ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ರಾಜ್ಯದ ಗ್ರಾ.ಪಂ.ನೌಕರರಿಗೆ ಗುಡ್ ನ್ಯೂಸ್ : ಪ್ರತಿತಿಂಗಳ 5ನೇ ತಾರೀಕಿನೊಳಗೆ `ಸಂಬಳ’.!

On: October 22, 2025 7:47 AM
Follow Us:
---Advertisement---

ರಾಜ್ಯದ ಗ್ರಾ.ಪಂ.ನೌಕರರಿಗೆ ಗುಡ್ ನ್ಯೂಸ್ : ಪ್ರತಿತಿಂಗಳ 5ನೇ ತಾರೀಕಿನೊಳಗೆ `ಸಂಬಳ’ ನೀಡುವಂತೆ ಸರ್ಕಾರ ಮಹತ್ವದ ಆದೇಶ

ಬೆಂಗಳೂರು : ಗ್ರಾಮಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ನೀಡುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನವನ್ನು ನಿಯಮಿತವಾಗಿ ಪಾವತಿಸುವುದು ಆದ್ಯತೆಯ ವಿಷಯವಾಗಿರುತ್ತದೆ.

ಪ್ರಸ್ತುತ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ದಿನಾಂಕ:01.03.2018ರಿಂದ ಜಾರಿಗೆ ಬರುವಂತೆ ಸರ್ಕಾರದ ನಿಧಿಯಿಂದಲೇ ವೇತನ ಪಾವತಿಸಲು ಕ್ರಮವಹಿಸಲಾಗುತ್ತಿದ್ದು, ಅಗತ್ಯವಿರುವ ಅನುದಾನವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಇ.ಎಫ್.ಎಂ.ಎಸ್ ಖಾತೆಗಳಿಗೆ ಸರ್ಕಾರದಿಂದಲೇ ಬಿಡುಗಡೆ ಗೊಳಿಸಲಾಗುತ್ತಿದೆ.

ಆದಾಗ್ಯೂ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪಾವತಿಸಲು ವಿಳಂಬ ಮಾಡುತ್ತಿರುವ ಮತ್ತು ವೇತನ ಪಾವತಿ ಮಾಡದೇ ಇರುವ ಕುರಿತಾಗಿ ಸರ್ಕಾರದಲ್ಲಿ ಹಲವಾರು ದೂರುಗಳು ಸ್ವೀಕೃತಗೊಳ್ಳುತ್ತಿವೆ. ಗ್ರಾಮ ಪಂಚಾಯಿತಿಗಳಲ್ಲಿ ಅನುದಾನ ಲಭ್ಯವಿದ್ದರೂ ಸಹ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳ ವೇತನ ಪಾವತಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಪ್ರಸ್ತುತ ಅವಧಿಯವರೆಗೆ ವೇತನ ಪಾವತಿಗೆ ಬಾಕಿಯಿರುವ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನವನ್ನು ಈ ಪತ್ರ ತಲುಪಿದ 02 ದಿನಗಳ ಒಳಗಾಗಿ ಪಾವತಿಸಿ, ವೇತನ ಪಾವತಿಗೆ ಯಾವುದೇ ಬಾಕಿ ಇಲ್ಲದಿರುವ ಕುರಿತು ಆಯುಕ್ತಾಲಯಕ್ಕೆ ವರದಿಯನ್ನು ಸಲ್ಲಿಸಲು ತಿಳಿಸಿದೆ.

ಮುಂದುವರೆದು, ಇನ್ನು ಮುಂದೆ ಪ್ರತಿ ಮಾಹೆಯ 05 ನೇ ತಾರೀಖಿನ ಒಳಗಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಖಾತೆಗಳಿಗೆ ವೇತನ ಪಾವತಿಯಾಗುವಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದೆ ಹಾಗೂ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ನಿರ್ಲಕ್ಷ್ಯತೆ ವಹಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು. ತಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವೇತನವು ನಿಯಮಿತವಾಗಿ ಪಾವತಿಯಾಗುತ್ತಿರುವ ಕುರಿತು ಪ್ರತಿ ತಿಂಗಳು ಮೇಲ್ವಿಚಾರಣೆ ನಡೆಸುವಂತೆ ಈ ಮೂಲಕ ತಿಳಿಸಲಾಗಿದೆ.

Sathish munchemane

Join WhatsApp

Join Now

 

Read More