ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಭಜನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪ ?!?

On: April 8, 2024 5:33 PM
Follow Us:
---Advertisement---

ಭಜನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋ – ಅಮಾನತು ಆದೇಶದಿಂದ ಸಂಜೀವ ಪೂಜಾರಿ ಮುಕ್ತ – ಕರ್ತವ್ಯಕ್ಕೆ ಹಾಜರು

ಪುತ್ತೂರು ಎಪ್ರಿಲ್ 08: ಭಜನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎನ್ನುವ ಆರೋಪ ಹಾಗು ಕರ್ತವ್ಯದಲ್ಲಿ ಲೋಪ ಆರೋಪದ ಹಿನ್ನಲೆಯಲ್ಲಿ ಮುಖ್ಯ ಅರಣ್ಯಾಧಿಕಾರಿಗಳಿಂದ ಅಮಾನತು ಅದೇಶ ಪಡೆದಿದ್ದ ಕೊಯಿಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ವಿಚಾರಣೆ ಮುಕ್ತಾಯಗೊಂಡಿದೆ.

 

ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹೊರಿಸಲಾದ ಆರೋಪಗಳಲ್ಲಿ ಹುರುಳಿಲ್ಲ ಎಂದು ಆದೇಶ ನೀಡಿದ್ದು, ಅಮಾನತು ಆದೇಶದಿಂದ ಸಂಜೀವ ಪೂಜಾರಿ ಮುಕ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಂಜೀವ ಪೂಜಾರಿ ಮತ್ತೆ ಕೊಯಿಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನಡುವೆ ವಿಚಾರಣೆಯ ಕಾರಣಕ್ಕಾಗಿ ಕಳೆದ ಆಗಸ್ಟ್ ತಿಂಗಳಿನಿಂದ ಸಂಜೀವ ಪೂಜಾರಿಯವರ ಸಂಬಳವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡದೆ ಬಾಕಿ ಉಳಿಸಿದ್ದು, ತಕ್ಷಣವೇ ಸಂಬಳ ಬಿಡುಗಡೆ ಮಾಡಬೇಕೆಂದು ಸಂಜೀವ ಪೂಜಾರಿ ಆಗ್ರಹಿಸಿದ್ದಾರೆ

Sathish munchemane

Join WhatsApp

Join Now

 

Read More