ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಿಗಂದೂರು ಸೇತುವೆ ಮೊದಲ ಹಂತದ ಲೋಡ್‌ ಟೆಸ್ಟ್‌ನಲ್ಲಿ ಪಾಸ್‌; ಉದ್ಘಾಟನೆ ಯಾವಾಗ? ಲಾಂಚ್‌ ಸೇವೆ ನಿಲ್ಲಿಸುತ್ತಾರಾ?

On: June 28, 2025 8:20 PM
Follow Us:
---Advertisement---
  • ಶಿವಮೊಗ್ಗ: ಬಹು ನಿರೀಕ್ಷಿತ ಸಿಗಂದೂರಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಸೇತುವೆ ಈಗ ಉದ್ಘಾಟನೆಗೆ ಬಹುತೇಕ ಸಿದ್ದವಾಗಿದೆ. ಲಾರಿಗಳಲ್ಲಿ ತೂಕ ತುಂಬಿ ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದ್ದು, ಮೊದಲ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ

ಸದ್ಯ ಸೇತುವೆಯ ಪರೀಕ್ಷೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೊಳೆಬಾಗಿಲು ಮತ್ತು ಕಳಸವಳ್ಳಿ ನಡುವೆ 2.14 ಕಿ.ಮೀ ಉದ್ದದ ಸೇತುವೆಯನ್ನು ಕಟ್ಟಲಾಗಿದೆ. ಇದು ನಮ್ಮ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ. ಸೇತುವೆಯ ಒಂದು ಭಾಗವನ್ನು ಎಕ್ಸ್‌ಟ್ರಾ ಡೋಸ್ ಪೋರ್ಷನ್ ಎಂದು ಕರೆಯುತ್ತಾರೆ. ಉಳಿದ ಭಾಗವನ್ನು ಬ್ಯಾಲೆನ್ಸ್ ಕ್ಯಾಂಟಿಲಿವರ್ ಎಂದು ಕರೆಯುತ್ತಾರೆ. ಸದ್ಯಕ್ಕೆ ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದಲ್ಲಿ ಲೋಡ್ ಟೆಸ್ಟಿಂಗ್ ಮಾಡಲಾಗಿದೆ.

ಲೋಡ್ ಟೆಸ್ಟ್ ಅಂದರೆ ಏನು? ಇದನ್ನು ಹೇಗೆ ಮಾಡುತ್ತಾರೆ?

ಸೇತುವೆಯ ಮೇಲೆ ಭಾರವನ್ನು ಹಾಕಿ ಪರೀಕ್ಷೆ ಮಾಡುವುದೇ ಲೋಡ್ ಟೆಸ್ಟ್. ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದ ಪ್ರತಿ ಭಾಗಕ್ಕೆ 100 ಟನ್ ತೂಕವನ್ನು ಹಾಕಲಾಗುತ್ತದೆ. ಮೊದಲಿಗೆ 25 ಟನ್ ತೂಕವನ್ನು ಹಾಕುತ್ತಾರೆ. ನಂತರ ಪ್ರತಿ ಗಂಟೆಗೆ 25 ಟನ್ ತೂಕವನ್ನು ಹೆಚ್ಚಿಸುತ್ತಾರೆ. ನಾಲ್ಕು ಗಂಟೆಗಳಲ್ಲಿ 100 ಟನ್ ತೂಕವನ್ನು ಹಾಕಲಾಗುತ್ತದೆ. ತೂಕ ಹಾಕಿದಾಗ ಸೇತುವೆಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಾರೆ.

