ಶಿವಮೊಗ್ಗ ಜಿಲ್ಲೆಯಲ್ಲಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದಿರುವ ಅಪಪ್ರಚಾರ ಮತ್ತು ಸುಳ್ಳು ಆರೋಪಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಗೋಪಿ ಸರ್ಕಲ್‌ನಿಂದ ಡಿಸಿ ಕಚೇರಿವರೆಗೆ ನಡೆದ ಈ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ ಅನಾಮಿಕ ಮಾತಿಗೆ ಹೆಣಗಳ ಅವಶೇಷ” ವಿಷಯದ ಸುಳ್ಳು ಪ್ರಚಾರವನ್ನು ಖಂಡಿಸಿದರು.
ವೇದಿಕೆಯಲ್ಲಿ ಮುಖಂಡ ಸಪ್ಪಗುಡ್ಡೆ ರಾಘವೇಂದ್ರ ಮಾತನಾಡಿ ಈ ರೀತಿಯ ಅವಹೇಳನ ಮಾಡಿದರೆ ಒಂದು ಕೋಟಿ ಜನರನ್ನು ಕಣಕ್ಕಿಳಿಸಿ ಪ್ರತಿಭಟನೆ ಮಾಡುತ್ತೇವೆ. ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ತಕ್ಷಣ ನಿಲ್ಲಬೇಕು” ಎಂದು ಎಚ್ಚರಿಸಿದರು. ಅವರು, ಕೆಲ ಯೂಟ್ಯೂಬರ್‌ಗಳು ಮತ್ತು ಕೆಲಸವಿಲ್ಲದ ಅನಾಮಿಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಇ. ಮಾತನಾಡುತ್ತಾ “ಅನಾಮಿಕ ವ್ಯಕ್ತಿ 100 ಹೆಣ ಹೂಳಿದ್ದೇನೆ ಎಂದು ಹೇಳಿದ್ದಾನೆ. ಇಂತಹ ಹೇಳಿಕೆಗಳಿಗೆ ಅರಣ್ಯ ಇಲಾಖೆ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು” ನಾಳೆ ಸಿಎಂ ಮನೆ ಕೆಳಗೆ ಹೆಣ ಹೂಳಿದ್ದೇನೆ ಎಂದರೆ ಅದನ್ನೂ ಅಗೆಸುತ್ತೀರಾ?, “ಒಂದು ಹತ್ತು ಹೆಣ ಸಿಕ್ಕಿದರೆ ರಾಜ್ಯದ ಪ್ರತಿ ಮನೆಯನ್ನೂ ಅಗೆಸುತ್ತೀರಾ? ಹೆಗಡೆ ಕುಟುಂಬವು ಸಾವಿರಾರು ಜನರಿಗೆ ಉದ್ಯೋಗ ಒದಗಿಸಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. “ಸರ್ಕಾರ ಧರ್ಮಸ್ಥಳವನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದರೆ ಅದು ತಾಳಲಾಗುವುದಿಲ್ಲ” ಎಂದು ಎಚ್ಚರಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ್ ಟಿ., ಅಜಯ್ ಅಂಚನ್ ಎಂಬವರು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ಇವರ ಹಣಕಾಸಿನ ಮೂಲಗಳ ಕುರಿತು ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ವೇದಿಕೆ, ಈಗಿರುವ ಎಸ್‌ಐಟಿ ತಂಡ ಅಥವಾ ಹೊಸ ತನಿಖಾ ಸಮಿತಿ ರಚಿಸಿ ಶೀಘ್ರ ತನಿಖೆ ನಡೆಸಿ, ಧರ್ಮಸ್ಥಳ ಕ್ಷೇತ್ರದ ಗೌರವವನ್ನು ಕಾಪಾಡಬೇಕೆಂದು ಆಗ್ರಹಿಸಿದೆ.