ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಮಲಗೋಪ್ಪದಲ್ಲಿ ದಾರುಣ ರಸ್ತೆ ಅಪಘಾತ: ಮೆಡಿಕಲ್ ರೆಪ್ ಮಹೇಶ್ ದುರ್ಮರಣ.!

On: September 14, 2025 11:00 PM
Follow Us:
---Advertisement---

ಶಿವಮೊಗ್ಗದ ಮಲಗೋಪ್ಪದಲ್ಲಿ ನಡೆದ ದುರ್ಘಟನೆಯಲ್ಲಿ ಯುವ ಮೆಡಿಕಲ್ ಪ್ರತಿನಿಧಿ ಮಹೇಶ್ ಅವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಹೇಶ್ ಅವರು ತಮ್ಮ ದ್ವಿಚಕ್ರ ವಾಹನ ಎಥರ್ ಎಲೆಕ್ಟ್ರಿಕ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ರಸ್ತೆಯಲ್ಲಿದ್ದ ಆಳವಾದ ಗುಂಡಿಯನ್ನು ತಪ್ಪಿಸಲು ಯತ್ನಿಸುವಾಗ ಬೈಕ್ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿ ಯಾಗಿ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದರು  ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ದುರ್ಮರಣ ಕಂಡಿದ್ದಾರೆ.

ಮಹೇಶ್ ಅವರು ನಗರದಲ್ಲೇ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು.    ಅವರು ಅಕಾಲಿಕವಾಗಿ ಸಾವನ್ನಪ್ಪಿರುವುದು ಆಪ್ತರಿಗೆ ಹಾಗೂ ಪರಿಚಿತರಿಗೆ ಆಘಾತ ಉಂಟುಮಾಡಿದೆ. ಮೃತರು ಪತ್ನಿ ಹಾಗೂ ಒಂದು ಸಣ್ಣ ಮಗುವಿಗೆ ಅವಲಂಬಿತರಾಗಿದ್ದು, ಅವರ ಅಕಾಲಿಕ ನಿಧನವು ಕುಟುಂಬಕ್ಕೆ ಭಾರೀ ದುಃಖ ತಂದಿದೆ.

ಗ್ರಾಮಸ್ಥರ ಪ್ರಕಾರ, ಮಲಗೋಪ್ಪ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ಸಾರ್ವಜನಿಕರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ. ಈ ಕಾರಣದಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಅಪಘಾತಗಳ ಅಪಾಯ ಹೆಚ್ಚಾಗಿದೆ. ಮಹೇಶ್ ಅವರ ಸಾವಿಗೆ ಸಾರ್ವಜನಿಕರು ರಸ್ತೆ ನಿರ್ವಹಣೆಯ ಕೊರತೆಯೇ ಕಾರಣ ಎಂದು ಕಿಡಿಕಾರಿದ್ದಾರೆ.

ಸ್ಥಳಕ್ಕೆ ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಸ್ಥಳೀಯರು ರಸ್ತೆಗಳನ್ನು ತುರ್ತುವಾಗಿ ದುರಸ್ತಿ ಮಾಡುವಂತೆ ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ  ನಿರ್ಮಾಣ ಇಲಾಖೆಗೆ ಸಾರ್ವಜನಿಕರು ಒತ್ತಾಯ ವ್ಯಕ್ತಪಡಿಸಿದ್ದಾರೆ.

ಮಹೇಶ್ ಅವರ ಅಕಾಲಿಕ ಸಾವು ಮಲಗೋಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದುಃಖದ ವಾತಾವರಣವನ್ನು ಉಂಟುಮಾಡಿದೆ. ಕುಟುಂಬಕ್ಕೆ ಸಮುದಾಯದ ಜನರು ಸಾಂತ್ವನ ಹೇಳುತ್ತಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು  ಪ್ರಾರ್ಥಿಸುತ್ತಿದ್ದಾರೆ.

Sathish munchemane

Join WhatsApp

Join Now

 

Read More