ಶಿವಮೊಗ್ಗ ದಸರಾ ದಿನ ಜನಿಸಿದ ಹೆಣ್ಣಾನೆ ಮರಿಗೆ ಇಂದು ಇಟ್ಟ ಹೆಸರೆನು.!?

0
38

ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆ – ಸಂರಕ್ಷಣಾ ಸಂದೇಶದೊಂದಿಗೆ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಟಿ ಹನುಮಂತಪ್ಪ  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ನವರ ನುಡಿ,

ಶಿವಮೊಗ್ಗ ಜಿಲ್ಲೆ, ಸಕ್ರೆಬೈಲು ಗ್ರಾಮದಲ್ಲಿರುವ ತುಂಗಾ ನದಿಯ ತೀರದ ಸಕ್ರೆಬೈಲು ಆನೆ ಬಿಡಾರವು, ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಆನೆಗಳ ಜೀವನ ಕ್ರಮ, ಸಂರಕ್ಷಣೆಯ ಅಗತ್ಯತೆ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮದ ಮಹತ್ವ .

ಈ ಸ್ಥಳದಲ್ಲಿ, ಪ್ರತಿವರ್ಷ ಅನೇಕ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುವ ಕಾಡಾನೆಗಳನ್ನು ಸೆರೆ ಹಿಡಿದು ಪಳಗಿಸುವುದು, ಹಾಗೂ ಶಿವಮೊಗ್ಗ ದಸರಾ ಹಬ್ಬದಲ್ಲಿ ಪಳಗಿದ ಆನೆಗಳನ್ನು ಅಂಬಾರಿ ಹೊರಲು ಬಳಸುವುದು ಈ ಶಿಬಿರದ ಮುಖ್ಯ ಕಾರ್ಯವಾಗಿದೆ.

ಈ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿದ್ದು, 22 ಪಳಗಿದ ಆನೆಗಳಲ್ಲಿ 16 ಗಂಡಾನೆಗಳು, 2 ಹೆಣ್ಣಾನೆಗಳು ಮತ್ತು 1 ಮಕನ ಆನೆಗಳಿವೆ. ಉಳಿದ 3 ಕಾಡಾನೆಗಳನ್ನು ಕ್ರಾಲ್‌ಗಳಲ್ಲಿ ಪಳಗಿಸಲಾಗುತ್ತಿದೆ. ಬಿಡಾರದಲ್ಲಿ ಜನಿಸಿದ 2 ಆನೆ ಮರಿಗಳಿಗೆ ಇತ್ತೀಚೆಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ನೇತ್ರಾ ಹೆಣ್ಣಾನೆಗೆ 23/10/2023ರಂದು ಶಿವಮೊಗ್ಗ ದಸರಾ ದಿನ ಜನಿಸಿದ ಹೆಣ್ಣಾನೆ ಮರಿಗೆ “ಚಾಮುಂಡಿ” ಎಂಬ ಹೆಸರು, ಹಾಗೂ ಭಾನುಮತಿ ಹೆಣ್ಣಾನೆಗೆ 04/11/2023ರಂದು ಜನಿಸಿದ ಹೆಣ್ಣಾನೆ ಮರಿಗೆ “ತುಂಗಾ” ಎಂಬ ಹೆಸರು ನಾಮಕರಣ ಮಾಡಲಾಗಿದೆ.

2025ರ ವಿಶ್ವ ಆನೆ ದಿನಾಚರಣೆ ಆಗಸ್ಟ್ 12ರಂದು ಜಾಗತಿಕ ಮಟ್ಟದಲ್ಲಿ “ಮಾತೃ ಪಕ್ಷಗಳು ಮತ್ತು ನೆನಪುಗಳು” ಎಂಬ ಧ್ಯೇಯವಾಕ್ಯದೊಂದಿಗೆ ಸಕ್ರೆಬೈಲು ಆನೆ ಬಿಡಾರದಲ್ಲಿ   ವಿಶ್ವ ಆನೆ ದಿನಾಚರಣೆ  ಈ ದಿನದ ಅಂಗವಾಗಿ ಭಾರತೀಯ ಅಂಚೆ ಸೇವೆಯೊಂದಿಗೆವಿ ಶೇಷ ಪೋಸ್ಟಲ್ ಲಕೋಟಿಯನ್ನು ಬಿಡುಗಡೆ ಮಾಡಿ ದಿನದ ಸ್ಮರಣಾರ್ಥವಾಗಿಸಿದೆ.

ಆನೆ ಸಂರಕ್ಷಣೆಯ ಅಗತ್ಯತೆ, ಮಾನವ-ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಸಂದೇಶವನ್ನು ಹಬ್ಬಿಸಲು, ಈ ವರ್ಷ ಹಲವು ಜಾಗೃತಿ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ.ವಿಶೇಷವಾಗಿ ಕಾಡಂಚಿನ ಸಮುದಾಯಗಳು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣಾತ್ಮಕ ಚಟುವಟಿಕೆಗಳು ನಡೆದವು ಎಂದು ತಿಳಿಸಿದರು.

ಪ್ರಸನ್ನ ಕೃಷ್ಣ ಪಟಗಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ನುಡಿ. ಹಿರಿಯ ಹೆಣ್ಣು ಆನೆ  ಎಲ್ಲಿ ಆಹಾರ ಸಿಗುತ್ತದೆ ಎಂದು ನೆನಪುಇಟ್ಟಿಕೋಂಡು  ತಮ್ಮಮಾತೃಪಕ್ಷದಇಡಿಟೀಮ್‌  ಹೇಗೆ ನೀಬಯಿಸುತ್ತದೆ ವಿವರಿಸಿದರು ಹಾಗೂ ಮಕ್ಕಳಿಗೆ ಆನೆ ಸಂರಕ್ಷಣೆ ಕುರಿತ ಕಲಾತ್ಮಕ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳು ನಡೆಯುತ್ತಿವೆ:

ಚಿತ್ರಕಲೆ ಸ್ಪರ್ಧೆ –

ನಮ್ಮ ಅರಣ್ಯಗಳ ನಮನೀಯ ದೈತ್ಯರು,

ಆನೆಗಳಿರುವ ನನ್ನ ಕನಸಿನ ಅರಣ್ಯ

ಪ್ರಬಂಧ ಲೇಖನ ಸ್ಪರ್ಧೆ

ದೈತ್ಯರೊಂದಿನ ಬದುಕು:

ಮಾನವ-ಆನೆ ಸಂಘರ್ಷ, ಸಮೃದ್ಧ ಅರಣ್ಯಕ್ಕಾಗಿ ಆನೆಗಳ ಪಾತ್ರ

ಪೋಸ್ಟರ್ ರಚನೆ ಸ್ಪರ್ಧೆ

ಪ್ರಬಂಧ ವಿಷಯಗಳ ಆಧಾರದ ಮೇಲೆ ಸಂರಕ್ಷಣಾ ಸಂದೇಶಗಳಿರುವ ಸೃಜನಾತ್ಮಕ ಪೋಸ್ಟರ್‌ಗಳ ವಿನ್ಯಾಸ ವಿಜೇತರಿಗೆ ಬಹುಮಾನ ವಿತರಣೆಯೊಂದಿಗೆ ದಿನದ ಕೊನೆಯಲ್ಲಿ ಆನೆ ಬಿಡಾರದ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ಸಂರಕ್ಷಣಾ ಪ್ರಮಾಣ ವಚನವನ್ನು ಎಲ್ಲರಿಗೂ ಬೋಧಿಸಿದರು.