ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಯುಜಿಡಿ ನೀರು ಮನೆಯ ಒಳಗೆ!?

On: May 20, 2024 5:59 PM
Follow Us:
---Advertisement---

ಶಿವಮೊಗ್ಗ; ಸ್ಮಾರ್ಟ್‌ ಸಿಟಿಯ ಕಳಪೆ ಕಾಮಗಾರಿ,
ಸ್ಮಾರ್ಟ್ ಆಗಬೇಕಾಗಿದ್ದ ಬಡಾವಣೆಗಳು ಯುಜಿಡಿ ಚರಂಡಿಯ ನೀರು ಮನೆಗಳಿಗೆ ನುಗ್ಗಿ ಹೊಸಮನೆ ಬಡಾವಣೆಯ ಜನರ ಗೋಳು ಕೇಳುವರು ಯಾರು ಇತ್ತೀಚಿಗೆ ರಾಜಕಾಲವೆ ದುರಸ್ತಿಯ ಬಗ್ಗೆ ಜನ ಏನೇನು ಮಾತನಾಡಿಕೊಳ್ಳುತ್ತಿದ್ದಾರೆ!?

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದು. ಆದರೆ ನಗರದಲ್ಲಿ ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿ ಬಂದಿದ್ದುವು
ಇದಕ್ಕೆತಾಜಾಉದಾಹರಣೆಯಂತೆ ಮೊನ್ನೆ ಸುರಿದ ಮಳೆಗೆ  ಹೊಸಮನೆ ಬಡಾವಣೆಗಳು ಹಲವು ರಸ್ತೆಗಳು
ಕೆರೆಯಂತ್ತಗಿದ್ದವು ಇನ್ನೂ ಮೇ ತಿಂಗಳೇ ಮಳೆಗೆ  ಹಿಗಾದರೆ ಮುಂದೆ ಹೇಗಪ್ಪ ಎಂದು ಜನರು ಸ್ಮಾರ್ಟ್‍ಸಿಟಿ ಯೋಜನೆಗೆ ಹಾಗೂ ಮಹಾನಗರಪಾಲಿಕೆ ಹಿಡಿಶಾಪ ಹಾಕಿದ್ದಾರೆ.

Oplus_131072

ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆ ಇದ್ದು, ಕಳಪೆ ಕಾಮಗಾರಿ ಆರೋಪ

ಹಿಂದೆ ನಡೆದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವ ಹಾಗೂ ಅಪೂರ್ಣವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಸೂಚಿಸಿದ್ದುರು ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ” ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡಗೆ  ಶಿವಮೊಗ್ಗ ಉಸ್ತುವರಿ ಸಚಿವರು ಸೂಚಿಸಿದ್ದರು

ಕಳಪೆ ಕಾಮಗಾರಿ ಆರೋಪ; ಸಭೆಯಲ್ಲಿ ಸಚಿವರು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವ ಹಾಗೂ ಅಪೂರ್ಣವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಸೂಚಿಸಿದ್ದರು

ಮಹಾನಗರಪಾಲಿಕೆ ಆವರಣದಲ್ಲಿ ಅನುಮತಿ ಇಲ್ಲದೆ ಕೈಕೊಳ್ಳಲಾಗಿರುವ ಕಾಮಗಾರಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಬ್ಲಾಕ್‌ಗಳನ್ನು ಅಳವಡಿಸಿರುವ ಕಾಮಗಾರಿಗಳು, ಇನ್ನೂ ಕೆಲವು ಸ್ಥಳಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ವಿನಿಯೋಗ ಮಾಡಿರುವುದು ಕಂಡು ಬಂದಿದೆ ಎಂದದಿದ್ದರು.

ಅವೈಜ್ಞಾನಿಕವಾಗಿ ಮಾಡಲಾಗಿರುವ ಪುಟ್‌ಪಾತ್ ಕಾಮಗಾರಿಯಿಂದಾಗಿ ಮಳೆನೀರು ನಿಂತು ಜನಸಾಮಾನ್ಯರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸ್ಟೇಡಿಯಂ ಸುತ್ತಲೂ ನಿರ್ಮಾಣಗೊಂಡಿರುವ ವಾಕಿಂಗ್‍ಪಾತ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳಿವೆ ಎಂದು ಸಚಿವರು ಹೇಳಿದ್ದರು

ಇಂತಹ ಅನೇಕ ಯೋಜನೆಗಳ ಅನುಷ್ಟಾನದಿಂದಾಗಿ ಯೋಜನೆಯ ಆರಂಭದಿಂದ ಮುಕ್ತಾಯ ಹಂತದವರೆಗೂ ಜನ ಕಿರಿಕಿರಿ ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದರು ಆದರೆ ಈ ಹೇಳಿಕೆಗಳೆಲ್ಲ  ಯಾವದು ಓಂದು ಜಾರಿಗೆ ಬಂದಿಲ್ಲವೆಂಬದು  ಶಿವಮೊಗ್ಗ ಜನತೆಯ ದೂರಗಿದೆ
ಹೌದು ಈ ಎಲ್ಲಾ ಕಾಮಾಗರಿಯ ರೂವಾರಿ ಅಧಿಕಾರಿ ಚಿದಾನಂದ ವಠಾರೆ ಸದ್ದಿಲ್ಲದೆ ಶಿವಮೊಗ್ಗದಿಂದ ಪಲಾಯನ ಮಾಡಿದ್ದಾರೆ,
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಸ್ಮಾರ್ಟ್ ಸಿಟಿ ವಿರುದ್ಧ ಚಿದಾನಂದ್ ವಠಾರೆ ಹಟಾವೋ ಶಿವಮೊಗ್ಗ ಸಿಟಿ ಬಚಾವೋ ಎಂದು ಪ್ರತಿಭಟನೆ ಮಾಡಿದ್ದೆ ಮಾಡಿದ್ದು ದಿನ ಪ್ರತಿ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದೆ ಆಗಿದ್ದುಆದರೆಈಪ್ರತಿಭಟನೆಯಿಂದ ಯಾವುದೇ ಬದಲಾವಣೆ ಆಗದಿದ್ದು ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಯ ಬಗ್ಗೆ ಜನರು ನಗುವಂತಾಗಿದೆ ಹಲವು ಹಗರಣದ ಬಗ್ಗೆ ನಮ್ಮ ಹತ್ತಿರ ದಾಖಲಾತಿ ಇದೆ ಎಂದು ಹಲವು ಪ್ರೆಸ್ ಮೀಟ್ಗಳಲ್ಲಿ ಹೇಳಿದ್ದೆ ಹೇಳಿದ್ದು ಆದರೂ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲರಾದರ ಅಥವಾ —++++ ಮಾಡಿಕೊಂಡು ಸುಮ್ಮನಾದರ ಏನೇ ಹೇಳಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಸ್ಥಳೀಯ ಶಾಸಕರಾಗಲಿ ಅಥವಾ ಸಂಸದರಾಗಲಿ ನಮಗೆ ಸಂಬಂಧವೇ  ಇಲ್ಲವೇನಪ್ಪಾ ಅನ್ನುವ ರೀತಿಯಲ್ಲಿ ಕಣ್ಮುಚ್ಚಿ ಕುಳಿತಿರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಅಲ್ಲವೇ!??

Sathish munchemane

Join WhatsApp

Join Now

 

Read More