ಶಿವಮೊಗ್ಗ: ನಗರದ ಮೆಗ್ಗಾನ ಆಸ್ಪತ್ರೆ ನರ್ಸ್ ಕ್ವಾರ್ಟರ್ಸ್‌ನಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಾಮಣ್ಣ ಅವರು ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳ ಹೋಗಬೇಕಾಯಿತು.
ಒಳಗೆ ಕಂಡ ದೃಶ್ಯ ಹೃದಯವಿದ್ರಾವಕವಾಗಿತ್ತು,6ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಪೂರ್ವಿಕಾ ಅವರ ತಲೆ ಕೋಚಲ್ಪಟ್ಟು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಮೇಲೆಯೇ ತಾಯಿ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಸ್ಥಳೀಯರ ಪ್ರಕಾರ ಶೃತಿ ಅವರು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟನೆಯಿಂದ ಕ್ವಾರ್ಟರ್ಸ್‌ನಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ರಾಮಣ್ಣ ಅವರು ಆಸ್ಪತ್ರೆಯಲ್ಲಿ ಮತ್ತು ಕ್ವಾರ್ಟರ್ಸ್‌ನಲ್ಲಿ ಸರಳ, ಸಜ್ಜನಿಕೆಯ ವ್ಯಕ್ತಿ ಎಂದು ಎಲ್ಲರೂ ವಿವರಿಸುತ್ತಿದ್ದು, ಈ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ನೆರೆಹೊರೆಯವರು ಕಂಬನಿ ಮಿಡಿದಿದ್ದಾರೆ.
 






