ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಮದ್ಯ ಮಾಂಸಕ್ಕಾಗಿ ಅಪ್ರಾಪ್ತ ಬಾಲಕಿಯನ್ನು ಪಾಪದ ಕೂಪಕ್ಕೆ ತಳ್ಳಿದಳಾ ಚಿಕ್ಕಮ್ಮ..!!??

On: April 11, 2024 11:51 AM
Follow Us:
---Advertisement---

ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಎರಡು ಪ್ರಕರಣದಲ್ಲಿ ಮೂವರು ಆರೋಪಿಯನ್ನು ಬಂಧಿಸಲಾಗಿದೆ.

ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಯುವರಾಜ್ (25) ವಿಜಯ್ ಕುಮಾರ್ ಹಾಗೂ ಸಾವಿತ್ರಿ ಬಂಧಿತ ಆರೋಪಿಗಳಾಗಿದ್ದಾರೆ. ಮದ್ಯ ಮತ್ತು ಮಾಂಸಕ್ಕಾಗಿ ಸ್ವಂತ ಅಕ್ಕನ ಮಗಳನ್ನೆ ಪಾಪದ ಕೂಪಕ್ಕೆ ತಳ್ಳಿರುವ ಚಿಕ್ಕಮ್ಮಳ ಕ್ರೌರ್ಯಕ್ಕೆ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ನಡೆದಿದೆ.

ಘಟನೆಯ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳ ಬಂಧನವಾಗಿದೆ.

ಪ್ರಕರಣ ೧.

ನೋನಿ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಮನ ಮನೆಗೆ ಬಂದಿದ್ದ ಅಪ್ರಾಪ್ತೆಳನ್ನ ಚಿಕ್ಕಮ್ಮಳಿಗೆ ಮದ್ಯ ತಂದುಕೊಟ್ಟು ಪರಿಚಿತನಾದ ಯುವರಾಜ್ ಎಂಬಾತನೊಂದಿಗೆ ಸುತ್ತಾಡಿ ಬರಲು ಅನುಮತಿ ನೀಡಿದ್ದಾಳೆ.

ಅಪ್ರಾಪ್ತ ಬಾಲಕಿಯನ್ನು ಮನೆಯ ಹಿಂಬದಿಯ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ.ನಂತರ ಬಾಲಕಿ ಅಳುತಿದ್ದಾಗ ಮದುವೆಯಾಗುವುದಾಗಿ ನಂಬಿಸಿದ್ದಕ್ಕೆ ಬಾಲಕಿ ಸುಮ್ಮನಾಗಿದ್ದಾಳೆ.

ಸುಮಾರು ಎರಡು ತಿಂಗಳು ಇದೇ ರೀತಿ ವಾರಕ್ಕೆ ಒಂದೆರಡು ಬಾರಿ ಯುವರಾಜನೊಂದಿಗೆ ಬಾಲಕಿಯನ್ನು ಚಿಕ್ಕಮ ಕಳಿಸಿಕೊಡುತ್ತಿದ್ದಳು. ನಂತರ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವ ವಿಚಾರ ತಾಯಿಗೆ ತಿಳಿದ ನಂತರ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ೨ :

ಅಪ್ರಾಪ್ತ ಬಾಲಕಿ ಚಿಕ್ಕಮ್ಮನ ಮನೆಯಲ್ಲಿಯೇ ಇರುವಾಗ ಚಿಕ್ಕಮ್ಮ ಸಾವಿತ್ರಿ ರವರ ಮನೆಗೆ ಬರುತ್ತಿದ್ದ ವಿಜಯ ಕುಮಾರನು ಚಿಕನ್ ಮತ್ತು ಡ್ರಿಂಕ್ಸ್ ತೆಗೆದುಕೊಂಡು ಬರುತ್ತಿದ್ದನು, ಅಡುಗೆ ಮಾಡಿ ಊಟ ಮಾಡಿದ ನಂತರ ಚಿಕ್ಕಮ್ಮ ಸಾವಿತ್ರಿ ಮತ್ತು ವಿಯಜಕುಮಾರನು ಮನೆಯ ಹಿಂಬಾಗ ಹೋಗಿ ಮಾತನಾಡಿಕೊಂಡು ಬಂದ ಮಲಗಿದ್ದ ಸಮಯದಲ್ಲಿ ವಿಜಯ್‌ ಕುಮಾರನು ಅಪ್ರಾಪ್ತ ಬಾಲಕಿಯನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ನೀಡಲಾಗಿದೆ.

ವಿಜಯ್ ಕುಮಾರನಿಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಅಂಗಲಾಚಿದರೂ ಅಪ್ರಾಪ್ತೆಯನ್ನ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ದೂರು ದಾಖಲಾಗಿದೆ. ಈ ವಿಚಾರವನ್ನು ಚಿಕ್ಕಮ್ಮ ಸಾವಿತ್ರಿ ಗಮನಕ್ಕೆ ತಂದಾಗ ಆಯ್ತು ಬಿಡು ನಾನೇ ಹೇಳಿ ಕರೆಯಿಸಿದ್ದೆ. ಏನೂ ಆಗಲ್ಲ ಬಿಡು ಅಂತಾ ಹೇಳಿದ್ದಾರೆ.

ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಫೋಕ್ಸೋ ಕಾಯ್ದೆಯಡಿ ವಿಜಯ್ ಕುಮಾರ್ ನ್ನು ಬಂಧಿಸಲಾಗಿದೆ.

Sathish munchemane

Join WhatsApp

Join Now

 

Read More