ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಮೆಗ್ಗಾನ್ ಹೊರಗುತ್ತಿಗೆ ಮಹಿಳ ನೌಕರಸ್ಥೆ ರೈಲಿಗೆ ಸಿಲುಕಿ ಆತ್ಮಹತ್ಯೆ.!?

On: October 29, 2024 9:20 AM
Follow Us:
---Advertisement---

ಶಿವಮೊಗ್ಗ ವಿನೋಬ ನಗರ ರೈಲ್ವೆ ಟ್ರ್ಯಾಕ್ ನಲ್ಲಿ ಮಹಿಳೆಯೋರ್ವಳ ಶವ‌ಪತ್ತೆಯಾಗಿದ್ದು, ಮಹಿಳೆ ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಸಾವನ್ನಾಗಿರುವ ಘಟನೆ ವರದಿಯಾಗಿದೆ. 

ನಿನ್ನೆ ರಾತ್ರಿ ತಾಳಗುಪ್ಪ-ಮೈಸೂರಿಗೆ ಚಲಿಸುವ 16228 ಕ್ರಮ ಸಂಖ್ಯೆ ರೈಲುಗಾಡಿಗೆ ಸಿಲುಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಮಹಿಳೆಯನ್ನ ಕಮಲಾ ಬಿ.ಪಿ ಎಂದು ಗುರುತಿಸಲಾಗಿದೆ. ರೈಲಿಗೆ ಸಿಲುಕಿದ ಮಹಿಳೆಯ ತಲೆ ದೇಹ ಮತ್ತು ಕೈಗಳು ಪ್ರತ್ಯೇಕಗೊಂಡಿದೆ

ಕಮಲಾ ಬಿ.ಪಿ (35) ಶಿವಮೊಗ್ಗದ ಮೆಗ್ಗಾನ್ ಆಸ್ತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಪತಿಯೊಂದಿಗೆ ಜಗಳವಾಡಿದ ಕಮಲಾ ರಾತ್ರಿ ರೈಲಿಗೆ ತಲೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವಿನೋಬ ನಗರ ಪೊಲೀಸರು ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಇನ್ನೂಸ್ಟ ಹೆಚ್ಚಿನ ಮಾಹಿತಿ ಬರಬೇಕಾಗಿದೆ.

Sathish munchemane

Join WhatsApp

Join Now

 

Read More