ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಹೊರರಾಜ್ಯ AITP ವಾಹನಗಳಿಂದ ರಾಜ್ಯಕ್ಕೆ ರೂ. 1,667 ಕೋಟಿ ನಷ್ಟ – R.T.O.ಅಧಿಕಾರಿಗಳ ನಿರ್ಲಕ್ಷ್ಯ!

On: October 23, 2025 7:45 PM
Follow Us:
---Advertisement---

ಹೊರರಾಜ್ಯ AITP ವಾಹನಗಳಿಂದ ರಾಜ್ಯಕ್ಕೆ ರೂ. 1,667 ಕೋಟಿ ನಷ್ಟ – R.T.O. ಅಧಿಕಾರಿಗಳ ನಿರ್ಲಕ್ಷ್ಯ

ಶಿವಮೊಗ್ಗ ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ಆಕ್ರೋಶ! ಶಿವಮೊಗ್ಗ, ಅಕ್ಟೋಬರ್ 23:

ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮತ್ತು ಚಾಲಕರ ಸಂಘ (ರಿ.) ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸಂಘದವರ ಪ್ರಕಾರ, ಹೊರರಾಜ್ಯ ನೊಂದಣಿ ಪಡೆದ AITP (All India Tourist Permit) ವಾಹನಗಳು ರಾಜ್ಯದೊಳಗೆ ಅಕ್ರಮವಾಗಿ ಸಂಚರಿಸುತ್ತಿದ್ದು, ಕಾನೂನು ಉಲ್ಲಂಘನೆಗಳ ಪರಿಣಾಮವಾಗಿ ರಾಜ್ಯದ ಬೊಕ್ಕಸಕ್ಕೆ ಕಳೆದ ಮೂರು ತಿಂಗಳಲ್ಲಿ ರೂ. 1,667 ಕೋಟಿ ನಷ್ಟ ಉಂಟಾಗಿದೆ.

ಅನ್ಯರಾಜ್ಯದ ವಾಹನಗಳ ಹಾವಳಿ ಶಿವಮೊಗ್ಗದಲ್ಲಿ  ಹೆಚ್ಚಾದರು ತಲೆ ಕೆಡಿಸಿಕೋಳ್ಳದ R.T.O. ಅಧಿಕಾರಿಗಳು.    

“AITP ನಿಯಮ ಪ್ರಕಾರ ಇಂತಹ ವಾಹನಗಳು 45 ದಿನಕ್ಕೊಮ್ಮೆ ತಮ್ಮ ರಾಜ್ಯಕ್ಕೆ ಹಿಂತಿರುಗಬೇಕು. ಆದರೆ ತಿಂಗಳು ವರ್ಷವಾದರೂ ಹಿಂದಿರುಗದೆ ಕರ್ನಾಟಕ ಹಾಗೂ ಶಿವಮೊಗ್ದಲ್ಲೇ ಶಾಶ್ವತವಾಗಿ ಓಡುತ್ತಿವೆ. 2+2 ಆಸನ ವ್ಯವಸ್ಥೆ ಇರಬೇಕಾದರೆ, ಅಕ್ರಮವಾಗಿ 3+2 ಆಸನಗಳನ್ನು ಹಾಕಿಕೊಂಡು ಪ್ರಯಾಣಿಕರನ್ನು ತುಂಬಿಕೊಂಡು ಓಡಿಸುತ್ತಿದ್ದಾರೆ.”

ಇದೇ ರೀತಿ, ಗ್ರಾಹಕರ ಪಟ್ಟಿ ಹಾಗೂ ಆಧಾರ್ ವಿವರಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕಾದ ಕಡ್ಡಾಯ ನಿಯಮವನ್ನೂ ಪಾಲಿಸುತ್ತಿಲ್ಲ. ಫಾಸ್ಟ್ ಟ್ಯಾಗ್, GPS, ಡೀಸೆಲ್ ಬಿಲ್‌ಗಳ ಆಧಾರದ ಮೇಲೆ ಇವುಗಳನ್ನು ತಕ್ಷಣ ತಪಾಸಣೆ ಮಾಡುವಂತೆ ಸಾರಿಗೆ ಇಲಾಖೆಗೆ ಸಂಘ ಮನವಿ ಮಾಡಿದೆ.

ಅನ್ಯರಾಜ್ಯದ ವಾಹನಗಳ ಹಾವಳಿ ಶಿವಮೊಗ್ಗದಲ್ಲಿ  ಹೆಚ್ಚಾದರು ತಲೆ ಕೆಡಿಸಿಕೋಳ್ಳದ R.T.O. ಅಧಿಕಾರಿಗಳು.    

