ರಾಜ್ಯ ಇಂಧನ ಸಚಿವ ಜಾಜ೯ ಬಿ.ಆರ್.ಪ್ರಜೆಕ್ಟ ಲಕ್ಕವಳ್ಳಿ ಯಲ್ಲಿ ಶಾರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್. ಬಗ್ಗೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆ 120 ಎಕರೆ ಪ್ರದೇಶದಲ್ಲಿ 3000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದೆ ಎಂದು ತಿಳಿಸಿದರು. ಪ್ರಸ್ತುತ 1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ ಎಂದರು.
ವಿದ್ಯುತ್ ಕೊರತೆ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವರು, “ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ. ಪೀಕ್ ಅವರ್ಸ್ ಸಮಯದಲ್ಲಿ (ಸಂಜೆ 6ರಿಂದ ರಾತ್ರಿ 10ರವರೆಗೆ) ಮಾತ್ರ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಶಾರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಗೊಂಡಿದ್ದೇವೆ,” ಎಂದರು.
ಮರಗಳ ಕಡಿತದ ಕುರಿತು ಪ್ರಶ್ನೆ ಕೇಳಿದಾಗ, ಸಚಿವರು — “ಅಷ್ಟು ದೊಡ್ಡ ಯೋಜನೆಗಳು ಬರುವಾಗ ಕೆಲವು ಮರಗಳನ್ನು ಕಡಿಯಬೇಕು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮರ ಕಡಿತ ಆಗುತ್ತದೆ ಅಲ್ಲವೇ? ಅದರಂತೆಯೇ ಇದು ಸಹ ಅಗತ್ಯ,” ಎಂದು ಪ್ರತಿಕ್ರಿಯಿಸಿದರು. ಅವರು ಮುಂದುವರಿಸಿ, “ಪರಿಸರ ಇಲಾಖೆಯಿಂದ ಈಗಾಗಲೇ ಅನುಮತಿ ಪಡೆದಿದ್ದೇವೆ. ಒಂದು ಮರ ಕಡಿದರೆ ಹತ್ತು ಮರಗಳನ್ನು ನೆಡಲಾಗುತ್ತದೆ,” ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಾರ್ವಜನಿಕರ ವಿರೋಧದ ಬಗ್ಗೆ ಪ್ರಶ್ನೆ ಮಾಡಿದಾಗ, “ಯಾವ ಯೋಜನೆಯಾದರೂ ವಿರೋಧ ಮಾಡುವವರು ಇರುತ್ತಾರೆ. ನಮ್ಮ ಅಧಿಕಾರಿಗಳು ಮಾತನಾಡಿ ಸಮಸ್ಯೆ ಪರಿಹರಿಸುತ್ತಾರೆ,” ಎಂದರು.
ಪರಿಸರ ಪ್ರೇಮಿಗಳು ಯೋಜನೆಯ ವೆಚ್ಚ ಹಾಗೂ ಪರಿಸರ ಹಾನಿ ಕುರಿತು ಪ್ರಶ್ನೆ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಅವರಿಗೆ ಅದರ ತಾಂತ್ರಿಕ ವಿಷಯ ಗೊತ್ತಿಲ್ಲ. ವಿದ್ಯುತ್ ಉತ್ಪಾದನೆಗೆ ವೆಚ್ಚವಿರುವುದು ಸಹಜ,” ಎಂದುರು.
 





