ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ. 2025 ರಿಂದ 2030 ರವರೆಗೆ 5 ವರ್ಷಗಳ ಅವಧಿಗೆ ನಡೆಯುವ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಇಂದು ಭಾನುವಾರ (12-10-2025) ಬೆಳಿಗ್ಗೆಯಿಂದ ಉತ್ಸಾಹಭರಿತ ವಾತಾವರಣದಲ್ಲಿ ಆರಂಭಗೊಂಡಿದೆ.
ಒಟ್ಟು 16 ಕ್ಷೇತ್ರಗಳಿಗೆ ಚುನಾವಣೆಯು ನಡೆಯುತ್ತಿದ್ದು, ಈಗಾಗಲೇ 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಅವುಗಳಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಹಾಗೂ ಎರಡು ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದ 13 ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ನಡೆಯುತ್ತಿದ್ದು, ಸದಸ್ಯರಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿದೆ.
ಈ ಚುನಾವಣೆಯಲ್ಲಿ ಹಿರಿಯರು ಹಾಗೂ ಹೊಸ ಮುಖಗಳು ಸ್ಪರ್ಧೆಗೆ ಇಳಿದಿದ್ದು, ತಮ್ಮದೇ ರೀತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಸ್ಪರ್ಧಿಗಳ ಪಟ್ಟಿಯಲ್ಲಿ ದೇವರಾಜ್ (ವಿ.ಎಸ್.ಎಸ್.ಎನ್. ತ್ಯಾಜವಳ್ಳಿ), ಎಸ್.ಕೆ. ಮರಿಯಪ್ಪ (ಶಿವಮೊಗ್ಗ), ದೀನೆಶ್ ಬುಳ್ಳಪುರ, ಕೆ.ಎಲ್. ಜಗದೀಶ್ (ಕುಂಚೆನಹಳ್ಳಿ), ನರಸಿಂಹ (ಗಂಧದಮನೆ, ಶಿವಮೊಗ್ಗ), ಪೋರುಷತ್ತಮ್, ಬಿ.ಕೆ. ಶಿವಕುಮಾರ್ (ಭದ್ರಾವತಿ)
ಸತೀಶ್ ಶಿಕಾರಿಪುರ
ರವಿಂದ್ರ ಶಿಕಾರಿಪುರ
ಪುಷ್ಪ ಅಂಬ್ಲಿಗೋಳ
ನಂದೀಶ್ ಗೋಗ್ಗ
ಅಶೋಕ ಹೆಗ್ಡೆ
ಕೆ ವಿ ಗೌಡ.
ಮುಂತಾದವರು ಪ್ರಮುಖರಾಗಿ ಹೆಸರು ಮಾಡುತ್ತಿದ್ದಾರೆ.
ಮತದಾನ ಪ್ರಕ್ರಿಯೆ ಶಾಂತವಾಗಿ ಮುಂದುವರಿಯುತ್ತಿದ್ದು, ಬೆಳಗಿನಿಂದಲೇ ಸದಸ್ಯರು ಉತ್ಸಾಹದಿಂದ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಮತ ಎಣಿಕೆ ಇಂದು ಸಂಜೆ ನಂತರ ನಡೆಯಲಿದ್ದು, ನೂತನ ಆಡಳಿತ ಮಂಡಳಿ ಯಾರೆಂಬ ಕುತೂಹಲ ಈಗ ಸಹಕಾರ ವಲಯದಲ್ಲಿ ತೀವ್ರವಾಗಿದೆ.
 







