ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಜಾತಿ ಭೇದ ಮರೆತು ವೀರಶೈವ–ಲಿಂಗಾಯತ ಸಮಾಜ ಒಗ್ಗಟ್ಟಿಗೆ ಕರೆ – “ಶಿವ ಸಂಕಲ್ಪ” ಒಕ್ಕೂಟ ಘೋಷಣೆ.

On: January 9, 2026 5:21 PM
Follow Us:
---Advertisement---

ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ “ಶಿವ ಸಂಕಲ್ಪ” ವೀರಶೈವ–ಲಿಂಗಾಯತ ಒಕ್ಕೂಟದ ಅಧ್ಯಕ್ಷ ಶ್ರೀ ಇ ವಿಶ್ವಾಸ್ ಅವರು, ಜಾತಿ ಗಣತಿ ಸಂದರ್ಭದಲ್ಲೇ ವೀರಶೈವ–ಲಿಂಗಾಯತ ಸಮಾಜದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಮುದಾಯವಾಗಿರುವ ವೀರಶೈವ–ಲಿಂಗಾಯತ ಸಮಾಜವು ಇಂದು ಒಳಗಿನ ಭೇದ–ಭಾವಗಳಿಂದ ಒಡೆದ ಮನೆಯಂತಾಗಿ ಒಗ್ಗಟ್ಟಿಲ್ಲದೆ ಸಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು. ಸಮಾಜವನ್ನು ಸಂಘಟಿಸಿ ಮುನ್ನಡೆಸಬೇಕಾದ ಕೆಲವರು ತಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಸಮಾಜವನ್ನೇ ವಿಭಜನೆಗೆ ಬಳಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಟೀಕಿಸಿದರು.

ಬಸವಾದಿ ಶರಣರು ಹಾಗೂ ಮಠ–ಮಾನ್ಯಗಳು ಪ್ರತಿಪಾದಿಸಿಕೊಂಡು ಬಂದ ಸಮ ಸಮಾಜದ ತತ್ತ್ವ ಇಂದು ಜಾತಿ–ಉಪಜಾತಿಗಳ ಹೆಸರಲ್ಲಿ ಅಸಮಾನತೆಯಿಂದ ತಲ್ಲಣಿಸುತ್ತಿರುವುದು ದುಃಖಕರ ಸಂಗತಿಯಾಗಿದೆ. ಹಿಂದೆ ನಾವು ಮಾಡುವ ಕಾಯಕದಿಂದ ಗುರುತಿಸಲ್ಪಟ್ಟಿದ್ದ ಜಾತಿಗಳು, ಇಂದು ಅದೇ ಹೆಸರಿನಲ್ಲಿ ಬೇರ್ಪಟ್ಟು ನಮ್ಮ ಮೂಲ ತತ್ತ್ವವನ್ನೇ ಮರೆತು ಸಾಗುತ್ತಿರುವುದು ಸಮಾಜದ ದೊಡ್ಡ ದುರ್ಬಲತೆ ಎಂದು ಹೇಳಿದರು.

ಈ ಎಲ್ಲ ಗೊಂದಲಗಳಿಂದ ಹೊರಬಂದು, ಯಾವುದೇ ಜಾತಿ, ಉಪಜಾತಿ, ಪಂಗಡ, ಉಪಪಂಗಡಗಳ ಭೇದ–ಭಾವವನ್ನು ತೊರೆದು ಎಲ್ಲರನ್ನು ವೀರಶೈವ–ಲಿಂಗಾಯತ ದಡಿಯಲ್ಲಿ ಒಗ್ಗೂಡಿಸಿ, ಅದರ ಮೂಲಕ ಹಿಂದೂ ಧರ್ಮದ ಸಂರಕ್ಷಣೆಗೆ ಸಂಕಲ್ಪಿತ ಸಮಾನ ಮನಸ್ಕರನ್ನು ಸಂಘಟಿಸುವ ಉದ್ದೇಶದಿಂದ “ಶಿವ ಸಂಕಲ್ಪ” ವೀರಶೈವ–ಲಿಂಗಾಯತ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

“ಶಿವ ಸಂಕಲ್ಪ”ಒಕ್ಕೂಟದ ಮಹಾಪೋಷಕರಾಗಿ ಶ್ರೀ ಮಹಾಲಿಂಗಯ್ಯ ಶಾಸ್ತ್ರಿಗಳು, ಗೌರವಾಧ್ಯಕ್ಷರಾಗಿ ಶ್ರೀ ಸೋಮಶೇಖರ್ ಎನ್.ಎಂ., ಅಧ್ಯಕ್ಷರಾಗಿ ಶ್ರೀ ಐ. ವಿಶ್ವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶ್ರೀಕಾಂತ್, ಖಜಾಂಚಿಯಾಗಿ ಶ್ರೀ ಅಂಗಮೂರ್ತಿ, ಕಾರ್ಯದರ್ಶಿಯಾಗಿ ಶ್ರೀ ಕುಬೇರಪ್ಪ ಪಿ.ಹೆಚ್. ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

“ಶಿವ ಸಂಕಲ್ಪ” ವೀರಶೈವ–ಲಿಂಗಾಯತ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ದಿನಾಂಕ 12-01-2026ರ ಸೋಮವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಹಾಗೂ ಉದ್ಘಾಟನೆಯನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ನಂತರ ಖ್ಯಾತ ಜಾನಪದ ಕಲಾವಿದ ಶ್ರೀ ಶಂಭು ಬಳಿಗಾರ್ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಕೆ.ಎಸ್. ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ರುದ್ರೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜ, ಶ್ರೀ ಡಿ.ಎಸ್. ಅರುಣ್, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಕೆ.ಇ. ಕಾಂತೇಶ್, ಬಸವೇಶ್ವರ ವೀರಶೈವ–ಲಿಂಗಾಯತ ಸಮಾಜದ ಅಧ್ಯಕ್ಷ ಶ್ರೀ ಜ್ಯೋತಿ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

Sathish munchemane

Join WhatsApp

Join Now

 

Read More