ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸುಳಿಯಲ್ಲಿ ಅರಳಿದ ಅನನ್ಯ ವ್ಯಕ್ತಿತ್ವದ ಯು.ಎನ್.ಸಂಗನಾಳಮಠ

On: September 22, 2025 9:06 PM
Follow Us:
---Advertisement---

ಸುಳಿಯಲ್ಲಿ ಅರಳಿದ ಅನನ್ಯ ವ್ಯಕ್ತಿತ್ವದ ಯು.ಎನ್.ಸಂಗನಾಳಮಠ

ದಾವಣಗೆರೆ ಜಿಲ್ಲೆ ಹೊನ್ನಾಳಿಯ ನಿವೃತ್ತ ಪ್ರಾಚಾರ್ಯರು; ವೈಚಾರಿಕ, ಧಾರ್ಮಿಕ ಲೇಖಕರು; ಕತೆ-ಕವನಗಳ ವಿಮರ್ಶಕರು; ವೈಚಾರಿಕ, ಧಾರ್ಮಿಕ, ಆಧ್ಯಾತ್ಮಿಕ ಕೃತಿಗಳ ರಚನಾಕಾರರು; ಆಕಾಶವಾಣಿ ಚಿಂತನ ಭಾಷಣಕಾರರು; ಅನೇಕ ಪತ್ರಿಕೆಗಳ ಅಂಕಣಕಾರರು; ಕಿರಿಯರ ಬರವಣಿಗೆ ತಿದ್ದಿ ಬರವಣಿಗೆಗೆ ಪ್ರೋತ್ಸಾಹಿಸುವ ಮಾರ್ಗದರ್ಶಕರು; ಬಹುಮುಖಿ ಬಹು ವಿಚಾರಗಳ ವಿಶ್ಲೇ಼ಷಕರು; ಆಯಾ ವಿಚಾರಗಳ ಪರಕಾಯ ಪ್ರವೇಶ ಮಾಡುತ್ತ ಕುಲುಮೆಯಲ್ಲಿ ಕಾದ ಕಬ್ಬಿಣದಂತಿರುವ ಯು.ಎನ್.ಸಂಗನಾಳಮಠ ಅವರದು ಅನನ್ಯ ವ್ಯಕ್ತಿತ್ವ. ಬಯಲು ಸೀಮೆಯಿಂದ ಬಂದು ಅರೆ ಮಲೆನಾಡನಲ್ಲಿ ಜೀವನ ಶೈಲಿಯನ್ನು ಕಟ್ಟಿಕೊಂಡವರು.
ಅಕ್ಷರ ಪ್ರೇಮವನ್ನು ಮೈಗೂಡಿಸಿಕೊಂಡು ವಿಶ್ರಾಂತ ಜೀವನವನ್ನು ಬದಿಗಿಟ್ಟು ಬರವಣಿಗೆಯ ಕೃಷಿಯನ್ನು ಋಷಿಯಂತೆ ತಪದಲ್ಲಿ ತನ್ಮಯರಾಗಿ ಸಾಹಿತ್ಯಾಸಕ್ತ ಮನಸ್ಸುಗಳಿಗೆ ಮಾದರಿ ಪುರುಷರಾಗಿದ್ದಾರೆ. ಸ್ನೇಹಜೀವಿಯಾಗಿ ಕ್ರಿಯಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಇವರ ಹಿರಿಮೆ-ಗರಿಮೆಗಳು ಭಿನ್ನತ್ವದ ಪಥದಲ್ಲಿ ಸಾಗುತ್ತಿವೆ. ವ್ಯಷ್ಟಿ-ಸಮಷ್ಟಿ ವಿಚಾರಗಳ ಬಗ್ಗೆ ಸಮನ್ವಯ ಚಿಂತಕರಾಗಿ ಮೌಲ್ಯಯುತ ಸತ್ವಯುತ ಲೇಖನಗಳನ್ನು ನೀಡಿ ಓದುಗರ ಮನಸ್ಸನ್ನು ಸಮ್ಮೋಹನಕ್ಕೀಡು ಮಾಡಿದ್ದಾರೆ. ಇವರ ೧೦೦೦ಕ್ಕೂ ಹೆಚ್ಚು ಲೇಖನಗಳು ನಾಡಿನ ಅನೇಕ ದಿನಪತ್ರಿಕೆಗಳಲ್ಲಿ, ಕರ್ಮವೀರ ಸಾಪ್ತಾಹಿಕದಲ್ಲಿ. ಅನಂತಪ್ರಕಾಶ, ಸಮಾಜಮುಖಿ, ಹೊಸತು, ಸಂಕ್ರಮಣ, ಸಿದ್ದಗಂಗಾ, ಜೀವನಾಡಿ, ಬಸವಪಥ, ಶರಣ ಮಾರ್ಗ, ಮಾಸಿಕಗಳಲ್ಲಿ ಪ್ರಕಟವಾಗಿವೆ. ಇವರ ನೂರಾರು ಪುಸ್ತಕಗಳು ಗ್ರಂಥಾಲಯವನ್ನು ಸೇರಿವೆ.
