ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಪ್ಪು ಅಜರಾಮರ | ಸುದೀಪ್ ಧ್ವನಿಯಲ್ಲಿ ಮೂಡಿ ಬಂತು ಪುನೀತ್ ರಾಜಕುಮಾರ್ ಪೂರ್ತಿ ಜೀವನ.!

On: October 18, 2025 7:33 PM
Follow Us:
---Advertisement---

ನಟ, ದಿವಂಗತ ಪುನೀತ್ ರಾಜ್‍ಕುಮಾರ್   ಚಿತ್ರ: ಇನ್ಸ್ಟಾಗ್ರಾಮ್

ನಟ, ದಿವಂಗತ ಪುನೀತ್ ರಾಜಕುಮಾರ್ ಅವರು ನಿಧನರಾಗಿ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ  ಪೂರ್ಣಗೊಳ್ಳಲಿದೆ.  ಆದರೆ ಅಪ್ಪು ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದೆ.  ಅಕ್ಟೋಬರ್ 16ರಂದು ಪುನೀತ್ ಅಭಿಮಾನಿಗಳಿಗೆ ಅಶ್ವಿನಿ ಅವರು ಪುನೀತ್ ರಾಜಕುಮಾರ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ದಿನದಂದು ಪಿಆರ್‌ಕೆ ಆಪ್  ಅಧಿಕೃತವಾಗಿ ಲೋಕಾರ್ಪಣೆ ಮಾಡಲು ನಿರ್ಧರಿಸಿದ್ದರು.

ಈ ಬಗ್ಗೆ ಅಶ್ವಿನಿ ಪುನೀತ್ ರಾಜುಮಾ‌ರ್ ಆವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂದಿದ್ದರು. ‘ಪ್ರೀತಿಯಿಂದ ಅಪ್ಪು ಅಭಿಮಾನಿಗಳಾಗಿ. ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದೀದೆ. ಬರ್ತಿದೆ ಒಂದೂ ಪವರ್ಫುಲ್ ತ್ರೇಲರ್ ಇದೇ ಶನಿವಾರ ಬೆಳಗ್ಗೆ 11.55ಕ್ಕೆ ಮತ್ತೇ ಅಪ್ಪುವನ್ನು ಪಿಯಾರ್ ‌ಕೆ ಆಪ್ (Prk App) ಮೂಲಕ ಕಣ್ಣುಂಬಿಕೊಳ್ಳು ರೆಡಿಯಾಗಿ’ ಎಂದು ಬರದುಕೊಂಡು ವಿಡಿಯೊ ಒಂದನ್ನು ಹಂಚಿಕೊಂಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಂಚಿಕೊಂಡಿರುವ ವಿಡಿಯೊಗೆ ನಟ ಸುದೀಪ್ ಧ್ವನಿ ನೀಡಿದ್ದಾರೆ.  ವಿಡಿಯೊ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರ ಪೋಸ್ಟ್ ಜೊತೆಗೆ ‘ಪ್ರತಿ ಅಭಿಮಾನಿ ಹೃದಯದಿಂದ -ಪ್ರತಿಯೊಂದು ಮನೆಯವರೆಗೂ  ಅಪ್ಪುವಿನ ನೆನಪು ಅಜರಾಮರ.  ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊದಲ ಫ್ಯಾನ್‌ಡಮ್ ಆಪ್.  ಇದೇ ಅಕ್ಟೋಬರ್ 25 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ.  ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ.  ಈ ಭಾವನಾತ್ಮಕ ಪ್ರಯಾಣಕ್ಕೆ ತಮ್ಮ ಶಕ್ತಿಯುತ ಧ್ವನಿಯನ್ನು ನೀಡಿದ್ದಕ್ಕಾಗಿ ಕಿಚ್ಚ ಸುದೀಪ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದು ಹೇಳಿದರು  ಬರೆದುಕೊಂಡಿದ್ದಾರೆ.  

Sathish munchemane

Join WhatsApp

Join Now

 

Read More