ಲೋಡ್ ಟೆಸ್ಟ್ ಮಾಡುವಾಗ ಸೇತುವೆಯಲ್ಲಿ 38 ಎಂ.ಎಂ.ವರೆಗೆ ವಿಚಲನೆ ಆಗಬಹುದು. ಆದರೆ ಸಿಗಂದೂರು ಸೇತುವೆಯಲ್ಲಿ ಕೇವಲ 22 ಎಂ.ಎಂ. ವಿಚಲನೆ ಕಂಡುಬಂದಿದೆ. ತೂಕವನ್ನು ತೆಗೆದಾಗ ವಿಚಲನೆ 0 ಎಂ.ಎಂ.ಗೆ ಬಂದಿದೆ. ಇದರಿಂದ ಸೇತುವೆ ಪಾಸಾಗಿದೆ ಎಂದು ತಿಳಿದಿದೆ. “ನಮ್ಮ ಸೇತುವೆ ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದ್ದಾಗಿದೆ ಎಂಬುದು ಈ ಪರೀಕ್ಷೆಯಿಂದ ತಿಳಿದು ಬಂದಿದೆ” ಎಂದು ಇಂಜಿನಿಯರ್ ಪೀರ್ ಪಾಷಾ ಹೇಳಿದ್ದಾರೆ.

ಮತ್ತೊಮ್ಮೆ ಸಿಗಂದೂರು ಸೇತುವೆ ಪರೀಕ್ಷೆ

ಮುಂದಿನ ವಾರ ಮತ್ತೊಂದು ಪರೀಕ್ಷೆ ನಡೆಯಲಿದೆ. ಮೊದಲ ಪರೀಕ್ಷೆಯಲ್ಲಿ ಸೇತುವೆ ಪಾಸ್ ಆಗಿದೆ. ಎರಡನೇ ಹಂತದ ಲೋಡ್ ಟೆಸ್ಟ್ ಮಾಡಲು ಅನುಮತಿ ಕೇಳಲಾಗಿದೆ. ಈ ಪರೀಕ್ಷೆಯನ್ನು ಕೇಬಲ್ ಇರುವ ಎಕ್ಸ್‌ಟ್ರಾ ಡೋಸ್ ಭಾಗದಲ್ಲಿ ಮಾಡುತ್ತಾರೆ. ಮೊದಲಿನಂತೆ 100 ಟನ್ ಭಾರದ ಲಾರಿಗಳನ್ನು ತಂದು ಸೇತುವೆಯ ಮೇಲೆ ನಿಲ್ಲಿಸಿ ಪರೀಕ್ಷೆ ಮಾಡಲಾಗುತ್ತದೆ. ಸೇತುವೆ ಕಟ್ಟಿದ ಕಂಪನಿಯೇ ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುತ್ತದೆ. ನಂತರ ಪ್ರತಿ ಆರು ತಿಂಗಳಿಗೊಮ್ಮೆ ನಿರ್ವಹಣೆ ಮಾಡಬೇಕು. “ನಿಯಮಿತವಾಗಿ ನಿರ್ವಹಣೆ ಮಾಡಿದರೆ 100 ವರ್ಷವಾದರು ಸೇತುವೆಗೆ ಯಾವುದೆ ಸಮಸ್ಯೆ ಆಗುವುದಿಲ್ಲ” ಎಂದು ಮುಖ್ಯ ಇಂಜಿನಿಯರ್ ಪೀರ್ ಪಾಷಾ ಹೇಳಿದ್ದಾರೆ.

ಸೇತುವೆಗೆ 423 ಕೋಟಿ ರೂ ವೆಚ್ಚ

ಸಿಗಂದೂರು ಸೇತುವೆಯನ್ನು 423.15 ಕೋಟಿ ರೂ. ಖರ್ಚು ಮಾಡಿ ಕಟ್ಟಲಾಗಿದೆ. ಇದು 2.14 ಕಿ.ಮೀ ಉದ್ದ ಇದೆ. ಸೇತುವೆ 16 ಮೀಟರ್ ಅಗಲವಿದೆ. ವಾಹನಗಳು ಹೋಗಲು ಎರಡು ದಾರಿಗಳಿವೆ. ಜನರು ನಡೆಯಲು ಎರಡು ಕಡೆ 1.5 ಮೀಟರ್ ಅಗಲದ ಫುಟ್‌ಪಾತ್ ಇದೆ

