ಯೋಗ ಮಂದಿರ ಸಭಾಭವನಕ್ಕೆ ಪ್ರಧಾನ ಬಾಗಿಲು ಪೂಜೆ ಶಿವಮೊಗ್ಗ ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಸೋಮನಕೊಪ್ಪದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಸಿದ್ದವೃಷಭೇಂದ್ರ ಯೋಗಾ ಮಂದಿರ ಸಭಾಭವನಕ್ಕೆ ಪ್ರಧಾನ ಬಾಗಿಲು ಅಳವಡಿಸುವ ಪೂಜೆ ಇಂದು ಧಾರ್ಮಿಕ ವೈಭವದೊಂದಿಗೆ ನೆರವೇರಿತು.
ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಮುರಘ ರಾಜೇಂದ್ರ ಮಹಾಸ್ವಾಮಿಗಳು, ಜಡೆಮಠದ ಮಹಾಂತ ಸ್ವಾಮಿಗಳು, ರಾಮದುರ್ಗ ಮಠದ ಶ್ರೀಗಳು, ಮೂಲಗದ್ದೆ ಮಠದ ಶ್ರೀಗಳು, ಹಾರನಹಳ್ಳಿ ಮಠದ ಶ್ರೀಗಳು, ಗುತ್ತಲ ಕಲ್ಮಠದ ಶ್ರೀಗಳು ಸೇರಿದಂತೆ ಅನೇಕ ಧಾರ್ಮಿಕ ಗಣ್ಯರು ಉಪಸ್ಥಿತರಿದ್ದರು.
ರಾಜಕೀಯ ಹಾಗೂ ಗಣ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೆಗೌಡ, ಆಯೂನುರು ಮಂಜುನಾಥ್, ಕೆ.ಇ. ಕಾಂತೇಶ್, ನಟ ಚೇತನ ರುದ್ರುಮುನಿ ಸಜ್ಜನ್ ರೇಣುಕಾರಾಧ್ಯರು, ಸಂತೋಷ ಬಳ್ಳಕೆರೆ ರಾಜಶೇಖರ, ಸೋಮನಾಥ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇನ್ನಿತರರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಂಗೊಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೆಗೌಡ ಅವರು, “ಪ್ರಧಾನ ದ್ವಾರದ ಪೂಜೆಯಲ್ಲಿ ಪಾಲ್ಗೊಳ್ಳುವುದು ಸಂತೋಷದ ಸಂಗತಿ. ಶೀಘ್ರದಲ್ಲೇ ಸಭಾಭವನ ಉದ್ಘಾಟನೆ ನಡೆಯಲಿ” ಎಂದು ಹಾರೈಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಯೋಗ ಮಂದಿರವು ಸಮಾಜಕ್ಕೆ ಮಹತ್ತರ ಕೊಡುಗೆ. ಮುರಘರಾಜೇಂದ್ರ ಮಹಾಸ್ವಾಮಿಗಳಿಗೆ ಧನ್ಯವಾದಗಳು. ಸಭಾಭವನಕ್ಕಾಗಿ ನಮ್ಮ ತಾಯಿ ಹೆಸರಿನಲ್ಲಿ 5 ಲಕ್ಷ ರೂ. ದೇಣಿಗೆ ನೀಡುತ್ತೇನೆ” ಎಂದು ಘೋಷಿಸಿದರು.
