ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

353 ಜನ ರೌಡಿ ಆಸಾಮಿಗಳ ರೌಡಿ ಶಿಟ್ ತಾತ್ಕಾಲಿಕವಾಗಿ ಮುಕ್ತಾಯ  ಆಗುತ್ತಾ .!?

On: June 12, 2025 7:27 PM
Follow Us:
---Advertisement---

  ಶಿವಮೊಗ್ಗ ಜಿಲ್ಲೆಯಲ್ಲಿ  ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೇ ಇರುವಂತಹ ಹಾಗೂ ಉತ್ತಮ ಗುಣ ನಡತೆ ಹೊಂದಿರುವ ಹಾಗೂ ಮೃತ ಪಟ್ಟಂತಹ ಹಾಗೂ ವಯಸ್ಸಿನ ಆಧಾರದ ಮೇಲೆ

ಶಿವಮೊಗ್ಗ – ಎ ಉಪ ವಿಭಾಗದ – 17, ಶಿವಮೊಗ್ಗ – ಬಿ ಉಪ ವಿಭಾಗದ – 60, ಭದ್ರಾವತಿ ಉಪ ವಿಭಾಗದ – 72, ಸಾಗರ ಉಪ ವಿಭಾಗದ – 55, ಶಿಕಾರಿಪುರ ಉಪ ವಿಭಾಗದ – 124 ಹಾಗೂ ತೀರ್ಥಹಳ್ಳಿ ಉಪ ವಿಭಾಗದ – 25 ಜನ ರೌಡಿ ಆಸಾಮಿಗಳು ಸೇರಿ ಒಟ್ಟು 353 ಜನ ರೌಡಿ ಆಸಾಮಿಗಳ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡುವ ಸಂಬಂಧ ಈ ದಿನ ದಿನಾಂಕಃ 12-06-2025 ರಂದು ಮಧ್ಯಾಹ್ನ  ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,

ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ  ಸದರಿ  ರೌಡಿ ಆಸಾಮಿಗಳ ಪರೇಡ್ ಕರೆದಿದ್ದು, *ಪರೇಡ್ ನಲ್ಲಿ ಹಾಜರಿದ್ದ ರೌಡಿ ಆಸಾಮಿಗಳ* ಕುರಿತು ಈ ಕೆಳಕಂಡಂತೆ ಸೂಚನೆಗಳನ್ನು ನೀಡಿರುತ್ತಾರೆ.

1) ಯಾವುದೋ *ಕೆಟ್ಟ ಸಂದರ್ಭ ಹಾಗೂ ನಿಮ್ಮ ನಡೆತೆಯಿಂದ ನಿಮ್ಮಗಳ ವಿರುದ್ಧ ಈ ಹಿಂದೆ ರೌಡಿ ಹಾಳೆಯನ್ನು* ತೆರೆದಿದ್ದು,  ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ *ಯಾವುದೇ ಪ್ರಕರಣಗಳು ದಾಖಲಾಗದೇ* ಇರುವುದರಿಂದ  ಹಾಗೂ *ಸಮಾಜದಲ್ಲಿ ನಿಮ್ಮ ನಡತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಮಾನದಂಡಗಳ ಆಧಾರದಲ್ಲಿ ನಿಮ್ಮ ವಿರುದ್ಧ ಈ ಹಿಂದೆ ತೆರೆಯಲಾಗಿದ್ದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದೇವೆ.

2) ಸಮಾಜದಲ್ಲಿ ಎಲ್ಲ ನಾಗರೀಕರ ರೀತಿ ನೀವು ಸಹಾ ಉತ್ತಮ ಜೀವನ ನಡೆಸಲು ಇದು ಒಂದು ಸದಾವಕಾಶವಾಗಿರುತ್ತದೆ.

ಇನ್ನು ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳ ರೀತಿ ಜೀವನ ನಡೆಸಿ.

3) ನಿಮ್ಮೆಲ್ಲರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ಷ್ಮವಾಗಿ ಗಮನ ಹರಿಸಲಿದ್ದು, ನೀವು ಯಾವುದೇ ಸಣ್ಣ ಪುಟ್ಟ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದರೂ ಸಹಾ  ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯನ್ನು ಪುನಾಃ ತೆರೆಯಲಾಗುತ್ತದೆ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

4) ನಿಮ್ಮ *ಕುಟುಂಬ,* ಸಮಾಜ ಹಾಗೂ *ಪೊಲೀಸ್ ಇಲಾಖೆಯೊಂದಿಗೆ* ನಿಷ್ಠೆಯಿಂದಿರಿ, ಜೀವನೋಪಾಯಕ್ಕಾಗಿ ನಿರ್ವಹಿಸುವ ಕರ್ತವ್ಯಗಳನ್ನು ಶಿಸ್ತಿನಿಂದ ಮಾಡಿ, ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಿ ರೂಪುಗೊಳ್ಳಿ. ಸಮಾಜದಲ್ಲಿ *ಒಳ್ಳೆಯ ಸ್ಥಾನ ಮಾನ ಗಳಿಸಲು ನಿಮಗೆ ಒದಗಿ ಬಂದ ಸದಾವಕಾಶ ಸಿಕ್ಕಿದ್ದು,* ಇದರ ಉಪಯೋಗ ಪಡೆಯಿರಿ.

5) ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ *ರೌಡಿ ಹಾಳೆಯು ಯಾವುದೇ  ಕಾರಣಕ್ಕೆ, ಪುನಾಃ ತೆರೆಯುವ  ಸಂದರ್ಭ* ಬಂದರೇ *ನಿಮ್ಮ ಜೀವನ ಪರ್ಯಂತ ನಿಮ್ಮ ವಿರುದ್ಧ ತೆರೆಯಲಾದ ರೌಡಿ ಹಾಳೆಯು ಪ್ರಚಲಿತದಲ್ಲಿರುತ್ತದೆ* ಹಾಗೂ ನೀವು ಪೊಲೀಸ್ ಇಲಾಖೆಯ ನೇರ *ಕಣ್ಗಾವಲಿನಲ್ಲಿರುತ್ತೀರಿ ಹಾಗೂ ಕಾನೂನು ರೀತ್ಯಾ ಕ್ರಮ* ಎದುರಿಸಬೇಕಾಗುತ್ತದೆ.

*ಎಲ್ಲರು ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತ ಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ* ಎಂದು ತಿಳಿಸಿದರು.

   ಈ ಸಂದರ್ಭದಲ್ಲಿ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ, *ಶ್ರೀ ಕಾರಿಯಪ್ಪ ಎ. ಜಿ.* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2, ಶಿವಮೊಗ್ಗ, * ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ *ಪೊಲೀಸ್ ಉಪಾಧೀಕ್ಷಕರು,*  ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್  ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರುಗಳು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More