ಸಿಗಂದೂರು ಸೇತುವೆ ಮೊದಲ ಹಂತದ ಲೋಡ್‌ ಟೆಸ್ಟ್‌ನಲ್ಲಿ ಪಾಸ್‌; ಉದ್ಘಾಟನೆ ಯಾವಾಗ? ಲಾಂಚ್‌ ಸೇವೆ ನಿಲ್ಲಿಸುತ್ತಾರಾ?
ಶಿವಮೊಗ್ಗ: ಬಹು ನಿರೀಕ್ಷಿತ ಸಿಗಂದೂರಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಸೇತುವೆ ಈಗ ಉದ್ಘಾಟನೆಗೆ ಬಹುತೇಕ ಸಿದ್ದವಾಗಿದೆ. ಲಾರಿಗಳಲ್ಲಿ ತೂಕ ತುಂಬಿ ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದ್ದು, ಮೊದಲ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ

ಸದ್ಯ ಸೇತುವೆಯ ಪರೀಕ್ಷೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೊಳೆಬಾಗಿಲು ಮತ್ತು ಕಳಸವಳ್ಳಿ ನಡುವೆ 2.14 ಕಿ.ಮೀ ಉದ್ದದ ಸೇತುವೆಯನ್ನು ಕಟ್ಟಲಾಗಿದೆ. ಇದು ನಮ್ಮ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ. ಸೇತುವೆಯ ಒಂದು ಭಾಗವನ್ನು ಎಕ್ಸ್‌ಟ್ರಾ ಡೋಸ್ ಪೋರ್ಷನ್ ಎಂದು ಕರೆಯುತ್ತಾರೆ. ಉಳಿದ ಭಾಗವನ್ನು ಬ್ಯಾಲೆನ್ಸ್ ಕ್ಯಾಂಟಿಲಿವರ್ ಎಂದು ಕರೆಯುತ್ತಾರೆ. ಸದ್ಯಕ್ಕೆ ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದಲ್ಲಿ ಲೋಡ್ ಟೆಸ್ಟಿಂಗ್ ಮಾಡಲಾಗಿದೆ.

ಲೋಡ್ ಟೆಸ್ಟ್ ಅಂದರೆ ಏನು? ಇದನ್ನು ಹೇಗೆ ಮಾಡುತ್ತಾರೆ?
ಸೇತುವೆಯ ಮೇಲೆ ಭಾರವನ್ನು ಹಾಕಿ ಪರೀಕ್ಷೆ ಮಾಡುವುದೇ ಲೋಡ್ ಟೆಸ್ಟ್. ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದ ಪ್ರತಿ ಭಾಗಕ್ಕೆ 100 ಟನ್ ತೂಕವನ್ನು ಹಾಕಲಾಗುತ್ತದೆ. ಮೊದಲಿಗೆ 25 ಟನ್ ತೂಕವನ್ನು ಹಾಕುತ್ತಾರೆ. ನಂತರ ಪ್ರತಿ ಗಂಟೆಗೆ 25 ಟನ್ ತೂಕವನ್ನು ಹೆಚ್ಚಿಸುತ್ತಾರೆ. ನಾಲ್ಕು ಗಂಟೆಗಳಲ್ಲಿ 100 ಟನ್ ತೂಕವನ್ನು ಹಾಕಲಾಗುತ್ತದೆ. ತೂಕ ಹಾಕಿದಾಗ ಸೇತುವೆಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಾರೆ.

