ಕಾರ್ಮಿಕ ಸಚಿವರಿಂದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ.!

0
79

ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಇವರು ಸೋಮವಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರದಲ್ಲಿ ರೂ.29.5 ಕೋಟಿ‌ ವೆಚ್ಚದಲ್ಲಿ  ನೂತನವಾಗಿ‌ ನಿರ್ಮಿಸಲಾಗಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆಗೊಳಿಸಿದರು.

ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸುರಕ್ಷಿತವಾಗಿ ತಂಗಲು ಅವರಿಗೆ ಈ ವಸತಿ ಸಮುಚ್ಚಯವನ್ನು ಮಂಡಳಿ ವತಿಯಿಂದ ಈ ಸಮುಚ್ಚಯವನ್ನು ನಿರ್ಮಿಸಲಾಗಿದೆ. ೨೦೨೨ ರ ಜೂನ್ ಮಾಹೆಯಲ್ಲಿ‌ಕಾಮಗಾರಿ ಆರಂಭಗೊಂಡಿತ್ತು.

*ಶ್ರಮಿಕ ತಾತ್ಕಾಲಿಕ ಸಮುಚ್ಚಯ ವಿವರ*:

10 ಎಕರೆ ಪ್ರದೇಶದಲ್ಲಿ  ವಸತಿ ನಿಲಯಗಳು ಮತ್ತು ವಸತಿ ಗೃಹಗಳನ್ನು‌ನಿರ್ಮಿಸಲಾಗಿದೆ.

ಒಟ್ಟು 03 ವಸತಿ ನಿಲಯ ಬ್ಲಾಕ್ಗಳು ಇದ್ದಯ,  ಪ್ರತಿ ಬ್ಲಾಕ್ ನಲ್ಲಿ 11  ಡಾರ್ಮಿಟರಿಗಳಿವೆ. ಪ್ರತಿ ಡಾರ್ಮೆಟರಿಯಲ್ಲಿ 24 ವಸತಿ ಸಾಮರ್ಥ್ಯ ಇದೆ. ಪ್ರತಿ ಬ್ಲಾಕ್ ನ ವಸತಿ ಸಾಮರ್ಥ್ಯ  264 ಇದ್ದು ಒಟ್ಟು 03 ಬ್ಲಾಕ್ ಗಳ ವಸತಿ ಸಾಮರ್ಥ್ಯ 792 ಇದೆ.

     ಹಾಗೂ 03 ವಸತಿ ಗೃಹ ಬ್ಲಾಕ್ ಗಳನ್ನು ನಿರ್ಮಿಸಿದ್ದು, ಪ್ರತಿ ಬ್ಲಾಕ್ ನಲ್ಲಿ  12 ಫ್ಲಾಟ್ ಗಳು, ಒಟ್ಟು 36 ಫ್ಲಾಟ್ ಗಳು, 144 ವಸತಿ ಸಾಮರ್ಥ್ಯ ಇದ್ದು, 01ಬಿಹೆಚ್ ಕೆವಿಸ್ತೀರ್ಣ 400 ಚ. ಅಡಿ ಇದೆ.

oplus_2

ಸುಸಜ್ಜಿತವಾದ ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿಗಾಗಿ ಸೋಲಾ‌ರ್ ಪ್ಯಾನಲ್‌ ವ್ಯವಸ್ಥೆ ಇದೆ. ಡಾರ್ಮಿಟರಿಗಳಲ್ಲಿ 02 ಹಂತದ ಬಂಕರ್ ಬೆಡ್ ಗಳನ್ನು ನೀಡಲಾಗಿರುತ್ತದೆ. ಆವರಣದಲ್ಲಿ ಆಡಳಿತ ಕಚೇರಿ ಇದೆ.

ವಸತಿ ಸೌಕರ್ಯ ಪಡೆಯಲು ಒಂದು ದಿನಕ್ಕೆ ರೂ.50/-ಗಳ ಶುಲ್ಕ ವಸತಿ ಸಮುಚ್ಚಯವನ್ನು‌ ಲೋಕಾರ್ಪಣೆಗೊಳಿಸಿದ ನಂತರ ಪರಿವೀಕ್ಷಿಸಿದರು. ಈ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಶ್ರಿಮತಿ  ಶಾರದಾ ಪೂರ್ಯಾನಾಯ್ಕ,

ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಡಾ.ಧನಂಜಯ ಸರ್ಜಿ, ಕಾಂಗ್ರೆಸ್ ಪ್ರಮುಕ ಹೆಚ್.ಸಿ ಯೋಗೆಶ್, ಇತರೆ ಮುಖಂಡರು,ಉಪಸ್ಥಿತರಿದ್ದರು

ಸಿದ್ಲಿಪುರ  ಸಾರ್ವಜನಿಕರು ಗ್ರಾಮದ ಸರ್ವೆ ನಂ:6 ಮತ್ತು 28 ರಲ್ಲಿನ ಸರ್ಕಾರಿ ಜಮೀನಿನಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರಾದ ನಮ್ಮ ಜಮೀನನ್ನು ಕೈಗಾರಿಕೆಗಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದು, ಆದರೆ ಇದುವರೆಗೂ ಪರಿಹಾರ ನೀಡಿಲ್ಲ.  ಈ ಬಗ್ಗೆ ಜರೂರಾಗಿ ಕ್ರಮ ಕೈಗೊಂಡು ನಮಗೆ ಪರಿಹಾರ ನೀಡುವಂತೆ ಕೋರಿ ಮನವಿ ನೀಡಿದರು.