ಧರ್ಮಸ್ಥಳದ ವಿರುದ್ಧ ಪಿತೂರಿ – ವಿಶ್ವ ಹಿಂದೂ ಪರಿಷತ್ ಧ್ವನಿ.!

0
104
Oplus_2

ಶಿವಮೊಗ್ಗ : ಹಿಂದೂಗಳ ಧಾರ್ಮಿಕ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಸುವ್ಯವಸ್ಥಿತ ಪಿತೂರಿ ನಡೆಯುತ್ತಿರುವುದಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆರೋಪಿಸಿದೆ. ಹಿಂದೂಗಳ ಆಸ್ತಿಕತೆ, ಅಸ್ಮಿತೆ ಮೇಲೆ ಪ್ರಶ್ನೆ ಎದ್ದಾಗಲೆಲ್ಲಾ ಸಂಘಟನೆಗಳು ಸದಾ ಮುಂಚೂಣಿಯಲ್ಲಿ ನಿಂತಿರುವುದಾಗಿ ಹೇಳಿದರು.

ಶಿವಮೊಗ್ಗದ ಶ್ರೀ ಶೈಲಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಬೌದ್ಧಿಕ್ ರತ್ನಕುಮಾರ್ (ದಿಗಂಬರ ಜೈನ ಸಂಘ, ಸಹ ಕಾರ್ಯದರ್ಶಿ) ಮಾತನಾಡಿ, ಧರ್ಮ. ಮತ್ತು ಧರ್ಮಸ್ಥಳ “ನಮ್ಮ ರಾಜ್ಯದಲ್ಲಿ ರಾಜರಿಂದ ಹಿಡಿದು ಪಾಶ್ಚಾತ್ಯ ಆಡಳಿತಗಾರರ ಕಾಲಕ್ಕೂ ಮಠ-ಮಂದಿರಗಳೇ ಆಧ್ಯಾತ್ಮಿಕ ಶಕ್ತಿಕೇಂದ್ರವಾಗಿದ್ದವು. ಧರ್ಮಸ್ಥಳದಲ್ಲಿ ಇಂದು ಸಹ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿವೆ. ಜಾತಿ ಭೇದವಿಲ್ಲದೆ 400ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ, ವೈದಿಕೀಯ ಕಾಲೇಜು, ಸಮೂಹಿಕ ಮದುವೆ, ಕೆರೆ-ದೇವಾಲಯಗಳ ಅಭಿವೃದ್ಧಿ – ಇವುಗಳನ್ನು ನೋಡಿದರೆ ಸಮಾಜ ಸೇವೆಯ ಮಾದರಿ ಎಂದೇ ಹೇಳಬಹುದು” ಎಂದರು.

ಅವರು ಮುಂದುವರೆದು, “ಒಂದು ಕಾಲದಲ್ಲಿ ಪದ್ಮಲತಾ ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ನಂತರ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಯಿತು. ಆ ಘಟನೆಯನ್ನು ಹೆಗ್ಡೆ ಅವರ ಕುಟುಂಬದ ಮೇಲೆ ಹೊರೆಸಲು ಪ್ರಯತ್ನವಾಯಿತು. ಆದರೆ ಹಿರಿಯ ಪತ್ರಕರ್ತ ವಿಶ್ವೇಶ್ವರಯ್ಯ ಭಟ್ ಅವರ ಮಾತು ಪ್ರಸ್ತುತ – ಜನ ಮುಳ್ಳಿನ ಮರಕ್ಕೆ ಕಲ್ಲು ಹೊಡೆಯುವುದಿಲ್ಲ, ಹಣ್ಣಿನ ಮರಕ್ಕೆ ಮಾತ್ರ ಹೊಡೆಯುತ್ತಾರೆ – ಎಂಬುದು ಸತ್ಯವಾಗಿದೆ” ಎಂದರು.

ಇನ್ನೊಂದು ಕಡೆ ಧರ್ಮಸ್ಥಳದ ವಿರುದ್ಧ ದೂರು ನೀಡುತ್ತಿರುವ ಕೆಲವರ ಹಿನ್ನೆಲೆಯನ್ನೂ ಅವರು ಪ್ರಶ್ನಿಸಿದರು. “ತಿಮ್ಮರೋಡಿ ಸೋಮನಾಥ ನಾಯಕ ಸೇರಿದಂತೆ ಕೆಲವರು ಹಿಂದಿನಿಂದಲೇ ಜೈಲಿಗೆ ಹೋಗಿಬಂದವರು. ಅವರ ಆರ್ಥಿಕ ವ್ಯವಹಾರಗಳಲ್ಲಿ ನಷ್ಟವಾದಾಗಲೆಲ್ಲಾ ಹೆಗ್ಡೆ ಅವರ ವಿರುದ್ಧ ತಿರುಗಿಬೀಳುತ್ತಾರೆ. ಇವರಿಗೆ ಮೈಸೂರಿನ ಒಡಾನಡಿ ಸಂಸ್ಥೆಯ ಬೆಂಬಲವೂ ಇದೆ” ಎಂದು ಹೇಳಿದರು.

ಧರ್ಮಸ್ಥಳವು ಧಾರ್ಮಿಕ ಕೇಂದ್ರವಾಗಿರುವುದಷ್ಟೇ ಅಲ್ಲ, ಸಮಾಜಮುಖಿ ಕ್ರಿಯಾಶೀಲತೆಗಾಗಿ ಹೆಸರುವಾಸಿಯಾಗಿರುವುದರಿಂದ, ಇಂತಹ ಪಿತೂರಿಗಳಿಗೆ ಹಿಂದೂ ಸಮಾಜ ಬಲಿಯಾಗಬಾರದು. ನಮ್ಮ ಧಾರ್ಮಿಕ ಕ್ಷೇತ್ರವನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಇದರ ಸಲುವಾಗಿ ಕಾರ್ಯಕರ್ತರು  ಸಮೂಹಿಕ  ಶಿವಪಂಚಾಕ್ಷರಿ   ಓಂ ನಂ ಶಿವಯ ನಾಮ  ಪಠಿಸಿದರು. ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದು  ಸಭೆಯಲ್ಲಿ ಸಾಮಾಜಿಕ ಸಮರಸ್ಯ ಪ್ರಮುಖ ರಮೇಶ್ ಬಾಬು, ವಿಶ್ವ ಹಿಂದು ಪರಿಷದ ನಗರ ಅದ್ಯಕ್ಷರು ವಿನೋದ್ ಕುಮಾರಜೈನ್  ವಿಶ್ವ ಹಿಂದು ಪರಿಷದ ನಗರ ಕಾರ್ಯದರ್ಶಿ ಆನಂದ್ ರಾವ್ ಜಾದವ್, ಪ್ರಮುಕ ರಾಜೇಶ್ ಗೌಡ, ಪ್ರಶಾಂತ್ ಪುಟ್ಟು,  ಅಂಕುಶ್, ಸುರೇಶ್ ಬಾಬು ಮುಂತಾದವರು ಇದ್ದರು.