ಸಾಗರ, ಆಗಸ್ಟ್ 24: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಲಿಂಗನಮಕ್ಕಿ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ ಜಲಾಶಯದ ಗೇಟುಗಳನ್ನು ತೆರೆಯುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಭಾಗವಹಿಸಿದರು. ಸಂಕೇತವಾಗಿ ಐದು ಗೇಟುಗಳನ್ನು ತೆರೆಯುವ ಮೂಲಕ ನೀರು ಹರಿಯುವ ಕಾರ್ಯ ಪ್ರಾರಂಭಿಸಲಾಯಿತು.
ಜಲಾಶಯದಲ್ಲಿ ಒಟ್ಟು 11 ಗೇಟುಗಳಿದ್ದು, ಸಂಗ್ರಹವಾಗಿರುವ ನೀರಿನ ಪ್ರಮಾಣ ಹಾಗೂ ಶೇಕರಣೆಯ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಗೇಟುಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಭಾರಿ ಮಳೆಯ ಪರಿಣಾಮವಾಗಿ ಜಲಾಶಯ ಈಗಾಗಲೇ ತುಂಬಿಕೊಂಡಿದ್ದು, ಸಮೀಪದ ನದಿಗಳು ಹಾಗೂ ಕಾಲುವೆಗಳಿಗೂ ಸಮರ್ಪಕವಾಗಿ ನೀರು ಹರಿಯಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯದ ಮಳೆಯ ಸ್ಥಿತಿ ಕುರಿತು ಪ್ರತಿಪಕ್ಷ ಬಿಜೆಪಿ ಮೇಲೆ ಟೀಕೆ ನಡೆಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ, ಬರ ಬರಲಿದೆ ಎಂದು ಬಿಜೆಪಿ ನಾಯಕರೇ ರಾಜ್ಯದ ಜನತೆಗೆ ಭಯ ಹುಟ್ಟಿಸುತ್ತಿದ್ದರು. ಆದರೆ ಇಂದು ನೋಡಿದರೆ ನದಿಗಳು ತುಂಬಿ ಹರಿಯುತ್ತಿವೆ, ಜಲಾಶಯಗಳು ನೀರಿನಿಂದ ಕಂಗೊಳಿಸುತ್ತಿವೆ. ಇದು ಪ್ರಕೃತಿಯ ಆಶೀರ್ವಾದ ಹಾಗೂ ಜನರ ಶುಭಕೋರಿಕೆಯ ಫಲ,” ಎಂದು ಅವರು ಹೇಳಿದರು.
ಸಚಿವರ ಪ್ರತಿಕ್ರಿಯೆ
ಸಚಿವ ಮಧು ಬಂಗಾರಪ್ಪ ಮಾತನಾಡಿ, “ಈ ವರ್ಷ ಕರ್ನಾಟಕದ ಎಲ್ಲೆಡೆ ಮಳೆಯು ಸಮೃದ್ಧಿಯಾಗಿ ಸುರಿದಿದೆ. ನದಿಗಳು ಹರಿದು ರೈತರ ಮುಖದಲ್ಲಿ ಸಂತೋಷ ಮೂಡಿಸಿದೆ. ಕೃಷಿ ಚಟುವಟಿಕೆಗಳು ವೇಗವಾಗಿ ಮುಂದುವರಿಯುತ್ತಿವೆ. ಜಲಾಶಯಗಳು ತುಂಬಿದ ಪರಿಣಾಮ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಕರ್ತರು ಬಾಗಿನ ಅರ್ಪಣೆ ಕುರಿತು ಕೇಳಿದಾಗ ಸಚಿವರು ನಗುತ್ತಾ, “ಅಧಿಕಾರಿಗಳೇ ಈಗಾಗಲೇ ಬಾಗಿನ ಅರ್ಪಿಸಿದ್ದಾರೆ. ಆದ್ದರಿಂದ ಮತ್ತೆ ನಾವು ಮಾಡುವ ಅಗತ್ಯವಿಲ್ಲ. ಹಾಗೆ ನೋಡಿದರೆ ಅಧಿಕಾರಿಗಳು ಶೀಘ್ರದಲ್ಲೇ ವರ್ಗಾವಣೆ ಆಗುವ ಸಾಧ್ಯತೆ ಇದೆಯ ಎಂದು ಕೇಳಬೇಡಿ ಎಂದು ಅದಕ್ಕಾಗಿ ಬಾಗಿನ ಅರ್ಪಣೆಯ ಚಿಂತೆಯೇ ಇಲ್ಲ,” ಎಂದು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರು. ಅವರ ಈ ಉತ್ತರ ಕಾರ್ಯಕ್ರಮದಲ್ಲಿ ಹಾಜರಿದ್ದವರಲ್ಲಿ ನಗೆಯ ಚಟಾಕಿ ಮೂಡಿಸಿತು.
ಜಲಾಶಯದ ಮಹತ್ವಲಿಂಗನಮಕ್ಕಿ ಜಲಾಶಯ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದ್ದು, ರಾಜ್ಯದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತೀ ವರ್ಷ ಮಳೆಗಾಲದಲ್ಲಿ ಜಲಾಶಯ ತುಂಬಿದ ಬಳಿಕ ಗೇಟುಗಳನ್ನು ತೆರೆಯಲಾಗುತ್ತದೆ. ಇದರ ಪರಿಣಾಮವಾಗಿ ಶರಾವತಿ ನದಿ ಪ್ರವಾಹ ಹೆಚ್ಚಾಗುತ್ತಿದ್ದು, ಜೋಗ ಜಲಪಾತ ತನ್ನ ಸಂಪೂರ್ಣ ಸೌಂದರ್ಯವನ್ನು ತೋರಿಸುತ್ತದೆ. ಈ ಬಾರಿ ಕೂಡಾ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಸ್ಥಳೀಯರ ಸಂತೋಷಗೇಟುಗಳ ಉದ್ಘಾಟನೆ ಕಾರ್ಯಕ್ರಮವನ್ನು ನೋಡಲು ಅನೇಕ ಸ್ಥಳೀಯರು ಹಾಗೂ ರೈತರು ಹಾಜರಿದ್ದರು. ಮಳೆಯೊಂದಿಗೆ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಇಲ್ಲದಿರುವುದು ರೈತರಲ್ಲಿ ಹರ್ಷದ ಚಿಲುಮೆ ಮೂಡಿಸಿದೆ
Hydraulic data of Linganamakli Dam as on 24.08.2025@ 8:00hrs Present RL:1817.00ft (+0.10ft)
FRL : 1819.00 ft
Inflow :12568.00cusecs
Outflow
Penstocks:3589.09cusecs
Sluice :4417.00cusecs
Spillway : 604.00cusecs
Total discharge:8612.00cusecs
TD.L :1693.30ft
L.DPH Gen :27.12mw
Rainfall:3.6mm
Cum R.F :2761.6mm
Live Capacity: 144.95 tmc (95.58%)
Total Live Capacity:151.64 TMC
Last year details
Level :1816.70ft
Live capacity:143.71tmc(94.94%)
- TRf:3498.8mm