ಶಿವಮೊಗ್ಗ, ನಗರದ ಮಲವಗೊಪ್ಪದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.ಸಹೋದರನ ಜೊತೆ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವತಿ ರಸ್ತೆಗೆ ಬಿದ್ದಿದ್ದು ಆಕೆಯ ಮೇಲೆ ಖಾಸಗಿ ಸಿಟಿ ಬಸ್ ಚಲಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವು ಕಂಡಿದ್ದಾಳೆ.
ಘಟನೆ ಇಂದು ಬೆಳಿಗ್ಗೆ ಸುಮಾರು 9-30 ಕ್ಕೆ ನಡೆದಿದೆ. ಮೃತ ಯುವತಿಯ ಕವಿತಾ (26) ಎನ್ನಲಾಗಿದೆ. ಕವಿತಾ ಸಹೋದರ ಸಂತೋಷ್ ಜೊತೆ ಬೈಕ್ನಲ್ಲಿ ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆಬರುತ್ತಿದ್ದರು.
ಕುರುಕಲು ಪದಾರ್ಥ ಮಾರಾಟ ಮಾಡುವ ದ್ವಿಚಕ್ರ ವಾಹನದವನು ಮಿತಿಮೀರಿ ಲಗೇಜ್ ಹೇರಿಕೊಂಡು ಬರುವಾಗ ಅದರ ಪ್ಯಾಕೆಟ್ ತಗುಲಿ ಕವಿತಾ ಮತ್ತು ಸಂತೋಷ್ ಕೆಳಗೆ ಬಿದ್ದಿದ್ದರು.ಸಂತೋಷ್ ರಸ್ತೆಯ ಫುಟ್ ಪಾತ್ ಕಡೆ ಬಿದ್ದರೆ ಕವಿತಾ ರಸ್ತೆ ಮಧ್ಯೆ ಬಿದ್ದಾಗ ಹಿಂದಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಕವಿತಾ ತಲೆಯ ಮೇಲೆ ಹರಿದಿದೆ. ಪರಿಣಾಮ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕವಿತಾಳಿಗೆ ಮದುವೆ ನಿಶ್ಚಯವಾಗಿದ್ದು 15 ದಿನಗಳಲ್ಲಿ ಹಸೆಮಣೆ ಏರಬೇಕಿತ್ತು.