ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಬಂಗಾರಪ್ಪರ ಅಧ್ಯಕ್ಷತೆಯಲ್ಲಿ 23 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು.!?

On: October 26, 2025 10:37 PM
Follow Us:
---Advertisement---

ಸಮಾಜವಾದಿ ಚಿಂತಕ, ಅಭಿವೃದ್ಧಿಯ ಹರಿಕಾರ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ – 93ನೇ ಜನ್ಮದಿನೋತ್ಸವ

ಆಳ್ವಾಸ್ ಸಾಂಸ್ಕೃತಿಕ ವೈಭವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಬಂಗರಾ ಸನ್ಮಾನ”

ಬಂಗಾರ”

ಪ್ರಶಸ್ತಿ ಪುರಸ್ಕೃತರು

ಸಾಹಿತ್ಯ ಬಂಗಾರ

ಡಾ||  ಕಾಳೇಗೌಡ ನಾಗವಾರ

ಪ್ರಸಿದ್ಧ ಸಾಹಿತಿಗಳು, ಮೈಸೂರು.

ಧರ್ಮ ಬಂಗಾರ

ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ

ಬೆಂಗಳೂರು.  ಪರವಾಗಿ

ಶ್ರೀ ಎಲ್.  ರೇವಣಸಿದ್ದಯ್ಯ

(ಐ.ಪಿ.ಎಸ್. ಎ) ನಿವೃತ್ತ ಪೊಲೀಸ್ ಮಹಾನಿರ್ದೇಶಕರು

ಜಾನಪದ ಬಂಗಾರ

ಶ್ರೀಮತಿ ರಾಧಾಬಾಯಿ ಮಾದರ್

ಚೌಡಿಕೆ ಕಲಾವಿದರು,  ಬೆಳಗಾವಿ.ಕಲಾ ಬಂಗಾರ, ಶ್ರೀ ಜೇವರ್ಗಿ ರಾಜಣ್ಣ,ರಂಗಭೂಮಿ ಕಲಾವಿದರು, ಗುಲ್ಬರ್ಗ.

ಕಾರ್ಯಕ್ರಮದಲ್ಲಿ ಮಾತನಾಡಿದ ರೇವಣ ಸಿದ್ದಯ್ಯ ಅವರು ಬಂಗಾರಪ್ಪನವರನ್ನು ಸ್ಮರಿಸಿ,

“ಅವರು ನುಡಿದಂತೆ ನಡೆದುಕೊಂಡ ಮಹಾನ್ ವ್ಯಕ್ತಿ. ಯಾವಾಗಲೂ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಯಾರಾದರೂ ವಿನಂತಿಸಿಕೊಂಡರೆ ಅವರ ಕೆಲಸವನ್ನು ನೆರವೇರಿಸುತ್ತಿದ್ದರು. ಜನಪರ ನಾಯಕನಾದ ಬಂಗಾರಪ್ಪನವರಂತವರು ವಿರಳ,” ಎಂದು ಹೇಳಿದರು.

ಅವರು ಮುಂದುವರೆದು,

“ಈ ಸಂಸ್ಥೆ ಸಿದ್ದಗಂಗಾ ಶ್ರೀಗಳಿಗೂ ಊಟ ಮತ್ತು ವಸತಿ ನೀಡಿದ ಸಂಸ್ಥೆ. ಇಂದಿಗೂ ಹಳ್ಳಿಗಳಿಂದ ಬರುವ ಬಡ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡುತ್ತಿದೆ,” ಎಂದರು.

