ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.!?

On: July 30, 2025 8:03 AM
Follow Us:
---Advertisement---

ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಗಾಜನೂರು ಅಗ್ರಹಾರದ ಬಳಿ ಇಂದು ಬೆಳಗಿನ ಜಾವ ಅಪಘಾತ (Mishap) ಸಂಭವಿಸಿದೆ.

ಖಾಸಗಿ ಬಸ್ಸಿನ ನಿರ್ವಾಹಕ ಅಣ್ಣಪ್ಪ ಮೃತರಾಗಿದ್ದಾರೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಸೇರಿ ವಿವಿಧೆಡೆ ದಾಖಲು ಮಾಡಲಾಗಿದೆ.

ಉಮೇಶ್(50), ಪ್ರಸಾದ್(40), ವಿಷ್ಣು(21), ಮಂಜುನಾಥ್ (45), ಸುಜಾತಾ(40), ಅನಂದ್ ನಾಯ್ಕ್(50), ನೀಲಾಂಬಿಕಾ(45), ಪ್ರಸಾದ್ (43), ಬಿಂದು(20), ಶಶಾಂಕ್ (20), ಲಕ್ಷ್ಮೀ(35), ಶ್ರೀರಾಮುಲು(42) ಹಾಗೂ ಕಾರ್ತಿಕ್ (32) ಎಂಬುವರು ಗಾಯಗೊಂಡಿದ್ದಾರೆ.

ಖಾಸಗಿ ಬಸ್‌ ಮಂಗಳೂರಿನಿಂದ ಚಳ್ಳಕೆರೆಗೆ ತೆರಳುತಿತ್ತು ಎಂದು ತಿಳಿದು ಬಂದಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬಸ್ಸು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನ ಎಡ ಬದಿ ಸಂಪೂರ್ಣ ಹಾನಿಯಾಗಿದೆ. ಸೀಟುಗಳು ಕಿತ್ತು ಬಂದಿವೆ. 

ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯಿಂದಾಗ ಈ ಭಾಗದಲ್ಲಿ ರಸ್ತೆ ಸಂಚಾಕ್ಕೆ ಅಡಚಣೆಯಾಗಿತ್ತು.

Sathish munchemane

Join WhatsApp

Join Now

 

Read More