ಹಾರನಹಳ್ಳಿ ಹೋಬಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಶಿವಮೊಗ್ಗ-2 ತಾಲೂಕು ಘಟಕದ ವತಿಯಿಂದ ಕೊನಗವಳ್ಳಿ ಗ್ರಾಮದಲ್ಲಿ “ಯಾಂತ್ರಿಕೃತ ಭತ್ತ ಬೇಸಾಯ ಯಂತ್ರ ಶ್ರೀ” ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕೆ ನೆರವೇರಿತು. ಕಾರ್ಯಕ್ರಮವನ್ನು ಊರಿನ ಮುಖಂಡರಾದ ಶ್ರೀಯುತ ಹುಬ್ಬಳ್ಳಿ ನಾಗರಾಜ್ ಅವರು ಉದ್ಘಾಟಿಸಿದರು. ಸಿ.ಎಚ್.ಎಸ್.ಸಿ ದಾವಣಗೆರೆ ವಿಭಾಗದ ಜಿಲ್ಲಾ ನಿರ್ದೇಶಕ ಶ್ರೀಯುತ ಶೇಖರ್ ಗೌಡ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಯಾಂತ್ರೀಕೃತ ಕೃಷಿಯ ಮಹತ್ವ ಕುರಿತು ರೈತರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ತಾಲೂಕು ಯೋಜನಾಧಿಕಾರಿ ಶ್ರೀಯುತ ಉಲ್ಲಾಸ್ ಮೆಸ್ತ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ “ಯಂತ್ರ ಶ್ರೀ” ಯೋಜನೆಯ ಪ್ರಯೋಜನಗಳನ್ನು ವಿವರಿಸಿದರು. ದಾವಣಗೆರೆ ವಿಭಾಗದ ಸಿ.ಎಚ್.ಎಸ್.ಸಿ ಆಡಳಿತ ಯೋಜನಾಧಿಕಾರಿ ಶ್ರೀಯುತ ಜಯಂತ, ಸ್ಥಳೀಯ ರೈತರಾದ ಶ್ರೀಯುತ ಸದಾಶಿವ ಹಾಗೂ ಶ್ರೀಯುತ ಅಶೋಕ್ ಅವರು ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಕೃಷಿ ಅಧಿಕಾರಿ ಶ್ರೀ ರಾಘವೇಂದ್ರ ಆಚಾರ್ಯ ನಿರ್ವಹಿಸಿದರು. ಆಯನೂರು ಸಿ.ಎಚ್.ಎಸ್.ಸಿ ಕೃಷಿ ಯಂತ್ರ ದಾರೆ ಮ್ಯಾನೇಜರ್ ಶ್ರೀಯುತ ದಿನೇಶ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಶ್ರೀಯುತ ಸುರೇಶ್, ಸೇವಾ ಪ್ರತಿನಿಧಿ ಅಕ್ಕಮ್ಮ ಹಾಗೂ ಸ್ಥಳೀಯ ಊರಿನ ಗಣ್ಯರು, ಮುಖಂಡರು ಮತ್ತು ಅನೇಕ ರೈತರು ಹಾಜರಿದ್ದರು. ಯಂತ್ರ ಶ್ರೀ ಕಾರ್ಯಕ್ರಮದಡಿ, ರೈತರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಶ್ರಮದಲ್ಲಿ ಭತ್ತ ನಾಟಿಮಾಡುಲು ಸಹಾಯಕವಾಗುವ ನವೀನ ಯಂತ್ರೋಪಕರಣಗಳನ್ನು ಪರಿಚಯಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಭತ್ತ ನೆಡುವಿಕೆ ಮತ್ತು ಇತರ ಹಂತಗಳ ಯಾಂತ್ರೀಕೃತ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಸ್ಥಳದಲ್ಲಿಯೇ ಪ್ರದರ್ಶಿಸಲಾಯಿತು. ಸ್ಥಳೀಯ ರೈತರು ಕಾರ್ಯಕ್ರಮವನ್ನು ಮೆಚ್ಚಿ, ಇಂತಹ ತಾಂತ್ರಿಕ ಮಾರ್ಗದರ್ಶನ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ನಿರಂತರವಾಗಿ ನಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು