ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಚ್ಚರಿ ಮೂಡಿಸಿದ ಬಿಎಸ್ ವೈ ‌ಈಶ್ವರಪ್ಪ ಮಾತುಕತೆ!

On: June 11, 2025 3:42 PM
Follow Us:
---Advertisement---

ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..!

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೊಮ್ಮಗ ಬಿವೈ ರಾಘವೇಂದ್ರ ಅವರ ಸುಪುತ್ರ ಸುಭಾಷ್ ಮತ್ತು ಶ್ರೀಮತಿ ಶ್ರವಣ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬದ್ಧ ವೈರಿಗಳಂತಿದ್ದ ಬಿ ಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪನವರು ಪರಸ್ಪರ ಉಭಯ ಕುಶಲಪಾರಿ ವಿಚಾರಿಸಿ ಆತ್ಮೀಯವಾಗಿ ಮಾತುಕತೆ ನಡೆಸಿದರು ಹಾಗೆ ಇದೇ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಹಾಗೂ ಬಿ ವೈ ವಿಜಯೇಂದ್ರ ಅವರ ಹತ್ತಿರ ಕೂಡ ಈಶ್ವರಪ್ಪನವರು ಹಾಗೂ ಅವರ ಮಗ ಕಾಂತೇಶ್ ಅನ್ಯೂನ್ಯವಾಗಿ ಮಾತನಾಡಿದ್ದು ವಿಶೇಷವಾಗಿತ್ತು.

 

ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಮದುವೆಗೆ ‌ ಈಶ್ವರಪ್ಪನವರು ಬರುತ್ತಾರೋ ಇಲ್ಲವೋ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು ಕೊನೆಗೂ ಈಶ್ವರಪ್ಪನವರು ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ನೆನ್ನೆ ನಡೆದ ಚಕ್ರವರ್ತಿ ಸೋಲಿಬೆಲೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಒಟ್ಟಿಗೆ ದೀಪ ಬೆಳಗಿಸಿ ನಾವು ಎಲ್ಲಾ ಒಟ್ಟಿಗೆ ಇದ್ದೆವೆ ಎಂಬುದನ್ನು ಸಾಬಿತ್ ಪಡಿಸಿದ್ದರು.

ಮುಂದೆ ಬಿ.ಜೆ.ಪಿ. ಪಕ್ಷ ಸೇರುವುದು ಸನ್ನಿಹಿತ ವಾಗಿದೆ ಎಂದು ಶಿವಮೊಗ್ಗ ಜನತೆ ಮಾತನಾಡುತ್ತಿದ್ದಾರೆ.

Sathish munchemane

Join WhatsApp

Join Now

 

Read More