ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಬೊಮ್ಮನ ಕಟ್ಟೆಯ ಕೊಲೆ ಆರೋಪಿಗಳು ಯಾರು.!?

On: June 26, 2025 7:07 PM
Follow Us:
---Advertisement---

ಶಿವಮೊಗ್ಗ: ರೌಡಿ ಶೀಟರ್ ಕೊಲೆ ಪ್ರಕರಣ – ಐವರು ಆರೋಪಿಗಳ ಬಂಧನ!

ಶಿವಮೊಗ್ಗ (shivamogga), ಜೂ. 23: ಇತ್ತೀಚೆಗೆ ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ನಡೆದಿದ್ದ ರೌಡಿ ಶೀಟರ್ ಅವಿನಾಶ್ (32) ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿನೋಬನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.ಬೊಮ್ಮನಕಟ್ಟೆ ಬಡಾವಣೆ ನಿವಾಸಿಗಳಾದ ಪ್ರವೀಣ್ (35), ಆನಂದ್ (35), ಸುನೀಲ್ (30), ಜೀತೇಂದ್ರ (28) ಹಾಗೂ ಕಿರಣ್ (34) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಾಗೆಯೇ ಕೊಲೆಗೀಡಾದ ಅವಿನಾಶ್ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು ದಿನಗಳ ಹಿಂದೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂಭಾಗ ಪೊಲೀಸರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಸಬ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಭೀಕರ ಕೊಲೆ : ಹಳೇ ಬೊಮ್ಮನಕಟ್ಟೆ 1 ನೇ ಕ್ರಾಸ್ ನಿವಾಸಿಯಾದ ರೌಡಿ ಶೀಟರ್ ಅವಿನಾಶ್ ಎಂಬಾತ, ಜೂ. 21 ರಾತ್ರಿ ಮನೆಯಿಂದ ತೆರಳಿದ್ದ. ನಂತರ ಮನೆಗೆ ಹಿಂದಿರುಗಿರಲಿಲ್ಲ. ಜೂ. 22 ರ ಮುಂಜಾನೆ ಬೊಮ್ಮನಕಟ್ಟೆ ಕೆರೆ ಏರಿ ಸಮೀಪ ಅವಿನಾಶ್ ಮೃತದೇಹ ಪತ್ತೆಯಾಗಿತ್ತು. ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗೀಡಾದ ಅವಿನಾಶನು ಆರೋಪಿಯೋರ್ವನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂಬ ಅಂಶವನ್ನು, ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Sathish munchemane

Join WhatsApp

Join Now

 

Read More