ಶಿವಮೊಗ್ಗಕ್ಕೆ ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸನ್ಮಾನ್ಯ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಆತ್ಮೀಯವಾಗಿ ಸ್ವಾಗತಿಸಿದರು.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿ.ಐ.ಎಸ್.ಎಲ್) ಪುನಶ್ಚೇತನ ಹಾಗೂ ಅಗತ್ಯ ಬಂಡವಾಳ ಹೂಡಿಕೆ ವಿಷಯವಾಗಿ ಇಂದು ಕಾರ್ಖಾನೆಯ ಆವರಣದಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಮುಂದಿನ ಬೆಳವಣಿಗೆಗಳ ಕುರಿತು ಮಾಡಿದ ವಿಮರ್ಶಾ ಚರ್ಚೆಯ ನಂತರ, “ವಿ.ಐ.ಎಸ್.ಎಲ್ ಪುನಶ್ಚೇತನ—ಇದೇ ನನ್ನ ವಾಗ್ದಾನ” ಎಂದು ಕೇಂದ್ರ ಉಕ್ಕು ಹಾಗೂ ಬೃಹತ್–ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ಸಭೆಯಲ್ಲಿ ಶಾಸಕಿಯರಾದ ಶಾರದಾ ಪೂರ್ಯನಾಯಕ್, ಶಾಸಕರಾದ ಭೋಜೆಗೌಡ, ಮಂಗೋಟೆ ರುದ್ರೇಶ್, ಧರ್ಮ ಪ್ರಸಾದ್, ಶಾರದಾ ಅಪ್ಪಾಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.








