ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಭದ್ರಾವತಿ ತಾಲೂಕಿನ ಹಂಚಿನಸಿದ್ದಪುರದಲ್ಲಿ ಗುರುವಂದನೆ ಕಾರ್ಯಕ್ರಮ.!

On: July 28, 2025 12:04 PM
Follow Us:
---Advertisement---

ಭದ್ರಾವತಿ ತಾಲೂಕಿನ ಹಂಚಿನಸಿದ್ದಪುರದ ಮುರಾರ್ಜಿ ದೆಸಾಯಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ 2024-2025 ರ sslc ವಿದ್ಯಾರ್ಥಿಗಳ ಪೋಷಕರು  ವತಿಯಿಂದ ಶಿಕ್ಷಕರಿಗೆ ಗೌರವ ಸಲ್ಲಿಸುವ ಗುರುವಂದನೆ ಕಾರ್ಯಕ್ರಮ ಭಾನುವಾರ ನೆರೆವೇರಿತು. ಕಾರ್ಯಕ್ರಮದಲ್ಲಿ ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಸಾಧನೆಗೆ ವಿಶಿಷ್ಟವಾಗಿ ಬೆಳಕು ಚೆಲ್ಲಿತು. ಶೇಕಡಾ 100ರಷ್ಟು ಫಲಿತಾಂಶದೊಂದಿಗೆ 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಸಾಧನೆಗೆ ಶಾಲಾ ಶಿಕ್ಷಕರ ಪರಿಶ್ರಮದಂತೆ ಬೂದಾನಿಗಳು ಸಿದ್ದಪ್ಪ ಗೌಡ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ರಂಗಪ್ಪ ಎಂ.ಬಿ. ಅವರು ಶಾಲಾ ಶಿಕ್ಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭಾವನಾತ್ಮಕವಾಗಿ ಮಾತನಾಡಿದರು.

ಮುಖ್ಯಶಿಕ್ಷಕ ಹೆಚ್.ಎಮ್. ಗಣೇಶ್ ಅವರು “ಇದು ನಮ್ಮ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂಯುಕ್ತ ಪರಿಶ್ರಮದ ಫಲ. ಈ ಸರ್ಕಾರದ ಶಾಲೆ ಮಾದರಿಯಾಗಿ Parent Communityಗೆ ಗೌರವ ಪಡೆದಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Sathish munchemane

Join WhatsApp

Join Now

 

Read More