ಆಯೂನುರು ಮಂಜುನಾಥ್ ಅವರು, ನಮ್ಮ ಇಬ್ಬರೂ ಸ್ವಾಮಿಜಿಗಳು ಯೋಗಾ ಸಾನ ಪಟುಗಳು ಹೀಂದೆ ಯಾವುದೋ ಓಂದು ಸಮಾಜದವರು ಮಾತ್ರ ಯೋಗ ಕಲಿಯುತಿದ್ದರು ಇಗ ಅರೀತಿ ಇಲ್ಲ “ಹಿಂದೆ ಶಿವಮೊಗ್ಗದಲ್ಲಿ ಬೆಕ್ಕಿನ ಕಲ್ಮಠ ಒಂದೇ ಇತ್ತು, ಇದೀಗ ಅನೇಕ ಮಠಗಳು ಬೆಳೆಯುತ್ತಿವೆ. ಆದರೆ ಭಕ್ತರು ಕೇವಲ ಸ್ವಾಮಿಜಿಗಳ ಪಾಲೊರ್ಸ ಆಗದೆ ಮಠದ ಅನುಯಾಯಿಗಳಾಗಿ, ನಮ್ಮ ಮತ್ತು ರಾಘವೇಂದ್ರ ರ ಆಸನಗಳ ಬಗ್ಗೆ ಕೆಳಬೇಡಿ ನಾವು ಸಮಯಕ್ಕೆ ತಕ್ಕಂತೆ ಆಸಾನ ಶವಾಸನ ಮತ್ತೆ ಬೇರೆ ಆಸಾನ ಎಂದು ನಗೆ ಚಟಾಕಿ ಹಾರಿಸಿದರು ಯಾರು ಇಲ್ಲಿ ಯೋಗಾಸನ ಹೇಳಿಕೋಡುವರು ಎಂದು ಸ್ವಾಮಿಜಿಗೆ ಕೆಳಿದೆ ಅವರೆ ನಾವೆ ಇಲ್ಲಿ ಇದ್ದು ಬರುವ ಭಕ್ತರಿಗೆ ಯೋಗಾಸನಕ್ಕೆ ಹೆಚ್ಚು ಸಮಯವನ್ನು ನೀಡುತ್ತವೆ ಎಂದರು ಕೇಳಿ ಸಂತೋಷವಾಯಿತು ಎಂದರು.
ಕೆ.ಇ. ಕಾಂತೇಶ್ ನಾವು ಹಿಂದು ಸಮಾಜದ ಬಾಂಧವರು ನಾವಲ್ಲರೂ ಒಟ್ಟಾಗಿ ಇರಲು ಸ್ವಾಮೀಜಿಗಳು ಇ ರೀತಿ ಕಾರ್ಯ ಮಾಡುತ್ತಾರೆ ನಮ್ಮ ಕುಟುಂಬ ಕೂಡ ಸಭಾಭವನ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು.
ಬೆಕ್ಕಿನ ಕಲ್ಮಠ ಶ್ರೀಗಳು ಮಾತನಾಡಿ, “ಯೋಗ ಮಂದಿರ ಕಟ್ಟಡಕ್ಕೆ ಏಳು ವರ್ಷಗಳ ಪರಿಶ್ರಮವಿದೆ ಇನ್ನೂ ಮಠಗಳು ಉತ್ಪನ್ನ ಮಾಡಲಿಕ್ಕೆ ಅಗಲ್ಲವಾ ಎನ್ನುತ್ತಾರೆ ಭಕ್ತರು ಯಾವಗಲು ಕಾಣಿಕೆ ಕೆಳಲು ಬರುತ್ತಾರೆ ಎಂತಾರೆ ಅದಕ್ಕೆ ನಾವು ಸುಮ್ಮನೆ ಪೂಜೆ ಮಾಡಿಕೊಂಡು ಇರಬೇಕು ಎನಿಸುತ್ತದೆ ಅದರೆ ಹಾಗೆ ಕೇವಲ ಪೂಜೆ ಮಾಡಿ ಕುಳಿತುಕೊಳ್ಳದೆ, ನೈಜ ಕಾಯಕದಲ್ಲಿ ತೊಡಗಿ, ಕಾಯಕ ಮಾಡುತಿದ್ದೆವೆ ಮಂಜಣ್ಣ ನವರು ಹೇಳಿದರು ನಮ್ಮ ಆಸಾನ ಬಗ್ಗೆ ಹೇಳಲು ಅಗಲ್ಲ ಎಂದು, ನಿಮ್ಮ ಆಸಾನಗಳನ್ನು ಬೀಡಿ ನಮ್ಮ ಆಸಾನಗಳನ್ನು ಈಗಾಲಾದರು ಜೀವನದಲ್ಲಿ ಯೋಗ ಆಸನಗಳನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದುರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಶ್ರೀಗಳು, ಯೋಗ ಪಟುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಭವಿಷ್ಯದ ಯೋಗ ಚಟುವಟಿಕೆಗಳ ಕೇಂದ್ರವಾಗಲಿರುವ ಸಭಾಭವನದ ನಿರ್ಮಾಣಕ್ಕೆ ಆಶೀರ್ವಾದ ಕೋರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
 