 

ಮಾಜಿ ಸಚಿವ ಮುನಿಯಪ್ಪ ಅವರು ತಮ್ಮ ನೆನಪು ಹಂಚಿಕೊಂಡು,

“ಬಂಗಾರಪ್ಪನವರು ನನ್ನ ಜೀವನದಲ್ಲಿ ರಾಜಕೀಯದ ದಾರಿ ತೋರಿಸಿದವರು. ನಾನು ವಕೀಲರಾಗಿದ್ದಾಗ, ಅವರ ಅಧ್ಯಕ್ಷತೆಯಲ್ಲಿ 23 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಅವರು ನನ್ನನ್ನು ಸಂಸದರನ್ನಾಗಿ ಮಾಡಿದವರು. ಶೋಷಿತ ವರ್ಗದ, ಬಡವರ ನಿಜವಾದ ಬಂಗಾರ ಬಂಗಾರಪ್ಪ,” ಎಂದು ಸ್ಮರಿಸಿದರು.

“ಮಧು ಬಂಗಾರಪ್ಪ ಅವರು ತಂದೆಯವರಂತೆಯೇ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಪಬ್ಲಿಕ್ ಶಾಲೆಗಳನ್ನು ತೆರೆಯುವ ಅವರ ಚಿಂತನೆ ಶ್ಲಾಘನೀಯ,” ಎಂದು ಪ್ರಶಂಸಿಸಿದರು.

ಸಂತೋಷ್ ಲಾಡು ಮಾತನಾಡಿ,

“ಇಂದು ನಿಜವಾಗಿಯೂ ಪುಣ್ಯದ ದಿನ. ಬಂಗಾರಪ್ಪನವರು ಏಳು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ರೈತರಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಜನಮನದಲ್ಲಿ ಉಳಿದಿದ್ದಾರೆ. ಬಂಗಾರಧಾಮದಲ್ಲಿ ವಿದ್ಯಾರ್ಥಿಗಳಿಗೆ 24 ಗಂಟೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಬಂಗಾರಪ್ಪ ಒಂದು ಬ್ರಾಂಡ್,” ಎಂದು ಹೇಳಿದರು.

ಅವರು ಮುಂದುವರೆದು, “ಮಧು ಬಂಗಾರಪ್ಪ ನನ್ನ ಆತ್ಮೀಯ ಸ್ನೇಹಿತರು. ಬಂಗಾರಪ್ಪನವರ ಜೀವನದ ಕೆಲವು ಕ್ಷಣಗಳನ್ನು AI ವೀಡಿಯೊ ಮೂಲಕ ಪ್ರದರ್ಶಿಸಿದ್ದು, ಅವರು ನಮ್ಮೊಂದಿಗೆ ಇದ್ದಂತೆ ಅನುಭವವಾಯಿತು,” ಎಂದರು.

“ರಾಜ್ಯದಲ್ಲಿ ಎಲ್ಲಾ ಜಾತಿಗಳಿಗೆ ಸಮಾನ ಹಕ್ಕಿನ ರಿಜರ್ವೇಶನ್ ದೊರಕಬೇಕು,” ಎಂಬ ಬೇಡಿಕೆಯನ್ನೂ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ,

“ಸಾವಿರ ಜನರಲ್ಲಿ ಬಂಗಾರಪ್ಪನವರನ್ನು ಕಾಣುತ್ತೇನೆ. ಮುನಿಯಪ್ಪರಲ್ಲೂ ಅವರ ನಿಜವಾದ ಗುಣಗಳನ್ನು ಕಾಣುತ್ತೇನೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಅವರು ರೈತರಿಗಾಗಿ ನಿದ್ದೆಯನ್ನೇ ಬಿಟ್ಟದ್ದರು. ರೈತರಿಗೆ ಭತ್ತ ನೀಡುವ ಕಾರ್ಯಕ್ರಮಕ್ಕೆ   ಮಂಜುನಾಥ್ ಗೌಡರು ಸಹಾಯ ಮಾಡಿದ್ದರು ನಾನು ಧನ್ಯವಾದ ಹೇಳುತ್ತೇನೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲವು ಗಣ್ಯರು, ಅಭಿಮಾನಿಗಳು ಹಾಗೂ ಬಂಗಾರಪ್ಪನವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More