ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಖಿಲ ಭಾರತ ವೀರಶೈವ ಮಹಾಸಭೆಯ ಎರಡನೇ ಹಂತದ  ಚುನಾವಣಾಗೆ ಕೇಂದ್ರ ಕಾರ್ಯಕಾರಿ ಸಮಿತಿಗೆ   ಬಿ.ವೈ. ಆರ್ ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ!

On: August 3, 2024 12:55 PM
Follow Us:
---Advertisement---

ಅಖಿಲ ವೀರಶೈವ ಲಿಂಗಾಯತ ಮಹಾಸಭೆಯ ಎರಡನೇ ಹಂತದ ಚುನಾವಣೆಗೆ ಕೇಂದ್ರ ಕಾರ್ಯಕಾರಿ ಸಮಿತಿಗೆ ಸಂಸದರಾದ ಬಿ ವೈ ರಾಘವೇಂದ್ರರವರು ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು ಮತ್ತು ಎಂ.ಪಿ. ಆನಂದಮೂರ್ತಿರವರು ರಾಜ್ಯ ಕಾರ್ಯಕಾರಿ ಸಮಿತಿಗೆ ನಾಮ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸಹ ಕಾರ್ಯದರ್ಶಿ ಸಂತೋಷ ಬಳ್ಳಿಕೆರೆ ಜಿಲ್ಲಾ ನಿರ್ದೇಶಕರಾದ ಸುಕುಮಾರ್ ಎನ್ ಎನ್ ಪರಮೇಶ್ವರ್  (ವಾಲಿಬಾಲ್) ರೇಣುಕ ಪ್ರಸನ್ನ ರಾಜ್ಯ ಕಾರ್ಯದರ್ಶಿಗಳು ಅನಿತಾ ರವಿಶಂಕರ್ ಗೀತಾ ರವೀಂದ್ರ ಸವಿತಾ ಪ್ರಕಾಶ್, ಮಲ್ಲಿಕಾರ್ಜುನ ಕಾನೂರ್ ತಾಲೂಕು ನಿರ್ದೇಶಕರಾದ ಸೋಮನಾಥ್ ಮೋಹನ್  ಸತೀಶ್ ಮುಂಚೆ ಮನೆ ಮತ್ತು ತಿಪ್ಪೇಶ್ ಹೆಚ್. ಆರ್. ಉಪಸ್ಥಿತರಿದ್ದರು.

  ಚುನಾವಣೆಯ ನಾಮಪತ್ರ ಸಲ್ಲಿಕೆ ಆಗಸ್ಟ್ ಒಂದರಿಂದ ಚಾಲನೆ ದೊರಕ್ಕಿದ್ದು ರಾಜ್ಯ ಘಟಕಗಳ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಗೆ ಸಹ ಚುನಾವಣೆ ನಡೆಯಲಿದೆ ಎರಡನೇ ಹಂತದಲ್ಲಿ ಕರ್ನಾಟಕ ಕೇರಳ ಆಂಧ್ರಪ್ರದೇಶ ರಾಜ್ಯ ಘಟಕಗಳ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ ಒಟ್ಟು ಕರ್ನಾಟಕ ರಾಜ್ಯ ಘಟಕಕ್ಕೆ 30 ಸದಸ್ಯ ಸ್ಥಾನಗಳಿಗೆ(ಸಾಮಾನ್ಯ 23 ಮಹಿಳೆ 7)ಚುನಾವಣೆ ನಡೆಯಲಿದೆ ಹಾಗೆ ಕೇರಳ ಆಂಧ್ರಪ್ರದೇಶ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಕೇಂದ್ರ ಕಾರ್ಯಕಾರಿಗೆ ತಲಾ 5 ಸಾಮಾನ್ಯ ಒಬ್ಬರು ಮಹಿಳೆ ಸ್ಥಾನಗಳಿಗೆ  ಚುನಾವಣೆ ನಡೆಯಲಿದೆ ಈ ಮೇಲ್ಕಂಡ ಎಲ್ಲಾ ಸ್ಥಾನಗಳಿಗೆ ಆಗಸ್ಟ್ 25 ರಂದು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತದಾನ ನಡೆಯಲ್ಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ

Sathish munchemane

Join WhatsApp

Join Now

 

Read More