ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ: ಅಶ್ವತನಗರದ Dr ಜಯಶ್ರೀ ಹೊಮ್ಮರಡಿ – ಮಗ ಆತ್ಮಹತ್ಯೆ.!?

On: December 5, 2025 5:55 PM
Follow Us:
---Advertisement---

ಶಿವಮೊಗ್ಗ ನಗರದ ಅಶ್ವತ್ಥನಗರಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಮಗ ಆಕಾಶ್ ಹೊಮ್ಮರಡಿ ಇಬ್ಬರೂ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

‎ಹೊಮ್ಮರಡಿ ಕುಟುಂಬವು ಜಿಲ್ಲೆಯಲ್ಲೇ ಪ್ರಸಿದ್ಧ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಕುಟುಂಬ. ಕೆಲ ವರ್ಷಗಳ ಹಿಂದೆ ಹೊಮ್ಮರಡಿ ಆಸ್ಪತ್ರೆಯ ದಿವಂಗತ ಡಾ. ನಾಗರಾಜ್, ಮೂಲತಃ ನ್ಯಾಮತಿ ಗ್ರಾಮದವರು, ಮಕ್ಕಳ ತಜ್ಞರಾಗಿ ಜನಮನ್ನಣೆ ಪಡೆದಿದ್ದವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕುಟುಂಬದ ದುರ್ಭಾಗ್ಯಕ್ಕೆ, ಆಕಾಶ್ ಹೊಮ್ಮರಡಿ ಅವರ ಮೊದಲ ಪತ್ನಿಯೂ ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ನೇಣಿಗೆ ಶರಣಾಗಿದ್ದರು. ಈಗ ಅದೇ ನಿವಾಸದಲ್ಲಿ ತಾಯಿ ಮತ್ತು ಮಗ ಇದೇ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಸ್ತಂಭನ ಮೂಡಿಸಿದೆ.

ಘಟನೆಯ ನಿಖರ ಕಾರಣ ತಿಳಿದುಬರಬೇಕಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Sathish munchemane

Join WhatsApp

Join Now

 

Read More