ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದು ಚಾನೆಲ್ ಗೆ ಹಾರಿದ್ದ ನವ ವಿವಾಹಿತ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ವಾಟ್ಪ್ ನಲ್ಲಿ ಐವರ ಹೆಸರು ಬರೆದು ಭದ್ರ ಚಾನೆಲ್ ನಲ್ಲಿ ಹಾರಿದ್ದ ನವವಿವಾಹಿತೆ ಲತಾ ಪಿ ಶವವಾಗಿ ಪತ್ತೆಯಾಗಿದ್ದಾಳೆ.ಗಂಡನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕೆ ವ್ಯಕ್ತವಾಗಿದೆ.
ಲತಾ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಗೆ ಹಾರಿದ್ದಾಳೆ. ನಾಲೆ ಬಳಿ ಮಹಿಳೆಯ ಬಟ್ಟೆ, ಮೊಬೈಲ್ ಪತ್ತೆಯಾಗಿತ್ತು. ಇದೇ ವರ್ಷದ ಏಪ್ರಿಲ್ ನಲ್ಲಿ ಶಿಕಾರಿಪುರ ತಾಲೂಕು ದಿಂಡದಹಳ್ಳಿ ಗ್ರಾಮದ ಗುರುರಾಜ್ ಎಂಬಾತನ ಲತಾ ಮದುವೆಯಾಗಿದ್ದರು. ಭದ್ರಾವತಿ ತಾಲೂಕಿನ ಡಿ ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಗಳ ಪುತ್ರಿಯಾಗಿದ್ದ ಲತಾ, ಮದುವೆಯಾದ ಏಳು ತಿಂಗಳಲ್ಲಿ ಗಂಡನ ಮನೆಯವರಿಂದ ನಾನಾ ರೀತಿಯ ಹಿಂಸೆ ಎಂದು ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೆಪಿಸಿಎಲ್ ಎಇಇ ಆಗಿರುವ ಗುರುರಾಜ್ ಮತ್ತು ಅವರ ಪೋಷಕರಿಂದ ಕಿರುಕುಳ ಎಂದು ಡೆತ್ ನೋಟ್ ನಲ್ಲಿ ಲತಾ ವಿವರವಾಗಿ ಬರೆದಿದ್ದು, ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ತನ್ನ ಸಾವಿಗೆ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ, ಗುರುರಾಜ್ ಹಾಗೂ ಕೃಷ್ಣಪ್ಪ ಕಾರಣ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದರು ಈ ಐದೂ ಜನ ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನಾನು ಮದುವೆ ಆಗಿದ್ದ ಹುಡುಗ ಒಳ್ಳೆಯವರು ಎಂದುಕೊಂಡು ಮದುವೆ ಆದೆ. ಆದರೆ, ಅವರ ಅಕ್ಕ, ಅಮ್ಮ ಹಾಗೂ ಮಾವನ ಮಾತು ಕೇಳಿ ಇವರು ಕೂಡ ನನ್ನ ಜೊತೆ ನಾಟಕೀತವಾಗಿ ವರ್ತನೆ ಮಾಡಿದರು. ಇದರಿಂದ ಸಾಕಷ್ಟು ಅವಮಾನ ಮಾಡಿಸಿಕೊಂಡಿದ್ದೇನೆ. ಇದನ್ನು ಓದುತ್ತಿರುವವರು ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಲತಾಬರೆದುಕೊಂಡಿದ್ದಾರೆ
ಒಳ್ಳೆಯದಾಗುತ್ತೆ ಅಂತಾ ಸಹಿಸಿಕೊಂಡೆ ಯಾರು ಕೂಡು ಹುಟ್ತಾ ಕೆಟ್ಟವರಾಗಿ ಇರೋದಿಲ್ಲ. ಪ್ರತಿ ಹೆಣ್ಣು ಕೂಡ ಪುಣ್ಯ ಮಾಡಿಯೇ ಗಂಡನ ಮನೆಗೆ ಹೋಗುತ್ತಾಳೆ. ಒಂದೇ ದಿನಕ್ಕೆ, ಒಂದೇ ತಿಂಗಳಿಗೆ ಯಾರೂ ಕೂಡ ಅಲ್ಲಿನ ವಾತಾವರಣಕ್ಕೆ ಅಡ್ಜಸ್ಟ್ ಆಗೋದಿಲ್ಲ. ಈ ಸಮಯದಲ್ಲಿ ಯಾರೂ ಬೆಂಬಲ ಕೊಡದೆ ಇದ್ದರೂ, ಗಂಡ ಬೆಂಬಲ ಕೊಡಬೇಕು. ನನ್ನ ಹೆಂಡ್ತಿ ಹೊಸ ಮನೆಗೆ ಬಂದಿದ್ದಾಳೆ. ತಪ್ಪುಗಳು ಆಗುತ್ತದೆ. ಅದನ್ನು ಬಿಟ್ಟು ಮನೆಯ ಉಳಿದವರ ಜೊತೆ ಸೇರಿಕೊಂಡು ಗಂಡನೂ ಕೂಡ ದ್ವೇಷ ಮಾಡಿದಾಗ ಹೆಣ್ಣು ಬದುಕಿದ್ದೂ ಸತ್ತ ಥರ ಅನಿಸುತ್ತದೆ. ಒಳ್ಳೆಯದಾಗುತ್ತೆ ಅಂತಾ ತುಂಬಾ ಸಹಿಸಿಕೊಂಡೆ. ಆದರೆ, ದಿನೇ ದಿನೇ ಅವರು ಮಾಡುತ್ತಿರುವ ಸಂಚಿನ ವರ್ತನೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಲತಾ ಬರೆದುಕೊಂಡಿದ್ದಾರೆ. ಲತಾ ಭದ್ರಾ ನಾಲೆಗೆ ಹಾರಿರುವ ಹಿನ್ನೆಲೆಯಲ್ಲಿ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರಿಂದ ಶೋಧ ಕಾರ್ಯ ಸಾಗುತ್ತಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.






