ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾವು.?

On: June 22, 2025 10:42 AM
Follow Us:
---Advertisement---

ಕೃಷಿ ಹೊಂಡಕ್ಕೆ ಬಿದ್ದು, ಇಬ್ಬರು ಯುವಕರ ಸಾವು ಕಂಡಿರುವ ಘಟನೆ ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ.

ಇತ್ತೀಚಿನ ದಿನಗಳಲ್ಲಿ  ಕೃಷಿ ಹೊಂಡಕ್ಕೆ ಟಾರಪಲ್ ಹಾಕಿ ನೀರು ಭೂಮಿಗೆ ಇಂಗುವಿಕೆ ಕಡಿಮೆ ಮಾಡುತ್ತಾರೆ  ಇದು ಅಂತರ ಜಲ ಕಡಿಮೆ ಯಾಗುತ್ತದೆ ಹಾಗೂ  ಟಾಪ್೯ಲ್ ಕೃಷಿ ಹೊಂಡಕ್ಕೆ ಹೊದಿಕೆ ಮಾಡುವದು ಸಾವಿನ ಜತೆ ಸರಸ ವಿದ್ದಂತೆ ಕಾರಣ ಎನೇ ಪ್ರಿಕಾಶನ ತೆಗೆದು ಕೋಂಡರು  ಟಾಪ್೯ಲ್ ನೀರುಲ್ಲಿ ಪಾಚಿ ಕಟ್ಟಿ ಜಾರುತ್ತದೆ ಕಾಲು ಜಾರಿ ಬಿದ್ದರೆ ಸಾವು ಕಚಿತ ಹಾಗಾಗಿ ಟಾಪ್೯ಲ್ ಗೆ ಪರಿಯಾವಾಗಿ ಚಿಂತನೆ ಮಾಡಬೇಕು ಸರ್ಕಾರ.

ಗೌತಮ್ ನಾಯ್ಕ್ (22) ಹಾಗೂ ಚಿರಂಜೀವಿ(22)ಮೃತ ಯುವಕರಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಯಡವಾಲದಲ್ಲಿ ಈ ಘಟನೆ ಸಂಭವಿಸಿದೆ. 

ಯಡವಾಲ ಗ್ರಾಮದ ನಿವಾಸಿ ಗೌತಮ್ ನಾಯ್ಕ್ ಆಗಿದ್ದರೆ, ಶಿವಮೊಗ್ಗ ನಗರದ ಕುಂಬಾರಗುಂಡಿ ನಿವಾಸಿ ಚಿರಂಜೀವಿ ಆಗಿದ್ದಾನೆ. ಯಡವಾಲ ಗ್ರಾಮದ ಸ್ನೇಹಿತನ ಮನೆಗೆ ಶಿವಮೊಗ್ಗದಿಂದ ತೆರಳಿದ್ದ 10 ಯುವಕರು ಕೃಷಿ ಹೊಂಡಕ್ಕೆ ಇಳಿದಿದ್ದರು. ಅದರಲ್ಲಿ ಇಬ್ಬರು ಬಜಾವ್ ಆಗದೆ ಕೃಷಿ ಹೊಂಡದಲ್ಲಿ ಸಾವನ್ನಪ್ಪಿದ್ದಾರೆ. 

ಇತ್ತೀಚಿಗಷ್ಟೇ ಡಿಲವರಿಯಾಗಿದ್ದ ಸ್ನೇಹಿತನ ತಂಗಿಯ ಮಗು ನೋಡಲು ಹೋಗಿದ್ದ ಸ್ನೇಹಿತರು, ಮನೆಗೆ ಭೇಟಿ ನೀಡಿ, ಬಳಿಕ ತೋಟದಲ್ಲಿ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಮಧ್ಯದಲ್ಲೇ ಕೃಷಿ ಹೊಂಡದ ಬಳಿ ತೆರಳಿ,  ಓರ್ವ ಯುವಕ ಕಾಲು ಜಾರಿ ಬಿದ್ದಿದ್ದ. ಎಂಬ ಪ್ರಥಮಿಕ ಮಾಹಿತಿ ಬಂದಿದ್ದು,

ಆತನ ರಕ್ಷಣೆಗೆ ಧಾವಿಸಿದ್ದ ಇನ್ನೊಬ್ಬ ಯುವಕ ಸಹ ನೀರು ಪಾಲಾಗಿದ್ದಾನೆ. ಯುವಕರ ಮೃತದೇಹಗಳ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಆಗಿದೆ.

ಘಟನೆಯ ಕುರಿತಂತೆ ಪೊಲೀಸರು ಸೂಕ್ತ ತನಿಖೆ ನಡೆಸಿ, ಮೃತ ಯುವಕರ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು’ ಎಂದು ಯಡವಾಲ ಗ್ರಾಮದ ಮುಖಂಡ ಗಿರೀಶ್ ನಾಯ್ಕ್ ಅವರು ಮನವಿ ಮಾಡಿದ್ದಾರೆ.

ಘಟನೆಯ ಕುರಿತಂತೆ ಇನ್ನಷ್ಟೆ ಕುಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಬೇಕಾಗಿದೆ. ಘಟನೆಯ ಕುರಿತಂತೆ ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ. 

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Sathish munchemane

Join WhatsApp

Join Now

 

Read More