ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ವಿಶ್ವ ಹಿಂದು ಪರಿಷತ್ – ಶಿವಮೊಗ್ಗ: ನಗರಾದ್ಯಂತ ಭಕ್ತಿ ಪೂರ್ವಕವಾಗಿ ಗೋವರ್ದನ ಪೂಜೆ, ಗೋಪೂಜೆ.!

On: October 22, 2025 7:33 PM
Follow Us:
---Advertisement---

ಶಿವಮೊಗ್ಗ, ಅ.22: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ನಗರದ ವಿವಿಧ ಭಾಗಗಳಲ್ಲಿ ಭಕ್ತಿ, ಗೌರವ ಹಾಗೂ ಪರಂಪರೆಯ ಸಂಯೋಜನೆಯೊಂದಿಗೆ “ಗೋವರ್ದನ ಪೂಜೆ (ಗೋ ಪೂಜೆ)” ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು.

ಈ ಬಾರಿ ನಗರದ ಪ್ರಮುಖ ಐದು ಸ್ಥಳಗಳಲ್ಲಿ ಗೋ ಪೂಜೆಯನ್ನು ಆಯೋಜಿಸಲಾಗಿತ್ತು.

ಕೋಟೆಶ್ರೀಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಪ್ರಧಾನ ಕಾರ್ಯಕ್ರಮಕ್ಕೆ ಶಾಸಕ ಚನ್ನಬಸಪ್ಪ ಅವರು ಚಾಲನೆ ನೀಡಿದರು. ಅವರು ಮಾತನಾಡುತ್ತಾ “ಗೋವು ನಮ್ಮ ಸಂಸ್ಕೃತಿಯ ಸಂಕೇತ, ಕೃಷಿ ಹಾಗೂ ಗ್ರಾಮೀಣ ಜೀವನದ ಅಸ್ತಿತ್ವದ ಆಧಾರ” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಜೆ.ಆರ್. ವಾಸುದೇವ, ನಗರ ಕಾರ್ಯದರ್ಶಿ ಆನಂದ್, ದೇವಸ್ಥಾನ ಪ್ರಮುಖ ಪ್ರಸಾದ್, ಹಾಗೂ ವಿ.ಹೆಚ್.ಪಿ ಮತ್ತು ಬಜರಂಗ ದಳದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ನಗರದ ಇತರ ಆಯ್ದ ಸ್ಥಳಗಳಾದ

2. ಬಸವಣ್ಣ ದೇವಸ್ಥಾನ – ಗಾಂಧಿಬಜಾರ್,

3. ಲಕ್ಷ್ಮೀನಾರಾಯಣ ದೇವಸ್ಥಾನ – ಬಿ.ಬಿ.ರಸ್ತೆ,

4. ಸೀಗೆಹಟ್ಟಿ ಪ್ರದೇಶ,

5. ಪ್ರಸನ್ನ ಗಣಪತಿ ದೇವಸ್ಥಾನ – ವಿನೋಬನಗರ (ಡಿ.ವಿ.ಎಸ್ ಶಾಲೆ ಹತ್ತಿರ),

ಎಂಬ ಸ್ಥಳಗಳಲ್ಲಿಯೂ ಶ್ರದ್ಧೆಯಿಂದ ಗೋಪೂಜೆ ನೆರವೇರಿಸಲಾಯಿತು.

ಮಹಾವೀರ ಗೋ ಶಾಲೆಯಿಂದ ತರಲಾದ ಪವಿತ್ರ ಗೋವುಗಳಿಗೆ ಸಾರ್ವಜನಿಕರು ಹಾಗೂ ಹಿಂದೂ ಭಾಂದವರು ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ವಿಶೇಷವಾಗಿ ಶರಾವತಿ ಪ್ರಖಂಡದ ವತಿಯಿಂದ ವಿನೋಬನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 9.00 ಗಂಟೆಗೆ ಭಕ್ತಿ ಪೂರ್ವಕವಾಗಿ ಗೋ ಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶ್ರದ್ಧಾವಂತ ಭಕ್ತರು, ಕಾರ್ಯಕರಾದ ಅರವಿಂದ್,  ರಾಮಚಂದ್ರ, ಪುಷ್ಪರಾಜ್ಜೈನ್, ಮಾಲತೇಶ್, ಕಿರಣ್, ಹಾಗೂ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡು ಸಂಸ್ಕೃತಿಯ ಪರಂಪರೆಯನ್ನು ಜೀವಂತವಾಗಿರಿಸುವಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಪೂರ್ಣ ಉತ್ಸಾಹ ಹಾಗೂ ಶಾಂತಿಯುತ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

Sathish munchemane

Join WhatsApp

Join Now

 

Read More