ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಕುವೆಂಪು ವಿವಿಯ ಡಿಜಿಟಲ್ ಮೌಲ್ಯಮಾಪನ ಗೊಂದಲ — ಜವಾಬ್ದಾರರ ವಿರುದ್ಧ ಕ್ರಮಕ್ಕೆ NSUI ಆಗ್ರಹ.!

On: November 17, 2025 3:25 PM
Follow Us:
---Advertisement---

ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ಡಿಜಿಟಲ್ ರೂಪದಲ್ಲಿ ನಡೆಸಿದ ಪರೀಕ್ಷಾ ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ವಿವಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸಿದೆ.

ಡಿಜಿಟಲ್ ಮೌಲ್ಯಮಾಪನಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಸರಿಯಾಗಿ ಕೈಗೊಳ್ಳದೇ ಇರುವುದರಿಂದ ಹಲವಾರು ವಿಷಯಗಳಲ್ಲಿ ಬೇಕಾಬಿಟ್ಟಿ ಫಲಿತಾಂಶಗಳು ಹೊರಬಿದ್ದಿದ್ದು, ಇದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಗೊಂದಲ ಮತ್ತು ಅಸಮಾಧಾನ ಉಂಟಾಗಿದೆ ಎಂದು NSUI ಆರೋಪಿಸಿದೆ.

ಈ ಸಂಬಂಧ 04-11-2025 ರಂದು ಕುಲಪತಿಗಳು ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಸಿದಾಗ, 14-11-2025ರೊಳಗೆ ಗೊಂದಲ ಸರಿಪಡಿಸುವ ಭರವಸೆ ನೀಡಿದ್ದರೂ, ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದೆ ವಿವಿ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡಿರುವುದು ಖಂಡನೀಯ ಎಂದು NSUI ಹೇಳಿದೆ.

ಮ್ಯಾನ್ಯುಯಲ್ ಮೌಲ್ಯಮಾಪನದಲ್ಲಿ ಸಂಭವಿಸುತ್ತಿದ್ದ ಅವ್ಯವಸ್ಥೆ ತಡೆಯುವ ನೆಪದಲ್ಲಿ ಡಿಜಿಟಲ್ ಮೌಲ್ಯಮಾಪನಕ್ಕೆ ವರ್ಗಾದರೂ, ಹೊಸ ವ್ಯವಸ್ಥೆಯಲ್ಲೂ ಗಂಭೀರ ವೈಪರಿತ್ಯಗಳು ಕಂಡುಬಂದಿವೆ. ಹಲವಾರು ಕಾಲೇಜುಗಳಲ್ಲಿ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಇದಕ್ಕೆ ನಿದರ್ಶನ, ಮರುಮೌಲ್ಯಮಾಪನದಲ್ಲಿ 5–6 ಅಂಕ ಪಡೆದ ವಿದ್ಯಾರ್ಥಿಗಳಿಗೂ ಉತ್ತೀರ್ಣತೆ ನೀಡುತ್ತಿರುವುದು ಪರೀಕ್ಷಾಂಗ ವಿಭಾಗದ ಗಂಭೀರ ಅಸಮರ್ಪಕತೆಯನ್ನು ಬಯಲು ಮಾಡುತ್ತಿದೆ ಎಂದು NSUI ಆರೋಪಿಸಿದೆ.

ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದು, ಅವರ ಭವಿಷ್ಯವನ್ನು ಪಣಕ್ಕಿಟ್ಟು ಫಲಿತಾಂಶದಲ್ಲಿ ಗೊಂದಲ ಸೃಷ್ಟಿಸುವುದು ಅನ್ಯಾಯ ಎಂದು ಸಂಘಟನೆ ಕಿಡಿಕಾರಿದೆ.

NSUI ಜಿಲ್ಲಾಧ್ಯಕ್ಷ ವಿಜಯ ಅವರು,“ಡಿಜಿಟಲ್ ಮೌಲ್ಯಮಾಪನದಲ್ಲಿ ನಡೆದಿರುವ ಎಲ್ಲ ಗೊಂದಲಗಳನ್ನು ತಕ್ಷಣ ಸರಿಪಡಿಸಬೇಕು. ಪೂರ್ವಸಿದ್ಧತೆಯಿಲ್ಲದೆ ವ್ಯವಸ್ಥೆ ಜಾರಿಗೊಳಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಎಲ್ಲಾ ಉತ್ತರಪತ್ರಿಕೆಗಳ ಮರುಮೌಲ್ಯಮಾಪನ ನಡೆಯಬೇಕು. ಬೇಡಿಕೆಗಳನ್ನ ಪಾಲಿಸದಿದ್ದರೆ ವಿವಿ ಬಂದ್‌ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ರವಿಕಟಿಕೆರೆ, ಚಂದ್ರಾಜಿ ರಾವ್ ಆದಿತ್ಯ, ಸುಭಾನ್, ಫರಾಜ್ ಅಂಜನ್, ಲೋಹಿತ್, ವರುಣ್, ಫರಜ್, ಸಿಂಚನ, ದೀಕ್ಷಾ, ಸ್ಪೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Sathish munchemane

Join WhatsApp

Join Now

 

Read More