ಲೋಡ್ ಟೆಸ್ಟ್ ಮಾಡುವಾಗ ಸೇತುವೆಯಲ್ಲಿ 38 ಎಂ.ಎಂ.ವರೆಗೆ ವಿಚಲನೆ ಆಗಬಹುದು. ಆದರೆ ಸಿಗಂದೂರು ಸೇತುವೆಯಲ್ಲಿ ಕೇವಲ 22 ಎಂ.ಎಂ. ವಿಚಲನೆ ಕಂಡುಬಂದಿದೆ. ತೂಕವನ್ನು ತೆಗೆದಾಗ ವಿಚಲನೆ 0 ಎಂ.ಎಂ.ಗೆ ಬಂದಿದೆ. ಇದರಿಂದ ಸೇತುವೆ ಪಾಸಾಗಿದೆ ಎಂದು ತಿಳಿದಿದೆ. “ನಮ್ಮ ಸೇತುವೆ ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದ್ದಾಗಿದೆ ಎಂಬುದು ಈ ಪರೀಕ್ಷೆಯಿಂದ ತಿಳಿದು ಬಂದಿದೆ” ಎಂದು ಇಂಜಿನಿಯರ್ ಪೀರ್ ಪಾಷಾ ಹೇಳಿದ್ದಾರೆ.
ಮತ್ತೊಮ್ಮೆ ಸಿಗಂದೂರು ಸೇತುವೆ ಪರೀಕ್ಷೆ
ಮುಂದಿನ ವಾರ ಮತ್ತೊಂದು ಪರೀಕ್ಷೆ ನಡೆಯಲಿದೆ. ಮೊದಲ ಪರೀಕ್ಷೆಯಲ್ಲಿ ಸೇತುವೆ ಪಾಸ್ ಆಗಿದೆ. ಎರಡನೇ ಹಂತದ ಲೋಡ್ ಟೆಸ್ಟ್ ಮಾಡಲು ಅನುಮತಿ ಕೇಳಲಾಗಿದೆ. ಈ ಪರೀಕ್ಷೆಯನ್ನು ಕೇಬಲ್ ಇರುವ ಎಕ್ಸ್‌ಟ್ರಾ ಡೋಸ್ ಭಾಗದಲ್ಲಿ ಮಾಡುತ್ತಾರೆ. ಮೊದಲಿನಂತೆ 100 ಟನ್ ಭಾರದ ಲಾರಿಗಳನ್ನು ತಂದು ಸೇತುವೆಯ ಮೇಲೆ ನಿಲ್ಲಿಸಿ ಪರೀಕ್ಷೆ ಮಾಡಲಾಗುತ್ತದೆ. ಸೇತುವೆ ಕಟ್ಟಿದ ಕಂಪನಿಯೇ ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುತ್ತದೆ. ನಂತರ ಪ್ರತಿ ಆರು ತಿಂಗಳಿಗೊಮ್ಮೆ ನಿರ್ವಹಣೆ ಮಾಡಬೇಕು. “ನಿಯಮಿತವಾಗಿ ನಿರ್ವಹಣೆ ಮಾಡಿದರೆ 100 ವರ್ಷವಾದರು ಸೇತುವೆಗೆ ಯಾವುದೆ ಸಮಸ್ಯೆ ಆಗುವುದಿಲ್ಲ” ಎಂದು ಮುಖ್ಯ ಇಂಜಿನಿಯರ್ ಪೀರ್ ಪಾಷಾ ಹೇಳಿದ್ದಾರೆ.
ಸೇತುವೆಗೆ 423 ಕೋಟಿ ರೂ ವೆಚ್ಚ
ಸಿಗಂದೂರು ಸೇತುವೆಯನ್ನು 423.15 ಕೋಟಿ ರೂ. ಖರ್ಚು ಮಾಡಿ ಕಟ್ಟಲಾಗಿದೆ. ಇದು 2.14 ಕಿ.ಮೀ ಉದ್ದ ಇದೆ. ಸೇತುವೆ 16 ಮೀಟರ್ ಅಗಲವಿದೆ. ವಾಹನಗಳು ಹೋಗಲು ಎರಡು ದಾರಿಗಳಿವೆ. ಜನರು ನಡೆಯಲು ಎರಡು ಕಡೆ 1.5 ಮೀಟರ್ ಅಗಲದ ಫುಟ್‌ಪಾತ್ ಇದೆ

Sathish munchemane

Join WhatsApp

Join Now

Read More