ಶಿವಮೊಗ್ಗ:ನಗರದ ಗುಡಲಕ್ ವೃತ್ತ ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಹತ್ತಿರ, ಗೋಪಾಳ ಗೌಡ ಬಡಾವಣೆಯಲ್ಲಿ ಎಲೈಟ್ ಪ್ರೋಸ್ತೆಟಿಕ್ಸ್ ಅಂಡ್ ಆರ್ಥೋಟಿಕ್ಸ್ ನೂತನ ಚಿಕಿತ್ಸಾಲಯವು ಸೆಪ್ಟೆಂಬರ್ 4ರಂದು ಭವ್ಯವಾಗಿ ನೂತನ ಸಂಕೀರ್ಣದಲ್ಲಿ ಉದ್ಘಾಟನೆ ಗೊಂಡಿದೆ. ಮೂಳೆ ಚಿಕಿತ್ಸೆ, ಪ್ರೋಸ್ತೆಟಿಕ್ ಹಾಗೂ ಆರ್ಥೋಟಿಕ್ ಪರಿಕರಗಳ ಸೇವೆಗಳನ್ನು ಒಂದೇ ತಾಣದಲ್ಲಿ ಒದಗಿಸುವ ವಿಶೇಷತೆ ಈ ಚಿಕಿತ್ಸಾಲಯಕ್ಕೆ ಹೊಂದಿದೆ.
ಅಂಗವಿಕಲತೆ, ಅಪಘಾತದ ಪರಿಣಾಮ, ಜನ್ಮತಃ ಮೂಳೆ ಸಮಸ್ಯೆ ಅಥವಾ ಇತರೆ ಶಾರೀರಿಕ ಅಸಮರ್ಥತೆಯಿಂದ ಬಳಲುವವರಿಗೆ ಅಗತ್ಯವಿರುವ ಕೃತಕ ಅಂಗಗಳು, ಬೆಂಬಲ ಸಾಧನಗಳು ಹಾಗೂ ಸಂಬಂಧಿತ ವೈದ್ಯಕೀಯ ಪರಿಹಾರಗಳು ಇಲ್ಲಿ ಲಭ್ಯವಾಗುತ್ತವೆ. ಇದರಿಂದ ಜನರು ತಮ್ಮ ತೊಂದರೆ ನಿವಾರಣೆಗೆ ದೂರದೂರಕ್ಕೆ ಹೋಗುವ ಅಗತ್ಯವಿಲ್ಲದೇ ಸ್ಥಳೀಯ ಮಟ್ಟದಲ್ಲಿಯೇ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ನಗರದಲ್ಲಿ ಇಂತಹ ಸೌಲಭ್ಯಗಳ ಕೊರತೆ ಇದುವರೆಗೆ ಕಂಡುಬಂದಿದ್ದು, ಈಗ ಈ ಕೇಂದ್ರದ ಆರಂಭದಿಂದ ನಾಗರಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಶಾರೀರಿಕ ಅಸಮರ್ಥರು ಜೀವನದಲ್ಲಿ ಸ್ವಾವಲಂಬನೆ ಸಾಧಿಸಲು ಬೇಕಾದ ಬೆಂಬಲವನ್ನು ಈ ಚಿಕಿತ್ಸಾಲಯದ ಮೂಲಕ ಪಡೆಯಬಹುದಾಗಿದೆ.
ಉದ್ಘಾಟನಾ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಗೋವಿಂದರಾಜ್ ಮಾತನಾಡಿ, “ಅಂಗವಿಕಲರಿಗೆ ಇದು ದೊಡ್ಡ ಸಹಾಯವಾಗಲಿದೆ. ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಚಿಕಿತ್ಸಾಲಯವನ್ನು ಸದುಪಯೋಗ ಮಾಡಿಕೊಂಡು ನೋವು ನಿವಾರಣೆಗೆ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
ನಗರದಲ್ಲಿ ಜನಸಾಮಾನ್ಯರ ಆರೋಗ್ಯ ಮತ್ತು ಪುನಶ್ಚೇತನ ಸೇವೆಗೆ ಹೊಸ ಅಧ್ಯಾಯವನ್ನು ಬರೆದಿರುವ ಈ ಚಿಕಿತ್ಸಾಲಯವು ಶಾರೀರಿಕ ಅಸಮರ್ಥತೆಯಿಂದ ಬಳಲುವವರಿಗೆ ಒಂದು ಆಶಾಕಿರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.