ಇಂದು ಬೆಕ್ಕಿನಕಲ್ಮಠದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮತಾನಡಿದ ಎಸ್. ರುದ್ರೇಗೌಡರು ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳ ಮೂಲಕ ಜನರ ಮನಸ್ಸುಗಳನ್ನು ಒಗ್ಗೂಡಿಸಿ, ಪರಸ್ಪರ ಭ್ರಾತೃತ್ವದ ಬೆಸುಗೆ ಹಾಕಿ ಸಾಮರಸ್ಯವನ್ನು ಕಾಪಾಡುವುದು ಇಂದು ಅತ್ಯಂತಹೆಚ್ಚು ಅವಶ್ಯವಾಗಿದೆ. ನಾಗರಿಕ ಸೌಲಭ್ಯಗಳು ಹೆಚ್ಚಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ, ವೈಚಾರಿಕತೆ, ಪ್ರಸ್ತುತತೆಯ ಉತ್ತುಂಗದಲ್ಲಿರುವ ನಾವು ಆದರ್ಶದಹಾದಿಯನ್ನುಮರೆಯಬಹುದಾಗಿದೆ. ನೈತಿಕ ಅಧಃಪಥನಕ್ಕೆ ಇಳಿಯಲು ಇದನ್ನರಿತ ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ವು, ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತಿ, ಅಳಿಯುತ್ತಿರುವಆದರ್ಶಗಳ ಪುನರುಜ್ಜಿವನಕ್ಕೆ ಪ್ರಯತ್ನಿಸುವ ಉದ್ದೇಶದಿಂದ, ‘ಬಸವ ಸಂಸ್ಕೃತಿ ಅಭಿಯಾನ’ವನ್ನು ನಡೆಸುತ್ತಿದೆ ಎಂದರು.
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಮುರುಘಾರಾಜೇಂದ್ರ ಸ್ವಾಮಿಗಳು ಮಾತನಾಡುತ್ತಾ ಈ ಅಭಿಯಾನವು 2025ರ ಸೆಪ್ಟೆಂಬರ್ 01 ರಿಂದ ಅಕ್ಟೋಬರ್ 05ರವರೆಗೆ ಬಸವಣ್ಣನವರ ಜನ್ಮಸ್ಥಳ ಬಸವನಬಾಗೆವಾಡಿಯಿಂದ ಆರಂಭಗೊಂಡು,ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.
ಈ “ಬಸವ ಸಂಸ್ಕೃತಿ ಅಭಿಯಾನ”ವು ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಂಚರಿಸಲಿದೆ, ನಮ್ಮ ಶಿವಮೊಗ್ಗ ಜಿಲ್ಲೆಗೆ 17 ಸೆಪ್ಟೆಂಬರ್ 2025 ರಂದು ಆಗಮಿಸಲಿದೆ. ಈ ಸಂದರ್ಭದಲ್ಲಿ ನಾಡಿನ ಹಲವು ಪ್ರಮುಖ ಮಠಗಳ ಜಗದ್ಗುರುಗಳು, ಮಹಾಸ್ವಾಮಿಗಳು, ಪ್ರಜ್ಞಾವಂತ ಚಿಂತಕರು, ಅನುಭಾವಿಗಳು, ಕಲಾವಿದರು ಆಗಮಿಸಲಿದ್ದಾರೆ. ಜಿಲ್ಲೆಯ ಸಮಸ್ತ ತರಣ ಬಂಧುಗಳು-ನಾಗರೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲು ಕೋರಿದೆ.
17 ಸೆಪ್ಟೆಂಬರ್ 2025, ಬುಧವಾರ ಬನ್ನಿ… ಭಾಗವಹಿಸಿ… ಆದರ್ಶಗಳ ಪುನರುಜ್ಜಿವನಕ್ಕೆ ಕೈ ಜೋಡಿಸೋಣ ಸಾರ್ವಜನಿಕರು ಯಾವಗ ಇದರ ಸದುಪಯೋಗ ಪಡೆಯುತ್ತಾರೋ ಅಗ
ಇ ಅಭಿಯಾನ ಯಶಸ್ವಿ ಯಾಗುತ್ತದೆ ಎಂದರು ಈ ಪತ್ರಿಕಾ ಗೋಷ್ಠಿಯಲ್ಲಿ ಮ.ನಿ.ಪ್ರ.ಡಾ. ಬಸವ ಮರುಳಸಿದ್ದ ಮಹಾಸ್ವಾಮಿಗಳು, ಎಸ್. ಷಡಾಕ್ಷರಿ, ಪಿ.ರುದ್ರೇಶ್,ಸಂತೋಷ ಬಳ್ಳೇಕೆರೆ, ರೇಣುಕಾ ರಾಧ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.