ವೆಂಕಟೇಶನಗರ 2ನೇ ತಿರುವಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಮಾಹಿತಿಯ ಪ್ರಕಾರ, ರಾತ್ರಿ ಹೊತ್ತು 12 ಗಂಟೆಯಾದರೂ ಪಿ.ಜಿ.ಯಲ್ಲಿ ವಾಸಿಸುವವರು ಊಟ ಹಾಗೂ ಇತರ ವಸ್ತುಗಳನ್ನು ಜೆಮ್ಯಾಟೋ ಸೇರಿದಂತೆ ಆನ್ಲೈನ್ ಆರ್ಡರ್ ಮಾಡುವುದರಿಂದ ರಸ್ತೆ ತುಂಬಾ ಕಿರಿದು ಆಗಿ ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಈಗಾಗಲೇ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಇಂದು ಸ್ಥಳೀಯರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರ ಪ್ರಕಾರ, ಪಿ.ಜಿ.ಗೆ ಮಹಾನಗರ ಪಾಲಿಕೆ ಯಾವುದೇ ಅನುಮತಿ ನೀಡಿಲ್ಲ. ಆದರೂ ಪಿ.ಜಿ ಮಾಲೀಕರು ಅನಧಿಕೃತವಾಗಿ ಅನ್ಯ ರಾಜ್ಯದ ಯುವಕರನ್ನು ಸೇರಿಸಿಕೊಂಡಿದ್ದಾರೆ. ಇದರಿಂದ ಪ್ರದೇಶದಲ್ಲಿ ಅಶಾಂತಿ ಹಾಗೂ ಭದ್ರತಾ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದರು.
ದೂರಿನ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ 112 ಕಂಟ್ರೋಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯರನ್ನು ಸಮಾಧಾನ ಪಡಿಸಿದರು. ಬಳಿಕ ಜಯನಗರ ಪೊಲೀಸ್ ವೃತ್ತ ನಿರೀಕ್ಷಕ ಸಿದ್ದನಗೌಡರು ಸ್ಥಳಕ್ಕೆ ಹಾಗು ಮಾಜಿ ಮೇಯರ್ ನಾಗರಾಜ್ ಕಂಕಾರಿಯವರು ಬಂದು ಪರಿಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯರ ಮನವೊಲಿಸಿದರು. ಅನಧಿಕೃತ ಪಿ.ಜಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಬೇರೆಡೆಗೆ ಸ್ಥಳಾಂತರಿಸಿಕೊಳ್ಳಲು ಸೂಚಿಸಿದರು.
ಈ ಘಟನೆಯಿಂದಾಗಿ ಸಾರ್ವಜನಿಕರ ಆಕ್ರೋಶ ತಾತ್ಕಾಲಿಕವಾಗಿ ಶಮನಗೊಂಡಿದ್ದು,
ಮಹಾನಗರ ಪಾಲಿಕೆ ಹಾಗೂ ಪೊಲೀಸರು ಮುಂದೆನಾದರು ಅನುಮತಿ ನೀಡಿದರೆ ಸ್ಥಳೀಯ ಪೋಲಿಸ್ ಠಾಣೆಯ ಮುಂದೆ ಉಗ್ರವಾಗಿ ಪ್ರತಿಬಟಿಸುವುದಾಗಿ ಅಗ್ರಹಿಸಿದ್ದಾರೆ.