ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಾಲುಮರದ ತಿಮ್ಮಕ್ಕ ರವರ ನಿಧಾನಕ್ಕೆ ಸಂತಾಪ ಸೂಚಿಸಿದ -ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು.!

On: November 14, 2025 10:31 PM
Follow Us:
---Advertisement---

ವೃಕ್ಷಗಳನ್ನೇ ಮಕ್ಕಳೆಂದು ಭಾವಿಸಿ ಭೂಮಿಯ ಭವಿಷ್ಯಕ್ಕೆ ಆಮ್ಲಜನಕದ ಅಮೃತ ಉಣಿಸುವ ಪುಣ್ಯಕಾರ್ಯ ಮಾಡಿ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಕೀರ್ತಿಯನ್ನು ಬೆಳಗಿದ ಮಹಾತಾಯಿ, ಮುಗ್ದಳಾಗಿದ್ದೇ ಮಹತ್ತಾದ ಕೊಡುಗೆಯನ್ನು ಪರಿಸರಕ್ಕೆ ನೀಡಿದ ಸಾಲುಮರದ ತಿಮ್ಮಕ್ಕ ಇಹಲೋಕದ ಯಾತ್ರೆ ಮುಗಿಸಿರುವ ವಿಷಯ ಕೇಳಿ ಆಘಾತವಾಯಿತು.

ಮಹಾತಾಯಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ನೆಟ್ಟು ಬೆಳೆಸಿದ ಮರಗಳ ಮೂಲಕ ಹಾಗು ಅವರ ಪ್ರೇರಣೆಯಿಂದ ನಡೆಸಲ್ಪಟ್ಟ ಹತ್ತು ಹಲವು ಪರಿಸರ ಸಂರಕ್ಷಣಾ ಕಾರ್ಯಗಳ ಮೂಲಕ ನಮ್ಮ ಮನಃಪಟಲದಲ್ಲಿ, ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುತ್ತಾರೆ.

-ಡಾ. ಬಸವ ಮರುಳಸಿದ್ಧ ಸ್ವಾಮಿಗಳವರುಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು- ಬಸವಕೇಂದ್ರ, ಶಿವಮೊಗ್ಗ.

Sathish munchemane

Join WhatsApp

Join Now

 

Read More