ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಇವರ ಒಮ್ಮತದ ನಿರ್ಣಯದಂತೆ ನಮ್ಮ ಜಾತಿಗಣತಿಯಲ್ಲಿ ಸಮಾಜದ ಬಂದುಗಳಿಗೆ ಸೂಕ್ತ ಮಾಹಿತಿ ನೀಡಲು ಆಯೋಜಿಸಿದ ಸುದ್ದಿಗೋಷ್ಠಿ ಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಶ್ರೀ ರುದ್ರಮುನಿ ಸಜ್ಜನ್ ರವರು ಮಾಹಿತಿ ನೀಡಿದರು
“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)-2025”
ವೀರಶೈವ ಲಿಂಗಾಯತ ಬಂಧುಗಳೆಲ್ಲರಿಗೂ ಶುಭಾಶಯ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ದಿನಾಂಕ:22-09-2025 ರಿಂದ 07-10-2025ರವರೆಗೆ ರಾಜ್ಯದಾದ್ಯಂತ ನಡೆಸುತ್ತಿರುವ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025(ಜಾತಿಗಣತಿ)” ಅತ್ಯಂತ ಮಹತ್ವದ್ದಾಗಿದ್ದು, ಸಮಾಜದಲ್ಲಿ ಸಮೀಕ್ಷೆಯಲ್ಲಿ ತಪ್ಪದೆ ಸಕ್ರಿಯವಾಗಿ ಭಾಗವಹಿಸಲು ಕೋರುತ್ತೇವೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೊದಲಿನಿಂದಲೂ ‘ವೀರಶೈವ ಲಿಂಗಾಯತ’ ಪ್ರತ್ಯೇಕ ಧರ್ಮಕ್ಕೆ ಅಧಿಕೃತ ಮಾನ್ಯತೆ ದೊರಕಬೇಕು ಎಂದು ಪ್ರತಿಪಾದಿಸುತ್ತಿದೆ. ಮಾನ್ಯತೆ ಸಿಗುವ ತನಕ ಹೋರಾಟ ಮುಂದುವರಿಯುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯಲ್ಲಿ ಜಾತಿ ಮತ್ತು ಉಪಜಾತಿಗಳು ಮಾತ್ರ ಪ್ರಾಮುಖ್ಯತೆಯನ್ನು ಪಡೆದಿವೆ. ಮೀಸಲಾತಿಯನ್ನು ಧರ್ಮಾಧಾರಿತವಾಗಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಮೀಸಲಾತಿ ಸಂಪೂರ್ಣ ಜಾತಿಯ ಆಧಾರಕ್ಕಾಗಿ. ಆದ್ದರಿಂದ ನಾವುಗಳು ಜಾತಿ ಮತ್ತು ಉಪಜಾತಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಸರ್ಕಾರದಿಂದ ನಮ್ಮ ಸಮಾಜದ ಅರ್ಹರಿಗೆ ದೊರೆಯಬೇಕಾದ ಎಲ್ಲರೂ ಸೌಲಭ್ಯಗಳನ್ನು ಪಡೆಯಲು ನೈಜ ಮಾಹಿತಿಯನ್ನು ನೀಡಬೇಕೆಂದು ನಾವು ಮನವಿ ಮಾಡುತ್ತೇವೆ.
ಹಾಗೆ ಅನುಬಂಧ 1ರ ಕಾಲಂ ನಂ. 8ರಲ್ಲಿ ಅಂದರೆ ಧರ್ಮದ ಕಾಲಂನಲ್ಲಿ ಸಂಕೇತ ಸಂಖ್ಯೆ: 11ರಲ್ಲಿ ನೀಡಿರುವ “ಇತರೆ” ಕಾಲಂನಲ್ಲಿ “ವೀರಶೈವ ಲಿಂಗಾಯತ” ಅಥವಾ ತಮ್ಮ ವಿವೇಚನೆಯಂತೆ ನಮೂದಿಸುವುದು.
ಜಾತಿಯ ಕಾಲಂ 9ರಲ್ಲಿ ‘ಲಿಂಗಾಯತ’ ಸಮುದಾಯಕ್ಕೆ ಸಂಕೇತ ಸಂಖ್ಯೆ:A-0832 ಅಥವಾ ‘ವೀರಶೈವ’ ಸಮುದಾಯಕ್ಕೆ ನೀಡಿರುವ ಸಂಕೇತ ಸಂಖ್ಯೆ:A-1522 ಎಂದು ಕಡ್ಡಾಯವಾಗಿ ನಮೂದಿಸಬೇಕು. ನಮ್ಮ ಸಮಾಜದ ನಿಖರ ಸಂಖ್ಯೆ ತಿಳಿಯಲು ಈ ಕಾಲಂ ಅತ್ಯಂತ ಅಗತ್ಯ ಮತ್ತು ಅವಶ್ಯಕವಾಗಿದೆ.
ಉಪಜಾತಿಯ ಕಾಲಂ 10 ರಲ್ಲಿ ನೀವು ನಿಮ್ಮ ಉಪಜಾತಿಯ ಸಂಕೇತ ಸಂಖ್ಯೆ (ಕೋಡ್ ನಂ) ಗುರುತಿಸಿ ಅದನ್ನು ನಮೂದಿಸಿ. ಸಮೀಕ್ಷೆಯ ಸಂದರ್ಭದಲ್ಲಿ ‘ವೀರಶೈವ ಅಥವಾ ಲಿಂಗಾಯತ’ ಎಂದು ಬರೆಸಿದ ಬಳಿಕವಷ್ಟೇ ತಮ್ಮ ಉಪಜಾತಿಯ ಹೆಸರು ಬರೆಸಬೇಕು. ‘ವೀರಶೈವ’ ಮತ್ತು ‘ಲಿಂಗಾಯತ’ ಎರಡನ್ನೂ ಸಮೀಕರಿಸಿ ನಮ್ಮ ಸಮುದಾಯದ ಸಂಖ್ಯೆಯನ್ನು ಪ್ರಕಟಿಸಿಲ್ಲ.
ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಗಣತಿದಾರರಿಗೆ ನೀಡಿ, ಗಣತಿದಾರರು ತಾವು ನೀಡಿದ ಮಾಹಿತಿಯನ್ನು ಸರಿಯಾದ ಸಂಕೇತ (ಕೋಡ್ ನಂ)ಗಳನ್ನು ನಮೂದಿಸಿ ನಮೂದಿಸಿರುವ ಸಂಖ್ಯೆಯನ್ನು ಖಾತರಿಪಡಿಸಿಕೊಂಡು ಸಮ್ಮತಿಸುವಂತೆ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ರುದ್ರಮುನಿ ಎನ್ ಸಜ್ಜನ್, ಅಧ್ಯಕ್ಷರು, ತಿಳಿಸಿದರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹಾಲಪ್ಪ, ಗೀತಾರವಿಂದ್ರ ಗಿರೀಶ್, ಮಲ್ಲಿಕಾರ್ಜುನ ಕಾನೂರು, ಪುಷ್ಪ ಹಾಲಪ್ಪ, ಎನ್, ಎಸ್. ಕುಮಾರ್, ಸುಧಾ ಬೆನಕಪ್ಪ, ಮೋಹನ್, ವಿಕ್ರಮ್, ಸಚಿನ್ ಪೂಜಾರ್ ಅನಿಲ್ ಪಾಟೀಲ್ ರವರು ಉಪಸ್ಥಿತರಿದ್ದರು.
 





