ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ವೀರಶೈವ ಲಿಂಗಾಯತ ಜಾತ್ಯತೀತ ನಾಯಕ ಮಾಜಿ ನಗರ ಸಭೆ ಅಧ್ಯಕ್ಷ ಎನ್.ಜೆ ರಾಜಶೇಖರ್ (ಸುಭಾಶ್) ಅಸ್ತಂಗತ.!?

On: October 27, 2024 9:36 PM
Follow Us:
---Advertisement---

ಶಿವಮೊಗ್ಗ ನಗರದಲ್ಲಿ ಸುಬಾಶ್ ಅಣ್ಣ ಎಂದು   ಖ್ಯಾತಿ ಯಾಗಿದ್ದ ಜಾತ್ಯತೀತ ನಾಯಕರದ ಎನ್.ಜೆ ರಾಜಶೇಖರ್ (ಸುಭಾಶ್) (72) ವಿಧಿವಶರಾಗಿದ್ದಾರೆ. ಸುಭಾಶ್ ಅನಾರೋಗ್ಯದ ಹಿನ್ನಲೆಯಲ್ಲಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. 

ಲಿವರ್ ಕ್ಯಾನ್ಸರ್ ಖಾಯಿಲೆಯಿಂದ  ಬಳಲುತಿದ್ದ ಸುಭಾಶ್ ಲೋಕಸಭಾ ಚುನಾವಣೆಯ ವೇಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರು ವಾರದ ಹಿಂದೆ ನಂಜಪ್ಪ ಆಸ್ಪತ್ರೆಗೆ ದಾಖಲಾದವರು ಇಂದು ಕೊನೆ ಉಸಿರು ಎಳೆದಿದ್ದಾರೆ. 

ಶಿವಮೊಗ್ಗದಲ್ಲಿ ನಗರ ಸಭೆ ಇದ್ದಾಗ ಸುಭಾಶ್ ಅಧ್ಯಕ್ಷರಾಗಿದ್ದರು, ಬಿಜೆಪಿ ಪಕ್ಷದಲ್ಲಿ ಉತ್ತಮ ಸೇವೆ ಮಾಡಿಕೊಂಡು ಬಂದಿದ್ದ ಇವರು ಬಸವೇಶ್ವರ ಸಮಾಜದ ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದರು. ನಾಲ್ಕು ಭಾರಿ ನಗರ ಸಭೆ ಸದಸ್ಯರಾಗಿ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ವೀರಶೈವ ಕಲ್ಯಾಣ ಮಂಟಪದ ಅಧ್ಯಕ್ಷರಾಗಿದ್ದರು. 

ಶ್ರೀಯುತರು ಪತ್ನಿ, ಪುತ್ರ, ಇಬ್ಬರು ಹೆಣ್ಣಮಕ್ಕಳನ್ನ ಅಗಲಿದ್ದಾರೆ. ನಾಳೆ ಮಧ್ಯಹ್ನ ಮತ್ತೋಡಿನಲ್ಲಿರುವ ತೋಟದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ಅಂತ್ಯ ಸಂಸ್ಕರ ನೆರವೇರಲಿದೆ.

 

Sathish munchemane

Join WhatsApp

Join Now

 

Read More