ಹಗೆಯನ್ನು ನಗೆಯಿಂದ ಗೆಲುವ ಇವರ ಗುರಿ, ವಯಸ್ಸಿನ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಸ್ವಭಾವಗಳಿಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, .ಚುಟುಕು ಸಾಹಿತ್ಯ ಪರಿಷತ್ತು, ಹೊನ್ನುಡಿ ಕನ್ನಡ ವೇದಿಕೆ ಮುಂತಾದ ಸಂಘ-ಸAಸ್ಥೆಗಳಲ್ಲಿ ಸಕ್ರಿಯ ಸದಸ್ಯಸರನ್ನಾಗಿಸಿವೆ,. ಅಪಾರ ಶಿಷ್ಯ ಬಳಗವನ್ನು, ಸ್ನೇಹ ವಲಯವನ್ನು ಹೊಂದಿದ್ದಾರೆ. ಅವರ ಕ್ರಿಯಾಶೀಲತೆ, ಅವರಲ್ಲಿರುವ ಬತ್ತದ ಚಿಲುಮೆ, ಈ ನೆಲ-ಜಲ ಧಾರ್ಮಿಕ ಪರಿಸರದೊಂದಿಗೆ ಬೆರೆತ ಪರಿಗೆ ರಾಜ್ಯಾದ್ಯಂತ ಅನೇಕ ಸಂಘ-ಸAಸ್ಥೆಗಳ ಪ್ರಶಸ್ತಿಗಳಿಗೆ, ದಾವಣಗೆರೆ ಜಿ. ರಾಜ್ಯೋತ್ವವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಇವರ ಅನುಪಮ ಸೇವೆಗೆ ಸಂದ ಗೌರವ.
ಕಷ್ಟಕರ, ಸಾಧಾರಣ ಜೀವನ ನಡೆಸಿದ ಸಂಗನಾಳಮಠ ಅವರು ಹುಬ್ಬಳ್ಳಿಯಲ್ಲಿ ಅಕ್ಟೋಬರ್ ೭ ೧೯೪೯ ರಂದು ಜನಿಸಿ ೧೯೭೧ ರಲ್ಲಿ ರಾಜ್ಯಶಾಸ್ತçದ ಸ್ನಾತಕೋತ್ತರ ಪದವಿ ಹೊಂದಿ ಕೆಲಕಾಲ ಕರ್ನಾಟಕ ವಿ.ವಿ.ದ ಪ್ರಸಾರಾಂಗದಲ್ಲಿ ಕರ್ತವ್ಯ ನಿರ್ವಹಿಸಿ, ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ, ಕನ್ನಡಪ್ರಭ ಪತ್ರಿಕೆಯ ವರದಿಗಾÀರರಾಗಿ ಕೊನೆಗೆ ೧೯೭೪ರಲ್ಲಿ ಸರ್ಕಾರಿ ಸೇವೆ ಸೇರಿ ಮೊದಲು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ, ನಂತರ ಹೈಸ್ಕೂಲ್ ಉಪಾಧ್ಯಾಯರಾಗಿ, ನಂತರ ಉಪನ್ಯಾಸಕರಾಗಿ ನಿವೃತಿ ಹೊಂದಿದನAತರ ಖಾಸÀಗಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡು ೨೦೨೦ ರಿಂದ ವಿಶ್ರಾಂತ ಜೀವನವನ್ನು ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹಿಗಳಾಗಿ, ಕೃತಿಕಾರರಾಗಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಸಂಗನಾಳಮಠ ಅವರು ಜೇಡರಹುಳು ಬಲೆ ನೇಯುವಂತೆ ೮೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿದ್ದು, ಇನ್ನೂ ೨೫-೩೦ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ೭೬ರ ಇಳಿ ವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆ ಉತ್ಸಾಹ ಕುಂದಿಲ್ಲ. ಇನ್ನೂ ಸಭೆಗಳಲ್ಲಿ ಉಪನ್ಯಾಸವನ್ನು ಮಾಡುತ್ತಾರೆ. ವಿಶ್ಲೇಷಕರಾಗಿ, ಸಾಹಿತ್ಯ ಶಕ್ತಿಯಾಗಿ ಇನ್ನೂ ನೂರ್ಕಾಲ ನಮ್ಮೊಂದಿಗಿದ್ದು ಗುರುತರವಾದ ಗುರುತನ ಸಾಧಿಸಲಿ.

ವರದಿ.

ಚಿಕ್ಕಜೋಗಿಹಳ್ಳಿ ನಾಗರಾಜ್ ಲೇಖಕರು,ಕಲಾವಿದರು,
ಹೊನ್ನಾಳಿ.
ಮೊ.: ೯೪೪೯೦೯೩೯೦೨

Sathish munchemane

Join WhatsApp

Join Now

 

Read More