ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದು ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ!?

On: February 6, 2024 1:54 PM
Follow Us:
---Advertisement---

ಜಿಲ್ಲಾಧಿಕಾರಿಗಳಿಂದ ಮಗ್ಗಾನ್ ಆಸ್ಪತ್ರೆ ಭೇಟಿ
ಶಿವಮೊಗ್ಗ,


    ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದು ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳು ಮತ್ತು ವಾರ್ಡುಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
    ರಕ್ತನಿಧಿಯ ರಕ್ತ ಶೇಖರಣಾ, ರಕ್ತ ವಿಭಜನಾ ಘಟಕ, ಸೀರಮ್ ಪರೀಕ್ಷಾ ಕೊಠಡಿ, ಫ್ಲೆಬೊಟಮಿ ವಿಭಾಗ, ರಕ್ತ ಸಂಬಂಧಿತ ಖಾಯಿಲೆಗಳ ಹಗಲು ಆರೈಕೆ ಕೇಂದ್ರ, ಐಸಿಸಿಯು ಘಟಕ, ಓಬಿಜಿ ವಿಭಾಗ, ಎನ್‍ಐಸಿಯು, ತಾಯಿ ಎದೆಹಾಲು ಶೇಖರಣಾ ಕೇಂದ್ರ ‘ಅಮೃತಧಾರೆ’, ಶಸ್ತ್ರಚಿಕಿತ್ಸೆ ಕೊಠಡಿ, ಇತರೆ ವಿಭಾಗಗಳಿಗೆ ತೆರಳಿ ವೀಕ್ಷಣೆ ಮಾಡಿ, ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಇತರೆ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಆಸ್ಪತ್ರೆ ಸೇವೆಗಳ ಕುರಿತು ಪರಿಶೀಲನೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.
      ನಂತರ ಹೊಸದಾಗಿ ನಿರ್ಮಾಣ ವಾಗುತ್ತಿರುವ ಕ್ಯಾನ್ಸರ್ ಹಾಸ್ಪೆಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದರು.

Sathish munchemane

Join WhatsApp

Join Now

 

Read More