

ಕಾರಾಗೃಹದಲ್ಲೇ ಗಾಂಜಾ ಬೇಕಾದವರು ಯಾರು?ಇದನ್ನು ಒಳ ತರಲು ಬೆಡಿಕೆ ಇಟ್ಟವರು ಯಾರು ?

ಏಕೆ ಸಾತ್ವಿಕ್? ನ ತಪಾಸಣೆ ಇವತ್ತು ಮಾತ್ರ ಅಯಿತು ಹಾಗದರೆ ಇವನು ಇಷ್ಟು ದಿನ ಎಕೆ ಸಿಕ್ಕಿಕೋಳ್ಳಲಿಲ್ಲ  ಸಾತ್ವಿಕ್,

ಮೌನದ ಗಟ್ಟಿ ಕವಚ ಆದರೆ ಮೌನ—ಪೊಲೀಸರ ಮುಂದೆ ಹೆಚ್ಚು ಕಾಲ ನಿಂತಿರಲಿಲ್ಲ.

ಡಾ. ರಂಗನಾಥ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು,

ಘಟನೆಯ ತೀವ್ರತೆಯನ್ನು ಅರಿತು ತಕ್ಷಣ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದರು.

ಅಲ್ಲಿ ದಾಖಲಾಗಿದ್ದ ಪ್ರಕರಣ—

ಮೊಕದ್ದಮೆ ಸಂಖ್ಯೆ 694/2025

ಕೆಲಂ 42 – Karnataka Prisons Act,

ಕಲಂ 20(b)(II)(A) – NDPS Act.

ಅದರರ್ಥ?ಅವನಿಗೆ ಇನ್ನು ಮುಂದೆ ಹೊರಬರುವುದು ಸುಲಭವಲ್ಲ.

ಅಧಿಕಾರಿಗಳ ಮುಂದೆ ನಿಂತಿದ್ದ ಸಾತ್ವಿಕ್…ಅವನ ಮುಖದಲ್ಲಿದ್ದ ಗಾಬರಿ, ಗಮ್ ಟೇಪಿನಲ್ಲಿದ್ದ ಗಾಂಜಾವಿಗಿಂತ ಗಟ್ಟಿಯಾಗಿತ್ತು.

ಪೊಲೀಸರುವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಸಾತ್ವಿಕ್—ದಸ್ತಗಿರಿ ಆದರೆ ಕಥೆ ಇಲ್ಲಿಯೇ ಮುಗಿಯುವುದಿಲ್ಲ.

ಶಿವಮೊಗ್ಗದ ಕೇಂದ್ರ ಕಾರಾಗೃಹದ ಗೋಡೆಗಳ ಹಿಂದೆ ಹಿಡಿದಿರುವ ಗಾಂಜಾಇದು ಮೊದಲ ಬಾರಿಗೆ ಸಿಕ್ಕಿದ ‘ಸಾಮಾನು’ ಅಲ್ಲ ಇದು ಬೇರೆ ಯಾರೋ ನೇಯ್ದ ಹಗ್ಗದ ಒಂದು ತುದಿ ಮಾತ್ರ.

ಹಗ್ಗದ ಮತ್ತೊಂದು ತುದಿಯಾರ ಕೈಯಲ್ಲಿ?ಶಿವಮೊಗ್ಗ ಕಾರಾಗೃಹದ ಒಳ ಜಾಲದಲ್ಲಿಯಾರು ಬಲೆ ಬೀಸಿದ್ದಾರೆ?

ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಕೆಲವು ಕರಿ ಸತ್ಯಗಳು ಹೊರಬರಬೇಕಿದೆ…

Sathish munchemane

Join WhatsApp

Join Now

 

Read More