ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗದಲ್ಲಿ “ನಮೋ ಯುವ ರನ್” ಮ್ಯಾರಥಾನ್.!

On: September 19, 2025 1:59 PM
Follow Us:
---Advertisement---

ಶಿವಮೊಗ್ಗ: ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಬಿ.ಜೆ.ಪಿ.ಯುವ ಮೋಚಾ೯ ಅಧ್ಯಕ್ಷ ಪ್ರಶಾಂತ ಕುಕ್ಕೆ ಯವರ ನುಡಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ “ನಮೋ ಯುವ ರನ್” ನಶೆ ಮುಕ್ತ ಭಾರತಕ್ಕಾಗಿ, ಎಂಬ ಹೆಸರಿನಲ್ಲಿ 3.5 ಕಿಮೀ ಮ್ಯಾರಥಾನ್ ಏರ್ಪಡಿಸಲಾಗಿದೆ. ದೇಶವ್ಯಾಪಿ 100 ಕಡೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಮ್ಯಾರಥಾನ್ ಸೆಪ್ಟೆಂಬರ್ 21ರಂದು ಬೆಳಿಗ್ಗೆ 6.30ಕ್ಕೆ ನೆಹರೂ ಸ್ಟೇಡಿಯಂ (ಶಿವಮೂರ್ತಿ ಸರ್ಕಲ್) ನಿಂದ ಪ್ರಾರಂಭವಾಗಲಿದ್ದು, ಮಾರ್ಗವು ಮಹಾವೀರ ವೃತ್ತ–ಡಿವಿಎಸ್ ವೃತ್ತ–ಬಿಎಚ್ ರಸ್ತೆ–ಸಾವರ್ಕರ್ ವೃತ್ತ–ಗೋಪಿ ವೃತ್ತ–ಜೈಲು ವೃತ್ತ–ಕುವೆಂಪು ರಸ್ತೆ ಮೂಲಕ ಮರಳಿ ನೆಹರೂ ಸ್ಟೇಡಿಯಂನಲ್ಲಿ ಮುಕ್ತಾಯಗೊಳ್ಳಲಿದೆ.

ಈ ಸ್ಪರ್ಧೆಯಲ್ಲಿ ಸರಿಸುಮಾರು 5000 ಕ್ಕೂ ಹೆಚ್ಚು ಜನರು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದು, ಎಲ್ಲರಿಗೂ ಉಚಿತ ಟೀ-ಶರ್ಟ್‌ಗಳನ್ನು ವಿತರಿಸಲಾಗುತ್ತದೆ. ಆರು ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ವಯೋಮಾನದ ಪ್ರಕಾರ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರಥಮ (₹5000), ದ್ವಿತೀಯ (₹3000), ತೃತೀಯ (₹2000) ಬಹುಮಾನಗಳನ್ನು ನೀಡಲಾಗುತ್ತದೆ.

  1. ಇತ್ತೀಚಿಗೆ  ಶಿವಮೊಗ್ಗ.  ಬಿ.ಜೆ.ಪಿ.ಯುವ ಮೋಚಾ೯ ಜಿಲ್ಲೆಯಲ್ಲಿ ಸಂಘಟನೆ ಕಾರ್ಯಕ್ರಮ ಕಡಿಮೆ  ಯಾಗಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಹಾಗೆನು ಇಲ್ಲ ಹಲವು  ಕಾರ್ಯಕ್ರಮ ನಡೆಸಿದ್ದೆವೆ ಎಂದು  ಕುಕ್ಕೆ ಅವರು ರಕ್ತ ಶಿಬಿರದ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ರಾಜ್ಯ ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ ಹಾಲಿ-ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪ್ರಮುಖರು ಹಾಜರಾಗಲಿದ್ದಾರೆ.

ಚಿತ್ರರಂಗದಿಂದ ನಟಿ ಕಾರುಣ್ಯ ರಾಮ್ ಮತ್ತು ಸ್ಥಳೀಯ ಪ್ರತಿಭೆ ನಟ ಗೌರಿಶಂಕರ್ ಉಪಸ್ಥಿತರಿರಲಿದ್ದು, ವಿಶೇಷ ಅತಿಥಿಗಳಾಗಿ ಆಥ್ಲೆಟಿಕ್‌ ಕ್ಷೇತ್ರದ ಸೌಮ್ಯ ಸಾವಂತ್ ಹಾಗೂ ಗ್ರ್ಯಾಂಡ್ ಚೆಸ್ ಮಾಸ್ಟರ್ ಸ್ಟ್ಯಾನಿ ಜಿ. ಅಂಬಾಸಿಡರ್‌ಗಳಾಗಿ ಪಾಲ್ಗೊಳ್ಳಲಿದ್ದಾರೆ.“ನಮೋ ಯುವ ರನ್” ಗಿನ್ನಿಸ್ ದಾಖಲೆಯ ಗುರಿಯೊಂದಿಗೆ ಯಶಸ್ವಿಯಾಗಿ ನಡೆಯಬೇಕೆಂಬುದು ಆಯೋಜಕರ ಆಶಯವಾಗಿದೆ. ಹೆಚ್ಚಿನ ಮಾಹಿತಿಗೆ ಸಂಜಯ್ ಕುಮಾರ್ (9611312971), ಧೃವ ಕುಮಾರ್ (9980299905), ಸತೀಶ್ ರಾಮೆನಕೊಪ್ಪ (6361271846), ರಾಹುಲ್ ಬಿದರೆ (8095337876) ಇವರನ್ನು ಸಂಪರ್ಕಿಸಬಹುದು.

Sathish munchemane

Join WhatsApp

Join Now

 

Read More