ಸಾಲಗಾರರ ಕಿರುಕುಳಕ್ಕೆ ಯಶವಂತ ನಾಯ್ಕ ಆತ್ಮಹತ್ಯೆ ಆರೋಪ.!?

0
357
Oplus_0

ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಸೇರಿದಂತೆ ಹಲವರ  ಮೇಲೆ ಆರೋಪ.!

ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಯುವಕನ ಆತ್ಮಹತ್ಯೆ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆಯ ಆಂತರಿಕ ಆರ್ಥಿಕ ಸಂಕಷ್ಟ ಮತ್ತು ಸಾಲಗಾರರ ನಿರಂತರ ಕಿರುಕುಳದಿಂದ ಮಾನಸಿಕವಾಗಿ ತತ್ತರಿಸಿದ್ದ ಯುವಕ ಯಶವಂತ ನಾಯ್ಕ (24), ಈ ದಿನ ಮಧ್ಯಾಹ್ನ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಖಲಾಗಿದೆ.

ಮೃತ ಯಶವಂತನಾಯ್ಕ ಬಿನ್ ರುಪ್ಲನಾಯ್ಕ ಎಂಬವರ ಪುತ್ರ ಕುಟುಂಬದ ಹೇಳಿಕೆಯಂತೆ, ಯಶವಂತನು ಮುತ್ತೂಟ್ ಪಿನ್ ಕಾರ್ಪ್ ಹೋಮ್ ಲೋನ್ ಫೈನಾನ್ಸ್ ಕಂಪನಿಯಿಂದ ತೆಗೆದುಕೊಂಡಿದ್ದ ಸಾಲವನ್ನು ತೀರಿಸಲು ಆಗದೆ ಚಿಂತಕ್ರಾಂತನಾಗಿ ಸಿಲುಕಿದ್ದ.

ಹಣ ತೀರಿಸದ ಯಶವಂತ ನಾಯ್ಕನ ಮನೆಗೆ ಬಂದು  ಫೈನಾನ್ಸ್ ಕಂಪನಿಯ ಸಿಬ್ಬಂದಿಯಾದ ಸಂದೀಪ್, ವಿನಯ್, ಲೋಹಿತ್ ಮತ್ತು ಗಣೇಶ್ ಎಂಬವರು ನಿರಂತರವಾಗಿ ಹಾಗೂ  ಫೋನ್‌ಗಳಲ್ಲಿ,  ಕಿರುಕುಳ ನೀಡುತ್ತಿದ್ದರೆಂಬ ಆರೋಪ.

ಇದಲ್ಲದೆ, ನಾರಾಯಣಪುರದ ಸುನಿಲ್ ನಾಯ್ಕ ಎಂಬ ಸ್ಥಳೀಯ ವ್ಯಕ್ತಿಯೂ ಸಾಲದ ಮೊತ್ತಕ್ಕೆ ಸಂಬಂಧಿಸಿದಂತೆ ಯಶವಂತನಿಗೆ ಕಿರುಕುಳ ನೀಡುತ್ತಿದ್ದ. “ನೀನು ಸಾಲ ತೀರಿಸಲಾಗದಿದ್ದರೆ ಚಿಡ್ಡಿ ಬನಿನು” ನಲ್ಲಿ  ನೇಣು ಹಾಕಿಕೋ  ಎಂಬ ಅವಮಾನಕಾರಿ ಮಾತುಗಳಿಂದ ಯಶವಂತನ ಮೇಲೆ ಗಂಭೀರ ಮಾನಸಿಕ ಒತ್ತಡ ಸೃಷ್ಟಿಸಿದ್ದವು ಎಂದು ಆರೋಪಿಸಿ

ತಂದೆ ರೂಪನಾಯ್ಕ ನೀಡಿದ ದೂರಿನ ಮೇರೆಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ನಂ. 206/2025 ಅನ್ವಯವಾಗಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 352 (ಹಲ್ಲೆ), 108 (ಆತ್ಮಹತ್ಯೆಗೆ ಪ್ರೇರಣೆ), 190(ಬಿ) ಮತ್ತು ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮ ತಡೆ ಸುಗ್ರೀವಾಜ್ಞೆ-2025ರ ಸೆಕ್ಷನ್ 08 ಮತ್ತು 13ರಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಈ ಮಧ್ಯೆ ಘಟನೆಯು ಗ್ರಾಮದಲ್ಲಿ ಆಕ್ರೋಶದ ಹೊಳೆ. “ಸಾಲ ಕೊಡುವ ಹೆಸರಿನಲ್ಲಿ ಯುವಕರ ಜೀವನವನ್ನೇ ನಾಶ ಮಾಡುತ್ತಿದ್ದಾರೆ ಈ ಖಾಸಗಿ ಫೈನಾನ್ಸ್ ಕಂಪನಿಗಳು. ಸರ್ಕಾರ ಇಂತಹ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು” ಎಂಬ ಸಾರ್ವಜನಿಕ ಅಭಿಪ್ರಾಯಗಳು ಮೂಡಿದ್ದು ಪೊಲೀಸರು ಈ ಕುರಿತು ಪೂರ್ಣ ತನಿಖೆ ಕೈಗೊಂಡಿದ್ದು, ಅಕ್ರಮ ಹಣ ವಸೂಲಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.