ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪುಟ್‌ಪಾತ್‌ಗಳ SS ರೈಲಿಂಗ್ಸ ಮುರಿದ ತಿಂಡಿ ಗಾಡಿಯವರು — ಮಹಾನಗರ ಪಾಲಿಕೆಯ ಕ್ರಮಕ್ಕೆ ಆಗ್ರಹ.!?

On: November 22, 2025 5:29 PM
Follow Us:
---Advertisement---

ಶಿವಮೊಗ್ಗ ಸ್ಮಾರ್ಟ್ ಸಿಟಿ:  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸುಮಾರು ಸಾವಿರ ಕೋಟಿ ರೂ. ವೆಚ್ಚ ಮಾಡಿ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಲು ವಿವಿಧ ಕಾಮಗಾರಿಗಳು ನಡೆಸಲಾಗಿದೆ.

ನಗರದಲ್ಲಿ ಅನೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ S.S ಸ್ಟೀಲ್ ರೈಲಿಂಗ್ಸ ಅಂಚು ಹೊಂದಿದ ಪುಟ್‌ಪಾತ್‌ಗಳು ಜನಸಂಚಾರಕ್ಕೆ ಅನುಕೂಲವಾಗುವಂತೆ ಅಳವಡಿಸಲಾಗಿದೆ.

ಆದರೆ, ನಗರದ ಬಿ.ಹೆಚ್.ರಸ್ತೆಯ ವಿನಾಯಕ ಟಾಕೀಸ್ ಪಕ್ಕದ ಕೆಲವು ತಿಂಡಿ ಗಾಡಿ ವ್ಯಾಪಾರಿಗಳು ಈ ಪುಟ್‌ಪಾತ್‌ಗಳ ಸ್ಟೀಲ್ ರೈಲಿಂಗ್ಸ ಕಂಬಿಗಳನ್ನು ಮುರಿದು, ತಮ್ಮ ಸಾಮಾನು ಸಾಗಿಸಲು ಅನೂಕುಲವಾಗುವಂತೆ ಮಾಡಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ನಗರದಲ್ಲಿನ ಹಲವು ಮುಖ್ಯರಸ್ತೆಗಳ ಪುಟ್‌ಪಾತ್‌ಗಳು ಕೂಡಾ ಇದೇ ರೀತಿ ತಿಂಡಿ ಗಾಡಿ, ಹಣ್ಣು–ತರಕಾರಿ ಸ್ಟ್ರೀಟ್ ವ್ಯವಹಾರಕ್ಕೆ ತತ್ತರಿಸಿರುವುದಾಗಿ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಆಸ್ತಿಯ ರಕ್ಷಣೆಯ ಜವಾಬ್ದಾರಿ ಇರುವ ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಗಮನಿಸದೇ ಇರುವುದು ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕೆಲವು ಅಧಿಕಾರಿಗಳು ಲಂಚದ ಅಮಿಷಕ್ಕೆ ಕಣ್ಣುಮುಚ್ಚಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮಹಾಯುಕ್ತರು ಸಂಬದ್ದ ಪಟ್ಟವರ  ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಗರಾದ್ಯಂತ ಇದೇ ರೀತಿ “ಗ್ರಿಲಿಂಗ್ಸ್‍ ಮಾಯ” ಆಗುವ ಅಪಾಯವಿದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಅತ್ಯಂತ ಪ್ರಮಾಣಿಕತೆ, ನೇರ-ನಿಷ್ಪಕ್ಷಪಾತತೆಗೆ ಹೆಸರಾಗಿರುವ ಆಯುಕ್ತ ಮಯಣ್ಣಗೌಡರು ಈ ಕುರಿತು ಯಾರದ್ದೇ ಒತ್ತಡ–ಮೂಲಾಜಿಗೆ ಒಳಗಾಗದೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Sathish munchemane

Join WhatsApp

Join Now

 

Read More