 ಸಂಘದ ಎಚ್ಚರಿಕೆ:

ಮೈಸೂರಿನ ಸಾರಿಗೆ ಇಲಾಖೆ ಈಗಾಗಲೇ ಕ್ರಮ ಕೈಗೋಂಡಿದ್ದು  ಶಿವಮೊಗ್ಗದ ಸಾರಿಗೆ ಇಲಾಖೆ ಅಧಿಕಾರಿಗಳು
ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು.
ಕ್ರಮ ಕೈಗೊಳ್ಳಲು ಅಗದಿದ್ದರೆ ಸರ್ಕಾರವೇ ನಮಗೂ ಹೊರರಾಜ್ಯ ನೊಂದಣಿ ಮಾಡಲು ಅವಕಾಶ ನೀಡಲಿ  ನಾವೂ ಹೊರರಾಜ್ಯದಲ್ಲಿ ವಾಹನ ನೋಂದಣಿ ಮಾಡಿಸಿಕೊಳ್ಳುತ್ತೇವೆ.” ಎಂದು  ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕ ಮಾಲೀಕರು ಈಗಾಗಲೇ  ಸರ್ಕಾರ ಬಸ್ಸು ಟಿಕೆಟ್ ಮಹಿಳೆಯರಿಗೆ ಪ್ರಿ ಮಾಡಿ ನಮ್ಮ ವಾಹನಗಳ ಬಾಡಿಗೆಗೆ ಬರೆಹಾಕಿದ್ದು ಮತೋಂದು ಕಡೆ ಟ್ಯಾಕ್ಸ್ ಎರಿಸಿ  ಇನ್ನೊಂದು ಹೋಡೆತ ನೀಡಿದೆ,

ಇಷ್ಟಗಿಯು “ನಾವು 49 ಸೀಟ್ ಬಸ್ಸಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ರೂ. 82,500 ತೆರಿಗೆ ಕಟ್ಟುತ್ತೇವೆ. ತಮಿಳುನಾಡಿಗೆ ರೂ. 40,000, ಕೇರಳಕ್ಕೆ ರೂ. 18,000, ಗೋವಾಕ್ಕೆ ರೂ. 12,000, ಮಹಾರಾಷ್ಟ್ರಕ್ಕೆ ರೂ. 12,000 ತೆರಿಗೆ ಕಟ್ಟಬೇಕಾಗಿದೆ. ಆದರೆ NL, DD, GA, OD, AS, PY, HR, UP ಮುಂತಾದ ರಾಜ್ಯ ನೊಂದಣಿ ಪಡೆದ AITP ವಾಹನಗಳು ಯಾವುದೇ ತೆರಿಗೆ ಕಟ್ಟದೆ ‘ಟ್ಯಾಕ್ಸ್ ಫ್ರೀ’ ಎಂದು ಹೇಳಿಕೊಂಡು ರೂ. 23/- ಕಿ.ಮೀ ದರದಲ್ಲಿ ಓಡಿಸುತ್ತಿವೆ. ಇದರಿಂದ ನಮ್ಮ ಟೆಂಪೋ ಟ್ರಾವೆಲರ್‌ಗಳಿಗೆ ವ್ಯವಹಾರವೇ ಸಿಗದೆ ಮನೆಗೆ ನಿಲ್ಲಿಸುವ ಪರಿಸ್ಥಿತಿ ಬಂದಿದೆ.”

ಶಿವಮೊಗ್ಗ ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ಆಕ್ರೋಶ! ಸಂಘದ ಎಚ್ಚರಿಕೆ:

ಮೈಸೂರಿನ ಸಾರಿಗೆ ಇಲಾಖೆ ಈಗಾಗಲೇ ಕ್ರಮ ಕೈಗೋಂಡಿದ್ದು  ಶಿವಮೊಗ್ಗದ ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು.

ಕ್ರಮ ಕೈಗೊಳ್ಳಲು ಅಗದಿದ್ದರೆ ಸರ್ಕಾರವೇ ನಮಗೂ ಹೊರರಾಜ್ಯ ನೊಂದಣಿ ಮಾಡಲು ಅವಕಾಶ ನೀಡಲಿ  ನಾವೂ ಹೊರರಾಜ್ಯದಲ್ಲಿ ವಾಹನ ನೋಂದಣಿ ಮಾಡಿಸಿಕೊಳ್ಳುತ್ತೇವೆ.” ಎಂದು  ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Sathish munchemane

Join WhatsApp

Join Now

 

Read More