ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಯಾವುದೇ ವ್ಯಕ್ತಿಯಲ್ಲಿ ಆಲೋಚನೆಗಳು ಮೂಡುವುದು ಅವನ ಮಾತೃಭಾಷೆಯಲ್ಲಿಯೇ. ಅವುಗಳ ಶ್ರೇಷ್ಠ ಅಭಿವ್ಯಕ್ತಿ ಸಾಧ್ಯವಾಗುವುದೂ ಮಾತೃಭಾಷೆಯ ಮೂಲಕವೇ ಹೀಗೆ ನುಡಿದವರು ಯಾರು.!?

On: November 1, 2024 1:50 PM
Follow Us:
---Advertisement---

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ  ಕರ್ನಾಟಕ  ರಾಜ್ಯೋತ್ಸವದ ಶುಭಾಶಯದ ನುಡಿಗಳನ್ನ  ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ-ಏಳಿಗೆಗೆ ಶ್ರಮಿಸುವ ಸಂಕಲ್ಪ ಮಾಡಬೇಕಿದೆ. ಯಾವ ಭಾಷೆ ವಿಜ್ಞಾನ-ತಂತ್ರಜ್ಞಾನಗಳೊಂದಿಗೆ ತನ್ನನ್ನು ಬೆಸೆದುಕೊಳ್ಳುತ್ತದೆಯೋ ಆ ಭಾಷೆ ಸಮೃದ್ಧವಾಗುತ್ತದೆ ಮತ್ತು ಜೀವಂತವಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಬದುಕಿನ ಎಲ್ಲ ಆಯಾಮಗಳೂ ಕನ್ನಡಮಯ ಆಗುವಂತೆ ನಾವೆಲ್ಲರು ಪ್ರಯತ್ನಿಸಬೇಕು. #ವಾಗ್ರಚನೆಯೆಂಬುದು_ಕರ್ಣಾಟವಯ್ಯ ಎಂಬ ಶರಣರ ನುಡಿಗಟ್ಟು ನಮ್ಮ ಮಾತು ಮತ್ತು ಬರಹಗಳೆರಡೂ ಕನ್ನಡ ಎಂಬುದನ್ನು ಸೂಚಿಸುತ್ತದೆ. #ಕುರಿತೋದದೆಯುಂ_ಕಾವ್ಯಪ್ರಯೋಗ_ಪರಿಣತ_ಮತಿಗಳ್ ಎಂಬ ಕವಿರಾಜಮಾರ್ಗದ ಮಾತು ಕನ್ನಡಿಗರ ಭಾಷಾಪ್ರೌಢಿಮೆಯನ್ನು ಮನವರಿಕೆ ಮಾಡಿಕೊಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಆಲೋಚನೆಗಳು ಮೂಡುವುದು ಅವನ ಮಾತೃಭಾಷೆಯಲ್ಲಿಯೇ. ಅವುಗಳ ಶ್ರೇಷ್ಠ ಅಭಿವ್ಯಕ್ತಿ ಸಾಧ್ಯವಾಗುವುದೂ ಮಾತೃಭಾಷೆಯ ಮೂಲಕವೇ. ಆದ್ದರಿಂದ ನಮ್ಮ ಆಲೋಚನೆಗಳ ಮೂಲಕ ನಮ್ಮ ಬದುಕನ್ನು ಪ್ರಭಾವಿಸುವ ನಮ್ಮ ನಾಣ್ಣುಡಿ-ಬಾಳ್ಣುಡಿ ಕನ್ನಡದ ಬಗೆಗಿನ ಅಭಿಮಾನ ಇಮ್ಮಡಿ ಮುಮ್ಮಡಿಯಾಗಿ ಬೆಳೆಯಲಿ. ಎಲ್ಲ ರಂಗಗಳಲ್ಲಿಯೂ ಕನ್ನಡತನ ಮೈಗೂಡುವಂತೆ ರಾಜ್ಯೋತ್ಸವ ಪ್ರೇರಣೆ ನೀಡಲಿ.

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು.
ಬಸವಕೇಂದ್ರ, ಶಿವಮೊಗ್ಗ.

Sathish munchemane

Join WhatsApp

Join Now

 

Read More