ಶಿವಮೊಗ್ಗದಲ್ಲಿ ಸಾಂದಿಪಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಭಿನ್ನ ‘ಕುಕ್ಕಿಂಗ್ ಸ್ಪರ್ಧೆ’ — ಬೆಂಕಿರಹಿತದಿಂದ ಬೆಂಕಿಯ ಅಡುಗೆವರೆಗೂ ಮಕ್ಕಳು ಮೆರೆದ ಪ್ರತಿಭೆ!
ಶಿವಮೊಗ್ಗ: ಸಾಂದಿಪಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ವಿಶಿಷ್ಟ ಅಡುಗೆ ಸ್ಪರ್ಧೆ ಈ ವರ್ಷ ಇನ್ನಷ್ಟು ರಂಗೇರಿತು. 2015ರಿಂದ ನಿರಂತರವಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮಕ್ಕಳ ಅಡುಗೆ ಕೌಶಲ್ಯ ಬೆಳೆಸುವುದೇ ಶಾಲೆಯ ಉದ್ದೇಶ. ಈ ಬಾರಿ ಸುಮಾರು 50ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮದೇ ತಂಡಗಳನ್ನು ರಚಿಸಿ ಸೃಜನಾತ್ಮಕ ಅಡುಗೆ ವೈಖರಿಯನ್ನು ಪ್ರದರ್ಶಿಸಿದರು.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಕಿರಹಿತ ಅಡುಗೆ ಟಾಸ್ಕ್ ನೀಡಲಾಗಿದ್ದು, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೆಂಕಿ ಬಳಸಿ ಅಡುಗೆ ಮಾಡುವ ಅವಕಾಶ ನೀಡಲಾಯಿತು.
ತರಗತಿಗೆ ವಿಶೇಷ ವಿಷಯಾಧಾರಿತ ಅಡುಗೆ ತಯಾರಿಸುವ ಗುರಿ ನಿಗದಿ ಮಾಡಲಾಗಿತ್ತು:
8ನೇ ತರಗತಿ – ಸಿರಿಧಾನ್ಯಗಳಿಂದ ತಿನಿಸು
9ನೇ ತರಗತಿ – ಹಿಟ್ಟಿನಿಂದ ತಯಾರಿಸಿದ ತಿಂಡಿಗಳು
10ನೇ ತರಗತಿ – ಅಕ್ಕಿ ಆಧಾರಿತ ಅಡುಗೆ
ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಮಕ್ಕಳು ಸ್ಥಳದಲ್ಲಿಯೇ ವಿವಿಧ ರುಚಿಕರ ತಿಂಡಿ, ಫುಡ್ ಐಟಂಗಳು ಮತ್ತು ಜ್ಯೂಸ್ ತಯಾರಿಸಿ ತಾಂತ್ರಿಕತೆ, ರುಚಿ ಹಾಗೂ ಪ್ರಸ್ತುತಿಕರಣದಲ್ಲಿ ಗಮನ ಸೆಳೆದರು.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ (Certificate) ಮತ್ತು ಮೆಡಲ್ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷರು ಹಾಗು ಅನನ್ಯ ಶಾಲೆಯ ಅಧ್ಯಕ್ಷರಾದ ಗಿರೀಶ್ ಅವರು, “ಈ ರೀತಿಯ ಅಡುಗೆ ಸ್ಪರ್ಧೆಗಳು ಮಕ್ಕಳಲ್ಲಿ ಇರುವ ಸೃಜನಶೀಲತೆ ಬೆಳಸುವುದಲ್ಲದೆ, ಆಹಾರದ ಮಹತ್ವ ಮತ್ತು ಆಹಾರವನ್ನು ವ್ಯರ್ಥ ಮಾಡಬಾರದು ಎಂಬ ಜಾಗೃತಿಯನ್ನೂ ಮೂಡಿಸುತ್ತದೆ” ಎಂದು ಹೇಳಿದರು.
ಅಡುಗೆ ಪದಾರ್ಥಗಳ ರುಚಿ, ಗುಣಮಟ್ಟ ಮತ್ತು ಪ್ರಸ್ತುತಿಕರಣವನ್ನು ಪರಿಗಣಿಸಿ ಜಡ್ಜ್ ಮಾಡಲು ಶಾಲೆಯ ಹಿಂದಿನ ಶಿಕ್ಷಕಿ ಹಾಗೂ ತಂಡದವರು ಜೊತೆಗೆ ಸಂಸ್ಥೆಯ ಸದಸ್ಯರು ತಪಾಸಣೆ ನಡೆಸಿ ಮೌಲ್ಯಮಾಪನ ಮಾಡಿದರು.
ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮಕ್ಕಳು ಅಡುಗೆ ಕೌಶಲ್ಯದಲ್ಲಿ ತೋರಿಸಿದ ಮೆರುಗು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.










